ಅಮೆರಿಕದಲ್ಲಿ ವಿಶ್ವಕ್ಕೆ ಸ್ವಚ್ಛತೆಯ ಪಾಠ ಮಾಡಿದ ಜಪಾನ್ ಫ್ಯಾನ್ಸ್
23ನೇ ಆವೃತ್ತಿಯ ಫುಟ್ಬಾಲ್ ಆರಂಭವಾಗಿದೆ. ಒಟ್ಟಾರೆ 48 ದೇಶಗಳು ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಈ ಬಾರಿಯ ಫಿಫಾ ವಿಶ್ವಕಪ್ ಅನ್ನು ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ದೇಶಗಳು ಆಯೋಜಿಸುತ್ತಿವೆ. ಈ ವಿಶ್ವಕಪ್‌ನಲ್ಲಿ ಈಗಾಗಲೇ ಹಲವು ತಂಡಗಳು ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿದಿವೆ. ಏಷ್ಯಾದ ಜಪಾನ್ ಸಹ ಫುಟ್ಬಾಲ್ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದೆ.
ಜಪಾನ್ ಎಫ್ ಗುಂಪಿನ ಪಂದ್ಯದಲ್ಲಿ ನೆದರ್‌ಲ್ಯಾಂಡ್ ತಂಡವನ್ನು ಸೋಮವಾರ ಎದುರಿಸಿತು. ಈ ಪಂದ್ಯದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ನಿಗದಿತಿ ಸಮಯದಲ್ಲಿ ಎರಡೂ ತಂಡಗಳ ತಲಾ 2 ಗೋಲು ಬಾರಿಸಿದ್ದರಿಂದ ಪಂದ್ಯ ಡ್ರಾ ಆಯಿತು. ಈ ಪಂದ್ಯ ಜಪಾನಿನ ಆಟಗಾರರು ಮತ್ತು ಅವರ ಅಭಿಮಾನಿಗಳ ಕಾರಣದಿಂದಾಗಿ ಎಲ್ಲರ ಗಮನ ಸೆಳೆದಿದೆ.

ನೆದರ್‌ಲ್ಯಾಂಡ್ ವಿರುದ್ಧ ಜಪಾನ್ ಕೆಚ್ಚೆದೆಯ ಪ್ರದರ್ಶನ ನೀಡಿ ಗಮನ ಸೆಳೆಯಿತು. ಆದರೆ ಪಂದ್ಯ ಮುಗಿದ ಬಳಿಕ ಜಪಾನ್ ಅಭಿಮಾನಿಗಳ ವರ್ತನೆ ನಿಜಕ್ಕೂ ಎಲ್ಲರ ಗಮನ ಸೆಳೆದಿದೆ. ಜಪಾನಿನ ಅಭಿಮಾನಿಗಳು ಸ್ಟ್ಯಾಂಡ್‌ಗಳಲ್ಲಿ ಕಸವನ್ನು ಸಂಗ್ರಹಿಸಲು ಪ್ರಾರಂಭಿಸಿದರು.
ಮೈದಾನ ಶುಚಿಗೊಳಿಸಿದ ಫ್ಯಾನ್ಸ್
ನೆದರ್‌ಲ್ಯಾಂಡ್ ವಿರುದ್ಧದ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಜಪಾನ್ ಅಭಿಮಾನಿಗಳು ಕೈಗೆ ಕೈಗವಸು ಹಾಕಿಕೊಂಡು. ನೀಲಿ ಪ್ಲ್ಯಾಸ್ಟಿಕ್ ಚೀಲವನ್ನು ಹಿಡಿದು ಪ್ರೇಕ್ಷಕರ ಗ್ಯಾಲರಿಯಲ್ಲಿ ಅಡ್ಡಾಡಿ ಕಸ ಸಂಗ್ರಹಿಸಲು ಆರಂಭಿಸಿದರು. ಜಪಾನ್ ಅಭಿಮಾನಿಗಳು ಮೈದಾನದಲ್ಲಿ ಕಸವನ್ನು ಎತ್ತುತ್ತಿರುವ ದೃಶ್ಯ ಸಖತ್ ವೈರಲ್ ಆಗುತ್ತಿದೆ. ಈ ಪಂದ್ಯ ಅಮೆರಿಕದ ಡಲ್ಲಾಸ್‌ನಲ್ಲಿ ಆಯೋಜಿಸಲಾಗಿತ್ತು.

ಜಪಾನಿನ ಫುಟ್‌ಬಾಲ್ ಅಭಿಮಾನಿಗಳು ಈ ಹಿಂದೆ ಪಂದ್ಯಗಳ ನಂತರ ಕ್ರೀಡಾಂಗಣದಿಂದ ಕಸವನ್ನು ಈ ರೀತಿ ಸ್ವಚ್ಛಗೊಳಿಸಿದ್ದಾರೆ. 2022 ರ ಫಿಫಾ ವಿಶ್ವಕಪ್‌ನಲ್ಲಿ ಜರ್ಮನಿ ವಿರುದ್ಧದ ಗೆಲುವಿನ ನಂತರ, ಜಪಾನಿನ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಇದೇ ರೀತಿಯ ಕಾರ್ಯವನ್ನು ಮಾಡಿದ್ದರು.
ಒಂದು ಹಂತದಲ್ಲಿ ನೆದರ್‌ಲ್ಯಾಂಡ್ಸ್ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಜಪಾನ್ ಆಟಗಾರರು ಅಮೋಘ ಪ್ರದರ್ಶನ ನೀಡಿ ಗೋಲು ಬಾರಿಸಿದರು. ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.
ಅಟಾರಿಮಾಯ್ ತತ್ವ ಪಾಲನೆ
ಜಪಾನಿನಲ್ಲಿ ಬೌದ್ಧ ಧರ್ಮದ ಅನುಯಾಯಿಗಳು ಹೆಚ್ಚಾಗಿದ್ದಾರೆ. ಇವರ ಭಾಷೆಯಲ್ಲಿ 'ಅಟಾರಿಮಾಯ್' ಎಂದರೆ "ಸ್ವಾಭಾವಿಕವಾಗಿ ಮಾಡಬೇಕಾದ ಕೆಲಸ. ಯಾರೋ ಹೇಳಬೇಕು, ಪ್ರಶಂಸೆಗೆ ಒಳಗಾಗಬೇಕು ಎಂದು ಅಲ್ಲಿಯ ನಾಗರಿಕರು ಬಯಸದೆ, ಮಾಡುತ್ತಾರೆ. ತಾವಿದ್ದ ಜಾಗವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬ ನಾಗರಿಕನ ಕನಿಷ್ಠ ಕರ್ತವ್ಯ ಎಂಬುದು ಅವರ ನಂಬಿಕೆ. ಅಶುದ್ಧತೆ ಅಥವಾ ಕೊಳಕು ಇರುವೆಡೆ ನಕಾರಾತ್ಮಕ ಶಕ್ತಿ ಇರುತ್ತದೆ, ಸ್ವಚ್ಛತೆ ಇರುವಲ್ಲಿ ದೈವಿಕ ಶಕ್ತಿ ಇರುತ್ತದೆ ಎಂದು ಅವರು ನಂಬುತ್ತಾರೆ. ವಿಶ್ವಕಪ್‌ನಂತಹ ಜಾಗತಿಕ ವೇದಿಕೆಯಲ್ಲಿ ದೇಶದ ರಾಯಭಾರಿಗಳು ಎಂಬ ಪ್ರಜ್ಞೆ ಜಪಾನಿ ಅಭಿಮಾನಿಗಳಿಗೆ ಇರುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications