
ಈ ಬಾರಿಯ ಐಪಿಎಲ್‌ನಲ್ಲಿ ಆರಂಭದಲ್ಲಿ ಕೆಲ ಪಂದ್ಯಗಳಲ್ಲಿ ಕಳಪೆ ಪ್ರದರ್ಶನದ ನಂತರ ಅದ್ಭುತವಾಗಿ ಆಡುತ್ತಿರುವ ಹೈದರಾಬಾದ್ ತಂಡ ಭಾನುವಾರ ಕ್ವಾಲಿಫೈರ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಡೆಲ್ಲಿ ವಿರುದ್ಧ ನಡೆಯುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ದೀಪ್‌ದಾಸ್ ಗುಪ್ತಾ ಹೈದರಾಬಾದ್ ತಂಡದಲ್ಲಿನ ಈ ಬಾರಿಯ ಐಪಿಎಲ್‌ನಲ್ಲಿನ ಬಲು ದೊಡ್ಡ ಬದಲಾವಣೆಯನ್ನು ಹೇಳಿದ್ದಾರೆ.
ಐಪಿಎಲ್‌ನ ಈ ಬಾರಿಯ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಸಕಾರಾತ್ಮಕ ಬದಲಾವಣೆಗೆ ಓರ್ವ ಆಟಗಾರನ ಆಗಮನ ಕಾರಣ ಎಂದಿದ್ದಾರೆ ದೀಪ್‌ದಾಸ್ ಗುಪ್ತ. ಅದು ಬೇರೆ ಯಾರೂ ಅಲ್ಲ. ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್. ಟೂರ್ನಿಯಲ್ಲಿ ಹೋಲ್ಡರ್ ಹೈದರಾಬಾದ್ ತಂಡವನ್ನು ಸೇರಿಕೊಂಡಿದ್ದು ತಂಡದಲ್ಲಾದ ಸಕಾರಾತ್ಮಕ ಸಂಗತಿಯಾಗಿದೆ ಎಂದಿದ್ದಾರೆ.
ಜೇಸನ್ ಹೋಲ್ಡರ್ ಅವರನ್ನು ಟೆಸ್ಟ್‌ನಲ್ಲಿ ಮಾತ್ರವಲ್ಲದೆ ಮೂರೂ ಮಾದರಿಗಳಲ್ಲಿ ಅಗ್ರ ಆಲ್‌ರೌಂಡರ್ ಎಂದು ಪರಿಣಮಿಸದಿರುವ ಬಗ್ಗೆ ದೀಪ್‌ದಾಸ್ ಗುಪ್ತ ಆಶ್ಚರ್ಯವನ್ನು ವ್ಯಕ್ತಪಡಿಸಿದರು. ಬೆನ್ ಸ್ಟೋಕ್ಸ್ ಅವರಂತೆ ಹೋಲ್ಡರ್ ಸ್ಕೋಟಕ ಬ್ಯಾಟ್ಸ್‌ಮನ್ ಆಗದಿರಬಹುದು ಆದರೆ ಆತ ಓರ್ವ ವಿಶ್ವಾಸಾರ್ಹ ಆಲ್‌ರೌಂಡರ್ ಎಂದಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಪರವಾಗಿ ಹೋಲ್ಡರ್ 2019ರ ಡಿಸೆಂಬರ್‌ನಲ್ಲಿ ಕೊನೆಯ ಟಿ20 ಪಂದ್ಯವನ್ನು ಆಡಿದರು. ಜೊತೆಗೆ ಈ ಬಾರಿಯ ಕೆರೆಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಬಾರ್ಬಡೋಸ್ ಟ್ರಿಡೆಂಟ್ಸ್ ತಂಡವನ್ನು ಮುನ್ನಡೆಸಿದ್ದ ಹೋಲ್ಡರ್ 10 ವಿಕೆಟ್ ಹಾಗೂ 192 ರನ್ ಗಳಿಸಿದ್ದರು.
ಆದರೆ ಐಪಿಎಲ್‌ನಲ್ಲಿ ಹೋಲ್ಡರ್ 2016 ಹೊರಗುಳಿದಿದ್ದರು. ಕಳೆದ ವರ್ಷಾಂತ್ಯದಲ್ಲಿ ನಡೆದ ಹರಾಜಿನಲ್ಲೂ ಬಿಕರಿಯಾಗದರೆ ಉಳಿದಿದ್ದ ಹೋಲ್ಡರ್ ಈ ಬಾರಿ ಹೈದರಾಬಾದ್ ತಂಡದ ಪರವಾಗಿ ಕಣಕ್ಕಿಳಿಯಬೇಕಿದ್ದ ಶಾನ್ ಮಾರ್ಶ್ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ಕಾರಣ ಹೈದರಾಬಾದ್ ತಂಡಕ್ಕೆ ಸೇರಿಕೊಂಡಿದ್ದರು.