Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಇಂಗ್ಲೆಂಡ್: ಇಂಗ್ಲೆಂಡ್ ಪರ ದಾಖಲೆ ಬರೆದ ರಾಯ್-ಬೈರ್‌ಸ್ಟೋವ್ ಜೋಡಿ

Jason Roy and Jonny Bairstow record most ever ODI century stands by England pair

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನೀಡಿದ ಬೃಹತ್ ಮೊತ್ತದ ಗುರಿಯನ್ನು ಇಂಗ್ಲೆಂಡ್ ಭರ್ಜರಿಯಾಗಿ ಬೆನ್ನಟ್ಟಲು ಆರಂಭಿಸಿದೆ. ಇಂಗ್ಲೆಂಡ್‌ಗೆ ಆರಂಭಿಕ ಜೋಡಿಯಿಂದ ಮತ್ತೊಂದು ಅದ್ಭುತವಾದ ಜೊತೆಯಾಟ ದೊರೆತಿದೆ. ಈ ಮೂಲಕ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಜೋಡಿ ಇಂಗ್ಲೆಂಡ್ ಪರವಾಗಿ ದಾಖಲೆಯೊಂದನ್ನು ಬರೆದಿದ್ದಾರೆ.

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ನಿಗದಿತ 50 ಓವರ್‌ಗಳಲ್ಲಿ 336 ರನ್‌ಗಳನ್ನು ಗಳಿಸಿ ಇಂಗ್ಲೆಂಡ್‌ಗೆ ಬೃಹತ್ ಮೊತ್ತದ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್‌ಗೆ ಈ ಆರಂಭಿಕ ಜೋಡಿ 16.3 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟವನ್ನು ನೀಡಿತು.

ಈ ಮೂಲಕ ಇಂಗ್ಲೆಂಡ್ ಪರವಾಗಿ ಜೇಸನ್ ರಾಯ್ ಹಾಗೂ ಜಾನಿ ಬೈರ್‌ಸ್ಟೋವ್ ಜೋಡಿ 13ನೇ ಶತಕದ ಜೊತೆಯಾಟವನ್ನು ನೀಡಿದ್ದಾರೆ. ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ 135 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಜೋ ಟೂರ್ ಹಾಗೂ ಇಯಾನ್ ಮಾರ್ಗನ್ ಅವರ 12 ಶತಕದ ಜೊತೆಯಾಟವನ್ನು ಸರಿಗಟ್ಟಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ಶತಕದ ಜೊತೆಯಾಟ ನೀಡುವ ಮೂಲಕ ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ಶತಕದ ಜೊತೆಯಾಟ ನೀಡಿದ ಜೋಡಿ ಎನಿಸಿದ್ದಾರೆ.

ಇನ್ನು ಈ ಶತಕದ ಜೊತೆಯಾಟದ ಮೂಲಕ ಮತ್ತೊಂದು ವಿಶೇಷ ಪಟ್ಟಿಗೆ ಈ ಜೋಡಿ ಸೇರಿಕೊಂಡಿದೆ. ಭಾರತದ ವಿರುದ್ಧ ಏಕದಿನ ಪಂದ್ಯದಲ್ಲಿ ಸತತ ಮೂರು ಶತಕದ ಜೊತೆಯಾಟವನ್ನು ನೀಡಿದ ಸಾಧನೆಯನ್ನು ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್ ಹಾಗೂ ಮ್ಯಾಥ್ಯೂ ಹೇಡನ್ ಮಾಡಿತ್ತು. ಈಗ ಇದೇ ಸಾಧನೆಯನ್ನು ಜಾನಿ ಬೈರ್‌ಸ್ಟೋವ್ ಹಾಗೂ ಜೇಸನ್ ರಾಯ್ ಕೂಡ ಮಾಡಿದ್ದಾರೆ.

Story first published: Friday, March 26, 2021, 21:02 [IST]
Other articles published on Mar 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+