Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರೀಡಾ ಲೋಕಕ್ಕೆ ಭಾರಿ ಆಘಾತ: ಮನು ಭಾಕರ್ ಕೋಚ್ ಜಸ್ಪಾಲ್ ರಾಣಾ ಇನ್ನಿಲ್ಲ

ಭಾರತೀಯ ಶೂಟಿಂಗ್ ಜಗತ್ತಿನಿಂದ ಅತ್ಯಂತ ದುಃಖದ ಸುದ್ದಿಯೊಂದು ಹೊರಬಿದ್ದಿದೆ. ಏಷ್ಯನ್ ಗೇಮ್ಸ್‌ನ ಚಿನ್ನದ ಪದಕ ವಿಜೇತ ಹಾಗೂ ಒಲಿಂಪಿಕ್ ಪದಕ ವಿಜೇತ ಶೂಟರ್ ಮನು ಭಾಕರ್ ಅವರ ತರಬೇತುದಾರ ಕೋಚ್ ಜಸ್ಪಾಲ್ ರಾಣಾ ನಿಧನರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಅವರ ಅಕಾಲಿಕ ನಿಧನದಿಂದ ಇಡೀ ಕ್ರೀಡಾ ಜಗತ್ತು ಶೋಕದಲ್ಲಿ ಮುಳುಗಿದೆ.

ರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಜಸ್ಪಾಲ್ ರಾಣಾ ಅವರು ಇತ್ತೀಚೆಗೆ ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಇವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಇದು ಸಾಮಾನ್ಯ ನೋವು ಇರಬೇಕು ಎಂದು ಇವರು ನಿರ್ಲಕ್ಷಿಸಿದಂತೆ ಕಾಣುತ್ತದೆ. ಆದರೆ ಭಾರತಕ್ಕೆ ಮರಳುವಾಗಲೂ ವಿಮಾನದಲ್ಲಿ ಆರೋಗ್ಯ ಹದಗೆಟ್ಟಿತು. ಇವರು ದೆಹಲಿ ತಲುಪಿದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

Jaspal Rana passes away

ಜಸ್ಪಾಲ್ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಿದಾಗ ಅವರಿಗೆ ಹೃದಯದ ಸಮಸ್ಯೆ ಇರುವುದು ದೃಢಪಟ್ಟಿತು. ವೈದ್ಯರು ಅವರಿಗೆ ಚಿಕಿತ್ಸೆ ನೀಡಿ ಸ್ಟಂಟ್ ಸಹ ಅಳವಡಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಉಲ್ಬಣಗೊಂಡು ಅವರು ಮೃತಪಟ್ಟರು.

ಜಸ್ಪಾಲ್ ರಾಣಾ ಸಾಧನೆ

ಜಸ್ಪಾಲ್ ರಾಣಾ ಅವರು ಭಾರತದ ಅತ್ಯುತ್ತಮ ಪಿಸ್ತೂಲ್ ಶೂಟರ್‌ಗಳಲ್ಲಿ ಒಬ್ಬರು. ಅವರು ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದರ ಜೊತೆಗೆ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದರು.

ಜಸ್ಪಾಲ್ ರಾಣಾ ಅವರು ತಮ್ಮ ಶೂಟಿಂಗ್ ವೃತ್ತಿಯ ಬಳಿಕ ಕೋಚಿಂಗ್‌ ಕಡೆಗೆ ಮುಖ ಮಾಡಿದರು. ಇವರು ತರಬೇತುದಾರರಾಗಿ ಭಾರತೀಯ ಶೂಟಿಂಗ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಮನು ಭಾಕರ್ ಸೇರಿದಂತೆ ಹಲವು ಯುವ ಶೂಟರ್‌ಗಳ ಯಶಸ್ಸಿನಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮನು ಭಾಕರ್ ಅವರು ಎರಡು ಪದಕವನ್ನು ಗೆಲ್ಲುವಲ್ಲಿ ಜಸ್ಪಾಲ್ ರಾಣಾ ಅವರ ಅಪಾರ ಶ್ರಮವಿದೆ.

ಕ್ರೀಡಾ ಕ್ಷೇತ್ರದ ಕೊಡುಗೆಗಾಗಿ 2020ರಲ್ಲಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಫೆಬ್ರವರಿ 2025ರಲ್ಲಿ ಎನ್‌ಆರ್‌ಎಐ ಅವರನ್ನು ದೀರ್ಘಕಾಲದ ಕೋಚ್ ಆಗಿ ನೇಮಿಸಿತು. 25 ಮೀಟರ್ ಪಿಸ್ತೂಲ್ ವಿಭಾಗದ ಮುಖ್ಯ ಕೋಚ್ ಆಗಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಅವರ ನಿಧನದಿಂದ ಈಗ ಕ್ರೀಡಾ ಲೋಕ ತುಂಬಲಾಗದ ನಷ್ಟವಾಗಿದೆ. ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Story first published: Friday, June 12, 2026, 13:08 [IST]
Other articles published on Jun 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+