Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah-Akash Deep: ಬೌಲರ್‌ಗಳ ಬ್ಯಾಟಿಂಗ್‌ "ಫಾಲೋ" ಮಾಡಿ: ಬುಮ್ರಾ-ಆಕಾಶ್ ಕೆಚ್ಚೆದೆಯ ಆಟ

ಟೀಮ್ ಇಂಡಿಯಾ ಅಭಿಮಾನಿಗಳು ಮೂರನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದ ಕೊನೆಯ ಒಂದು ಗಂಟೆಯನ್ನು ಸಖತ್‌ ಎಂಜಾಯ್‌ ಮಾಡಿದರು. ಟೀಮ್ ಇಂಡಿಯಾ ಫಾಲೋ ಆನ್‌ಗೆ ಒಳಪಡುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆಗ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಜಸ್ಪ್ರಿತ್‌ ಬುಮ್ರಾ ಹಾಗೂ ಆಕಾಶ್‌ ದೀಪ್‌ ಪ್ರತಿಯೊಂದು ರನ್‌ ಸೇರಿಸುತ್ತಿದ್ದಂತೆ ಡ್ರೆಸ್ಸಿಂಗ್‌ ರೂಮ್‌ ನಿಂದ ಹಿಡಿದು, ಪ್ರೇಕ್ಷಕರ ಗ್ಯಾಲರಿಯಿಂದ ಚಪ್ಪಾಳೆ ಸದ್ದು ಕೇಳಿ ಬರುತ್ತಿತ್ತು.

ಬೌನ್ಸಿ ಟ್ರ್ಯಾಕ್‌ನಲ್ಲಿ ರನ್‌ ಗಳಿಸಲು ಪರದಾಡಿದ ಟೀಮ್ ಇಂಡಿಯಾದ ಸ್ಟಾರ್‌ ಆಟಗಾರರು ವೈಫಲ್ಯ ಅನುಭವಿಸಿದರು. ಆದರೆ ಟೀಮ್‌ ಇಂಡಿಯಾದ ಕೆಳ ಕ್ರಮಾಂಕದ ಆಟಗಾರರು ಕೆಚ್ಚೆದೆಯ ಬ್ಯಾಟಿಂಗ್‌ ನಡೆಸಿ, ಬ್ಯಾಟಿಂಗ್‌ ಮಾಡುವುದು ಹೇಗೆ ಎಂಬುದನ್ನು ಬ್ಯಾಟರ್‌ಗಳಿಗೆ ತೋರಿಸಿಕೊಟ್ಟರು. ಕೊನೆಯ ವಿಕೆಟ್‌ಗೆ ಈ ಜೋಡಿ ಅಜೇಯ 39 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಧಾರವಾಯಿತು. ಅಲ್ಲದೆ ತಂಡವನ್ನು ಫಾಲೋಆನ್‌ನಿಂದ ಪಾರು ಮಾಡಿತು.

Jasprit Bumrah and Akash Deep Save Team India from Follow-On with Gritty Partnership

ಫಾಲೋ ಆನ್ ಪಾರು ಮಾಡಿದ ಬೌಲರ್ಸ್‌

213 ರನ್‌ಗಳಿಗೆ 9 ವಿಕೆಟ್‌ಗಳನ್ನು ಕಳೆದುಕೊಂಡ ಟೀಮ್ ಇಂಡಿಯಾ ಸಂಕಷ್ಟದಲ್ಲಿತ್ತು. ಆಗ ಅಭಿಮಾನಿಗಳ ಮನದಲ್ಲಿದಿದ್ದು ಒಂದೇ ಪ್ರಶ್ನೆ, ಟೀಮ್ ಇಂಡಿಯಾ ಫಾಲೋ ಆನ್‌ ಬಚಾವ್‌ ಮಾಡುತ್ತಾ ಎಂದು. ಆಗಲೇ ಕ್ರೀಸ್‌ಗೆ ಇಳಿದಿದ್ದು ಆಕಾಶ್‌ ದೀಪ್‌. ಇವರು ಅನುಭವಿ ಆಟಗಾರ ಜಸ್ಪ್ರಿತ್‌ ಬುಮ್ರಾ ಅವರೊಂದಿಗೆ ಕೊನೆಯ ವಿಕೆಟ್‌ಗೆ ಆಡಿದ ಬ್ಯಾಟಿಂಗ್‌ ಧಾಟಿಯನ್ನು ಕಂಡು, ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದ ಸ್ಟಾರ್‌ ಬ್ಯಾಟರ್‌ಗಳು ಸಹ ಹಿರಿಹಿರಿ ಹಿಗ್ಗಿದರು. ಒಂದೊಮ್ಮೆ ಈ ಜೋಡಿ ಫಾಲೋ ಆನ್‌ ಮಾರ್ಕ್‌ ಪಾರು ಮಾಡುತ್ತಿದ್ದಂತೆ, ಆಟಗಾರರು ಹಾಗೂ ಅಭಿಮಾನಿಗಳು ಪಂದ್ಯವನ್ನೇ ಗೆದ್ದಷ್ಟು ಖುಷಿ ಪಟ್ಟರು.

ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್‌ ದೀಪ್‌ ಜೋಡಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕ್ಲಾಸಿಕ್‌ ಡಿಫೆನ್ಸ್‌ ಶಾಟ್‌ಗಳನ್ನು ಪ್ರಯೋಗಿಸಿದ ಜೋಡಿ, ಆಸ್ಟ್ರೇಲಿಯಾಕ್ಕೆ ಕಾಟ ನೀಡಿತು. ಕೊನೆಯ ವಿಕೆಟ್‌ಗೆ ಈ ಜೋಡಿ 54 ಎಸೆತಗಳಲ್ಲಿ ಅಜೇಯ 39 ರನ್‌ಗಳ ಅಮೂಲ್ಯ ಕಾಣಿಕೆ ನೀಡಿ ತಂಡವನ್ನು ಮತ್ತೊಮ್ಮೆ ಬ್ಯಾಟ್ ಮಾಡುವುದರಿಂದ ಪಾರು ಮಾಡಿತು.

Jasprit Bumrah and Akash Deep Save Team India from Follow-On with Gritty Partnership

ಹೇಗಿತ್ತು ನಾಲ್ಕನೇ ದಿನದ ಆಟ?

ಟೀಮ್ ಇಂಡಿಯಾ ಮಂಗಳವಾರ 4 ವಿಕೆಟ್‌ಗೆ 51 ರನ್‌ಗಳಿಂದ ಆಟ ಮುಂದುವರಿಸಿ ದಿನದಾಟದಂತ್ಯಕ್ಕೆ 9 ವಿಕೆಟ್‌ಗೆ 252 ರನ್‌ ಸಿಡಿಸಿತು. ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಕೆಎಲ್‌ ರಾಹುಲ್‌ ಅವರ ಜವಾಬ್ದಾರಿಯುತ ಆಟ ತಂಡಕ್ಕೆ ನೆರವಾಯಿತು. ಕೆಎಲ್ ರಾಹುಲ್ 139 ಎಸೆತಗಳಲ್ಲಿ 8 ಬೌಂಡರಿ ಒಳಗೊಂಡಂತೆ 84 ರನ್‌ ಸಿಡಿಸಿ ಇವರು ಔಟ್ ಆದರು. ಆಲ್‌ರೌಂಡರ್‌ ರೂಪದಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದ ರವೀಂದ್ರ ಜಡೇಜಾ 123 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 77 ರನ್‌ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.

ಕೆಳ ಕ್ರಮಾಂಕದಲ್ಲಿ ಆಕಾಶ್ ದೀಪ್‌ ಅಜೇಯ 27 ಹಾಗೂ ಜಸ್ಪ್ರಿತ್ ಬುಮ್ರಾ ಅಜೇಯ 10 ರನ್‌ ಬಾರಿಸಿ ಬುಧವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Story first published: Tuesday, December 17, 2024, 13:46 [IST]
Other articles published on Dec 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+