ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಬೂಮ್ರಾ, ಅರ್ಜುನ್ ಭರ್ಜರಿ ತಯಾರಿ: ವಿಡಿಯೋ

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಆವೃತ್ತಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿವೆ. ಏಪ್ರಿಲ್ 9ರಿಂದ ಭಾರತದ ಅದ್ದೂರಿ ಕ್ರಿಕೆಟ್ ಟೂರ್ನಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಕಾಡಾಲಿವೆ.
ಈವರೆಗೆ ಒಟ್ಟು 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ 6ನೇ ಟ್ರೋಫಿ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಮುಂಬೈ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.
ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಮುಂಬೈ ಇಂಡಿಯನ್ಸ್, ಆರಂಭಿಕ ಪಂದ್ಯಕ್ಕೆ ಆಟಗಾರರು ತಯಾರಿ ನಡೆಸುತ್ತಿರುವುದರ ವಿಡಿಯೋ ಹಾಕಿಕೊಂಡಿದೆ. 'ನೆಟ್ ಅಭ್ಯಾಸ ಆರಂಭವಾಗಿದೆ. ಬೆವರು ಇಳಿಸೋದು ಶುರುವಾಗಿದೆ, ಪಂದ್ಯಕ್ಕೆ ಸಿದ್ಧತೆ ಆಗಿದೆ,' ಎಂದು ಎಂಐ ಟ್ವೀಟ್‌ನಲ್ಲಿ ಬರೆದುಕೊಂಡಿದೆ.
ಮುಂಬೈ ಹಾಕಿಕೊಂಡಿರುವ ವಿಡಿಯೋದಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಬೆವರಿಳಿಸುತ್ತಿರುವ ಚಿತ್ರಣವಿದೆ. ಈ ಬಾರಿ ಹರಾಜಿನ ವೇಳೆ ಮುಂಬೈ ತಂಡ ಸೇರಿಕೊಂಡಿರುವ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸೌರಭ್ ತಿವಾರಿ ಮೊದಲಾದವರು ತಮ್ಮ ತಂಡದ ತಯಾರಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications