For Quick Alerts
ALLOW NOTIFICATIONS  
For Daily Alerts
 

Jasprit Bumrah: ಯಾರ್ಕರ್‌ ಸ್ಟೆಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಮುಡಿಗೆ ದಾಖಲೆಯ ಗರಿ

ಟೀಮ್ ಇಂಡಿಯಾದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರಿತ್ ಬುಮ್ರಾ, ಯಾವುದೇ ಫಾರ್ಮೆಟ್‌ ಇದ್ದರೂ ಅಬ್ಬರದ ಪ್ರದರ್ಶನ ನೀಡುವ ಆಟಗಾರ. ತಂಡ ಯಾವುದೇ ಸನ್ನಿವೇಶದಲ್ಲೂ ಇವರ ಕೈಗೆ ಚೆಂಡನ್ನು ನೀಡಿದರೆ, ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗುವ ಬೌಲರ್‌. ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಭಾರತದ ವೇಗದ ಬೌಲರ್‌ ದಾಖಲೆಯನ್ನು ನಿರ್ಮಿಸಿದ್ದಾರೆ.

ಕಾನ್ಪುರದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. ಮೊದಲ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ತಲಾ ಮೂರು ವಿಕೆಟ್‌ ಪಡೆದರು. ಈ ಮೂಲಕ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಇವರಿಗೆ ಅಗ್ರ ಸ್ಥಾನ. ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಆರ್‌.ಅಶ್ವಿನ್ ಸಹ ಇಷ್ಟೇ ವಿಕೆಟ್‌ಗಳನ್ನು ಕಬಳಿಸಿದ್ದರೂ, ಸರಾಸರಿ ಲೆಕ್ಕಾಚಾರದಲ್ಲಿ ಬುಮ್ರಾ ಅವರಿಗಿಂತ ಹಿಂದಿದ್ದಾರೆ.

Jasprit Bumrah Becomes 7th Leading Wicket-Taker in World Test Championship

ಕಾನ್ಪುರ ಟೆಸ್ಟ್‌ನ 5ನೇ ದಿನದಾಟದ ಆರಂಭದಲ್ಲೇ ಭಾರತದ ಬೌಲರ್‌ಗಳು ಅಬ್ಬರಿಸಿದರು. ಟೀಮ್ ಇಂಡಿಯಾ ಪರ ಎರಡನೇ ಇನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಆರ್‌.ಅಶ್ವಿನ್ ತಲಾ ಮೂರು ವಿಕೆಟ್‌ ಪಡೆದು ಬೀಗಿದ್ದಾರೆ. ಯುವ ವೇಗದ ಬೌಲರ್‌ ಆಕಾಶ್ ದೀಪ್‌ ಒಂದು ವಿಕೆಟ್‌ ಕಬಳಿಸಿದ್ದಾರೆ. ಈ ಪಂದ್ಯದಲ್ಲಿ ಪಡೆದ ಮೂರು ವಿಕೆಟ್‌ಗಳ ಸಹಾಯದಿಂದ ಬುಮ್ರಾ ಅವರು ನ್ಯೂಜಿಲೆಂಡ್ ಬೌಲರ್ ಟಿಮ್ ಸೌಥಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಗರಿಷ್ಠ ವಿಕೆಟ್‌ ಪಡೆದ ಏಳನೇ ಬೌಲರ್

ಟೀಮ್ ಇಂಡಿಯಾದ ವೇಗಿ ಜಸ್ಪ್ರಿತ್ ಬುಮ್ರಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 7 ನೇ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾ ಈಗ ಡಬ್ಲ್ಯುಟಿಸಿಯಲ್ಲಿ 120 ವಿಕೆಟ್‌ಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಆಸೀಸ್‌ನ ನಾಥನ್ ಲಿಯಾನ್‌ (187) ಮೊದಲ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಅಶ್ವಿನ್‌(183), ಆಸೀಸ್‌ ನಾಯಕ ಪ್ಯಾಟ್ ಕಮಿನ್ಸ್‌ (175), ಮಿಚೆಲ್ ಸ್ಟಾರ್ಕ್‌ (147) ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐದನೇ ಸ್ಥಾನದಲ್ಲಿ ಸ್ಟುವರ್ಟ್‌ ಬ್ರಾಡ್‌ (134) ಇದ್ದು, ಆರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (123) ಇದ್ದಾರೆ.

Jasprit Bumrah Becomes 7th Leading Wicket-Taker in World Test Championship

ಬುಮ್ರಾ ಮುಡಿಗೆ ಮತ್ತೊಂದು ಗರಿ

ಟೀಮ್ ಇಂಡಿಯಾದ ಭರವಸೆಯ ವೇಗದ ಔಲರ್‌ ಪ್ರಸಕ್ತ ವರ್ಷ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಹಾಗೂ ಶ್ರೀಲಂಕಾದ ಪ್ರಭಾತ್ ಜಯಸೂರ್ಯ ಸದ್ಯ ಅಗ್ರ ಸ್ಥಾನದಲ್ಲಿದ್ದಾರೆ. ಇಬ್ಬರೂ ಆಟಗಾರರು ಒಟ್ಟು 14 ಪಂದ್ಯಗಳಲ್ಲಿ 38 ವಿಕೆಟ್‌ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಅಶ್ವಿನ್‌ (37) ಸದ್ಯ ಮೂರನೇ ಸ್ಥಾನದಲ್ಲಿದ್ದಾರೆ.

ಬುಮ್ರಾ ಪ್ರಸಕ್ತ ವರ್ಷ ಆರ್ಭಟಿಸಿದ್ದಾರೆ. ಇವರು ಆಡಿದ 22 ಇನಿಂಗ್ಸ್‌ಗಳಲ್ಲಿ 53 ವಿಕೆಟ್‌ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಹಾಂಗ್‌ಕಾಂಗ್‌ನ ಎಹ್ಸಾನ್‌ ಖಾನ್‌ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿದ್ದ ಆಸೀಸ್‌ ತಂಡದ ಭರವಸೆಯ ಆಟಗಾರ ಜೋಶ್ ಹ್ಯಾಜಲ್‌ವುಡ್ ಇದ್ದಾರೆ.

Story first published: Tuesday, October 1, 2024, 20:00 [IST]
Other articles published on Oct 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+