ಭಾರತ vs ಶ್ರೀಲಂಕಾ: ಭಾರತ ಪರ ಜಸ್‌ಪ್ರೀತ್ ಬೂಮ್ರಾ ವಿಶಿಷ್ಠ ದಾಖಲೆ

ಪುಣೆ, ಜನವರಿ 11: ಟೀಮ್ ಇಂಡಿಯಾ ವೇಗಿ ಜಸ್‌ಪ್ರೀತ್ ಬೂಮ್ರಾ ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟಿ20ಐನಲ್ಲಿ ಅತೀ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಮುಂಚೂಣಿ ಬೌಲರ್ ಆಗಿ ಬೂಮ್ರಾ ಗುರುತಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ 3ನೇ ಟಿ20ಯಲ್ಲಿ ಜಸ್‌ಪ್ರೀತ್ ಈ ದಾಖಲೆ ಬರೆದರು.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 10) ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಬೂಮ್ರಾಗೆ ಲಂಕಾ ಓಪನರ್ ದನುಷ್ಕಾ ಗುಣತಿಲಕ ಅವರ ವಿಕೆಟ್ ಲಭಿಸಿತು. ಈ ವಿಕೆಟ್ ಬೂಮ್ರಾ ಅವರನ್ನು ಅತ್ಯಧಿಕ ವಿಕೆಟ್‌ಗಳ ದಾಖಲೆ ಸಾಲಿನಲ್ಲಿ ನಿಲ್ಲಿಸಿದೆ.
ಟಿ20ಐನಲ್ಲಿ ಈಗ ಜಸ್‌ಪ್ರೀತ್ ಬೂಮ್ರಾ 45 ಪಂದ್ಯಗಳಲ್ಲಿ 53 ವಿಕೆಟ್ ಪಡೆದಂತಾಗಿದೆ. ಇದಕ್ಕೂ ಮುನ್ನ ಟಿ20ಐನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್‌ಗಳಲ್ಲಿ ಯುಜುವೇಂದ್ರ ಚಾಹಲ್ (37 ಪಂದ್ಯಗಳಲ್ಲಿ 52 ವಿಕೆಟ್‌ಗಳು), ಆರ್ ಅಶ್ವಿನ್ (46 ಪಂದ್ಯಗಳಲ್ಲಿ 52 ವಿಕೆಟ್) ಮತ್ತು ಬೂಮ್ರಾ ಗುರುತಿಸಿಕೊಂಡಿದ್ದರು. ಚಾಹಲ್ ಮತ್ತು ಅಶ್ವಿನ್ ಈಗ ಈ ದಾಖಲೆ ಸಾಲಿನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.
ಪುಣೆ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ, 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 201 ರನ್ ಮಾಡಿತ್ತು. ಗುರಿ ಬೆನ್ನತ್ತಿದ ಶ್ರೀಲಂಕಾ, 15.5ನೇ ಓವರ್‌ಗೆ ಎಲ್ಲಾ ವಿಕೆಟ್ ಕಳೆದು 123 ರನ್ ಬಾರಿಸಿ 78 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಮೂರು ಪಂದ್ಯಗಳ ಸರಣಿ (ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು) 2-0ಯಿಂದ ಭಾರತದ ವಶವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications