ಭಾರತ vs ಆಸ್ಟ್ರೇಲಿಯಾ: ಟಿ20 ದಾಖಲೆ ಬರೆದ ವೇಗಿ ಜಸ್‌ಪ್ರೀತ್ ಬೂಮ್ರಾ


ವಿಶಾಖಪಟ್ನಂ, ಫೆಬ್ರವರಿ 24: ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಅಂತಾರಾಷ್ಟ್ರೀಯ ಟಿ20ಯಲ್ಲಿ 50 ವಿಕೆಟ್ ಪಡೆದ ಭಾರತದ ಎರಡನೇ ಆಟಗಾರ ಎಂಬ ದಾಖಲೆಗೆ ಕಾರಣರಾಗಿದ್ದಾರೆ. ವಿಶಾಖಪಟ್ನಂನಲ್ಲಿರುವ ಡಾ. ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 24) ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಟಿ20 ಪಂದ್ಯದಲ್ಲಿ ಬೂಮ್ರಾ ಈ ಸಾಧನೆ ಮೆರೆದರು.
ಒಟ್ಟು 41 ಟಿ20 ಪಂದ್ಯಗಳಲ್ಲಿ 51 ವಿಕೆಟ್ ಸಾಧನೆ ಹೊಂದಿರುವ ಬೂಮ್ರಾ, ಆರ್ ಅಶ್ವಿನ್ ಬಳಿಕ ಟಿ20 50 ವಿಕೆಟ್ ಕೆಡವಿದ ಭಾರತದ 2ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಯುಜುವೇಂದ್ರ ಚಾಹಲ್ ಕೂಡ ಬೂಮ್ರಾ ಬೆನ್ನಲ್ಲೇ ಇದ್ದು, ಚಾಹಲ್ 30 ಪಂದ್ಯಗಳಲ್ಲಿ 47 ವಿಕೆಟ್ ಸಾಧನೆ ಹೊಂದಿದ್ದಾರೆ.
ಆರಂಭಿಕ ಟಿ20 ಪಂದ್ಯದಲ್ಲಿ ಜಸ್‌ಪ್ರೀತ್ 16 ರನ್ನಿಗೆ ಮೂರು ವಿಕೆಟ್ ಉರುಳಿಸಿ ಈ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಪೀಟರ್ ಹ್ಯಾಂಡ್ಸ್‌ಕಾಂಬ್, ನಾಥನ್ ಕೌಲ್ಟರ್-ನೈಲ್ ವಿಕೆಟ್ಗಳನ್ನು ಬೂಮ್ರಾ ಬಲಿ ಪಡೆದರು. ಆದರೆ ತೀವ್ರ ರೋಚಕ ಹಂತಕ್ಕೆ ತಲುಪಿದ ಈ ಪಂದ್ಯವನ್ನು ಆಸೀಸ್ 3 ವಿಕೆಟ್‌ಗಳಿಂದ ಗೆದ್ದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications