ಭಾರತ ಹಾಗೂ ಬಾಂಗ್ಲಾದೇಶ ನಡುವಣ ಚಾಂಪಿಯನ್ಸ್ ಟ್ರೋಫಿಯ "ಬಿ" ಗುಂಪಿನಲ್ಲಿ ನಡೆದದೆ. ಈ ವೇಳೆ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟ್ ಮಾಡಲು ಮುಂದಾಯಿತು. ಈ ವೇಳೆ ಬಾಂಗ್ಲಾದೇಶದ ಬ್ಯಾಟರ್‌ಗಳನ್ನು, ಟೀಮ್ ಇಂಡಿಯಾ ಬೌಲರ್‌ಗಳು ಕಾಟ ನೀಡಿದರು. ಈ ವೇಳೆ ಅಭಿಮಾನಿಗಳ ಮನದಲ್ಲಿ ಇದ್ದ ಪ್ರಶ್ನೆ, ಜಸ್ಪ್ರಿತ್ ಬುಮ್ರಾ ಅವರು ಇದ್ದಿದ್ದರೆ ಹೇಗೆ ಇರುತ್ತಿತ್ತು ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿತ್ತು. ಈಗ ಜಸ್ಪ್ರಿತ್ ಬುಮ್ರಾ ಅವರ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದೆ.
ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಗಾಯದ ಸಮಸ್ಯೆಯಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ನಡೆದಿದ್ದಾರೆ. ಈ ವೇಳೆ ಇವರು ಈಗ ಚೇತರಿಕೆ ಕಾಣುತ್ತಿದ್ದಾರೆ. ಇವರ ಗಾಯದ ಬಗ್ಗೆ ಅವರ ಪತ್ನಿ ಸಂಜನಾ ಗಣೇಶನ್ ಮಾಹಿತಿ ನೀಡಿದ್ದಾರೆ. ಕ್ರೀಡಾ ನಿರೂಪಕಿಯಾಗಿರುವ ಸಂಜನಾ ಗಣೇಶನ್ ಅವರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಬಾಂಗ್ಲಾದೇಶದ ಸ್ಟಾರ್ ಆಟಗಾರ ಮೆಹದಿ ಹಸನ್ ಮಿರ್ಜಾ ಅವರ ಜೊತೆಗಿನ ಸಂವಾದದಲ್ಲಿ ಈ ವಿಷಯ ಬಹಿರಂಗಗೊಂಡಿದೆ.

ಸಂಜನಾ ಗಣೇಶನ್ ಅವರು ಮೆಹದಿ ಹಸನ್ ಮಿರ್ಜಾ ಅವರೊಂದಿಗೆ ಸಂವಾದ ನಡೆಸುವಾಗ, ಬಾಂಗ್ಲಾ ಕ್ರಿಕೆಟಿಗ ಬುಮ್ರಾ ಅವರ ಬಗ್ಗೆ ಮಾಹಿತಿ ಕೇಳಿದ್ದಾರೆ. ಆಗ ಸಂಜನಾ ಗಣೇಶನ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಜನಾ ಗಣೇಶನ್ ಅವರು ತಿಳಿಸಿರುವಂತೆ ಜಸ್ಪ್ರಿತ್ ಬುಮ್ರಾ ರಾಷ್ಟ್ರೀಯ ಕ್ರಿಕೆಟ್ ಅಕಡಾಮಿ (ಎನ್‌ಸಿಎ)ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಅವರು ಚೇತರಿಸಿಕೊಂಡಿದ್ದಾರೆ. ಅವರು ಎನ್‌ಸಿಎನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಜಸ್ಪ್ರಿತ್ ಬುಮ್ರಾ ಅವರ ಬಗ್ಗೆ ಮೆಹದಿ ಹಸನ್ ಮಿರ್ಜಾ ಮಾತನಾಡಿದ್ದಾರೆ. ಜಸ್ಪ್ರಿತ್ ಬುಮ್ರಾ ಅವರು ಒಬ್ಬ ಶ್ರೇಷ್ಠ ಬೌಲರ್. ಅವರು ಇಲ್ಲಿ ಬರದೇ ಇರುವುದು ಬೇಸರ ತರಿಸಿದೆ. ಅವರು ತಂಡದಲ್ಲಿ ಆಯ್ಕೆ ಆಗದಿರುವುದು ನಮಗೆ ಖುಷಿಯ ವಿಚಾರ. ನಮ್ಮ ತಂಡದಲ್ಲಿರುವ ಪ್ರತಿಯೊಬ್ಬ ಆಟಗಾರ ಅವರನ್ನು ಗೌರವಿಸುತ್ತಾರೆ. ಅವರು ನನನ್ನು ಎರಡು ಬಾರಿ ಔಟ್ ಮಾಡಿದ್ದಾರೆ. ಅವರು ಹೇಳಿದಂತೆ ಚೆಂಡು ಕೇಳುತ್ತದೆ ಎಂದು ಮೆಹದಿ ಹಸನ್ ಮಿರ್ಜಾ ಹೇಳಿದ್ದಾರೆ.
ಟೀಮ್ ಇಂಡಿಯಾದ ಸೂಪರ್ ಬೌಲರ್ ಜಸ್ಪ್ರಿತ್ ಬುಮ್ರಾ ಇತ್ತೀಚಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಸಿಡ್ನಿಯಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿ ಇವರ ಬೆನ್ನಿನಲ್ಲಿ ಗಾಯ ಕಾಣಿಸಿಕೊಂಡಿದ್ದರಿಂದ ಇವರು ಮೈದಾನದಿಂದ ದೂರ ಉಳಿಯಬೇಕಾಯಿತು. ಆದರೆ ಅವರು ಈ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಲಿಲ್ಲ.

ಬುಮ್ರಾ ಅವರನ್ನು ಆರಂಭದಲ್ಲಿ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಅವರ ಗಾಯ ಚೇತರಿಕೆ ಕಾಣದ ಕಾರಣ ಅವರನ್ನು ಕೈ ಬಿಟ್ಟು ಹರ್ಷಿತ್ ರಾಣಾ ಅವರಿಗೆ ಮಣೆ ಹಾಕಲಾಗಿದೆ. ಈಗಾಗಲೇ ಟೂರ್ನಿಗಳು ನಡೆಯುತ್ತಿರುವುದರಿಂದ ಇವರು ಫಿಟ್ ಆದರೂ ತಂಡ ಸೇರಲು ಸಾಧ್ಯವಿಲ್ಲ.