Jasprit Bumrah: ಮೆಲ್ಬೋರ್ನ್‌ನಲ್ಲಿ ಇತಿಹಾಸ ನಿರ್ಮಿಸಿದ ಟೀಮ್ ಇಂಡಿಯಾ ವೇಗಿ: ಬುಮ್ರಾ ನಿರ್ಮಿಸಿದ ದಾಖಲೆಯ ಪಟ್ಟಿ ಇಲ್ಲಿದೆ
ಟೀಮ್ ಇಂಡಿಯಾದ ಸ್ಟಾರ್ ವೇಗದ ಜಸ್ಪ್ರಿತ್ ಬುಮ್ರಾ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಇತಿಹಾಸ ನಿರ್ಮಿಸಿದ್ದಾರೆ. ಇವರು ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿದ ಬುಮ್ರಾ, ಒಂದೇ ದಿನ ಹಲವು ದಾಖಲೆಗಳನ್ನು ಬರೆದರು. ಬೌನ್ಸಿ ಪಿಚ್ ಆಗಿರಲಿ, ಸ್ಪಿನ್ ಟ್ರ್ಯಾಕ್ ಆಗಿರಲಿ ಬುಮ್ರಾ ವಿಕೆಟ್ ಪಡೆಯುವುದರಲ್ಲಿ ಹಿಂದೆ ಬೀಳುವವರಲ್ಲ. ಈ ಸ್ಟಾರ್ ಬೌಲರ್ ಆಟಕ್ಕೆ ಉತ್ತರಿಸಲು ವಿಶ್ವದ ಹಲವು ಸ್ಟಾರ್ ಬ್ಯಾಟರ್‌ಗಳು ಕಂಗಾಲಾಗಿದ್ದಾರೆ. ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ವಿಕೆಟ್ ಪಡೆಯುತ್ತಾ ಸಾಗಿದರು. ಈ ಮೂಲಕ ಹಲವು ದಾಖಲೆಗಳ ಬರೆದು.
ಜಸ್ಪ್ರೀತ್ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಬೌಲಿಂಗ್‌ನೊಂದಿಗೆ ಒಂದರ ನಂತರ ಒಂದರಂತೆ ನಿರಂತರವಾಗಿ ವಿಕೆಟ್ ಪಡೆದು ದಾಖಲೆಯನ್ನು ನಿರ್ಮಿಸಿದರು. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಸೀಸ್ ತಂಡಕ್ಕೆ ಬುಮ್ರಾ ಕಾಟ ನೀಡಿದ್ದಾರೆ. ಈ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ್ದ ಟ್ರಾವಿಸ್ ಹೆಡ್ ಅವರು, ನಾಲ್ಕನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಮೂಲಕ ಜಸ್ಪ್ರಿತ್ ಬುಮ್ರಾ ದಾಖಲೆ ಬರೆದರು. ಜಸ್ಪ್ರೀತ್ ಬುಮ್ರಾ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್ ಪಡೆದ ಭಾರತದ ಆರನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಬುಮ್ರಾ 200 ವಿಕೆಟ್
ಭಾನುವಾರ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ವಿಕೆಟ್‌ಗಳು ಪಟಪಟನೇ ಬೀಳುತ್ತಾ ಸಾಗಿದವು. ಈ ವೇಳೆ ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಬುಮ್ರಾ ತಮ್ಮ ಶಿಸ್ತು ಬದ್ಧ ದಾಳಿಯಿಂದ ಗಮನ ಸೆಳೆದರು. ಈ ಸ್ಟಾರ್ ಬೌಲರ್ ಆಸ್ಟ್ರೇಲಿಯಾದ ಭರವಸೆಯ ಬ್ಯಾಟರ್‌ಗಳಿಗೆ ಖೆಡ್ಡಾ ತೋಡುತ್ತಾ ಸಾಗಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದರು. ಆಸೀಸ್ ತಂಡದ ಭರವಸೆಯ ಬ್ಯಾಟರ್ ಟ್ರಾವಿಸ್ ಹೆಡ್ ಅವರ ವಿಕೆಟ್ ಪಡೆಯುತ್ತಿದ್ದಂತೆ ಬುಮ್ರಾ ಟೆಸ್ಟ್ ವೃತ್ತಿಜೀವನದ 200 ನೇ ವಿಕೆಟ್ ಪಡೆದು ಬೀಗಿದರು. ಈ ಮೂಲಕ ಟೆಸ್ಟ್‌ನಲ್ಲಿ ಕಡಿಮೆ ಸರಾಸರಿಯಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಖ್ಯಾತಿ ಪಡೆದರು.
ಭಾರತದ ಪರ 200 ವಿಕೆಟ್‌ಗಳನ್ನು ವೇಗವಾಗಿ ಪಡೆದ ಬೌಲರ್ಸ್
37 ಪಂದ್ಯ, ರವಿಚಂದ್ರನ್ ಅಶ್ವಿನ್
44 ಪಂದ್ಯ, ಜಸ್ಪ್ರಿತ್ ಬುಮ್ರಾ
44 ಪಂದ್ಯ, ರವೀಂದ್ರ ಜಡೇಜಾ
46 ಪಂದ್ಯ, ಹರ್ಭಜನ್ ಸಿಂಗ್
47 ಪಂದ್ಯ, ಅನಿಲ್ ಕುಂಬ್ಳೆ
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕಡಿಮೆ ಸರಾಸರಿಯಲ್ಲಿ 200 ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು. 20 ಕ್ಕಿಂತ ಕಡಿಮೆ ಏಕನಾಮಿಯಲ್ಲಿ ವಿಕೆಟ್ ಪಡೆದು ಮಿಂಚಿದರು. ಇವರ ಸರಾಸರಿ 19.56 ಆಗಿತ್ತು. ಈ ವಿಷಯದಲ್ಲಿ ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರೈಸಿದಾಗ ಅವರ ಬೌಲಿಂಗ್ ಸರಾಸರಿ 20.34 ರಷ್ಟಿದ್ದ ಜಯೋಲ್ ಗಾರ್ನರ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಅತಿ ಕಡಿಮೆ ಸರಾಸರಿ ಹೊಂದಿರುವ ಬೌಲರ್ಸ್
ಜಸ್ಪ್ರೀತ್ ಬುಮ್ರಾ, 19.56 ಸರಾಸರಿ
ಜಯೋಲ್ ಗಾರ್ನರ್, 20.34 ಸರಾಸರಿ
ಶಾನ್ ಪೊಲಾಕ್, 20.39 ಸರಾಸರಿ
ವಕಾರ್ ಯೂನಿಸ್, 20.61 ಸರಾಸರಿ
ಅತಿ ಕಡಿಮೆ ಎಸೆತದಲ್ಲಿ 200 ವಿಕೆಟ್ ಸಾಧನೆ
ಇನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 200 ವಿಕೆಟ್‌ಗಳನ್ನು ಕಡಿಮೆ ಎಸೆತಗಳಲ್ಲಿ ಪೂರೈಸಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಬುಮ್ರಾ 8484 ಎಸೆತಗಳಲ್ಲಿ 200 ಟೆಸ್ಟ್ ವಿಕೆಟ್‌ಗಳನ್ನು ಪೂರೈಸಿದರು. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನಿ ತಂಡದ ಮಾಜಿ ನಾಯಕ ವಕಾರ್ ಯೂನಿಸ್ ಇದ್ದು ಇವರು 7725 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಕಡಿಮೆ ಎಸೆತಗಳಲ್ಲಿ 200 ವಿಕೆಟ್ ಪಡೆದ ಬೌಲರ್‌ಗಳು
ವಕಾರ್ ಯೂನಿಸ್, 7725 ಎಸೆತಗಳು
ಡೇಲ್ ಸ್ಟೇಯ್ನ್, 7848 ಎಸೆತಗಳು
ಕಗಿಸೊ ರಬಾಡ, 8153 ಎಸೆತಗಳು
ಜಸ್ಪ್ರೀತ್ ಬುಮ್ರಾ, 8484 ಎಸೆತಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications