Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah: ಟಿ20 ಕ್ರಿಕೆಟ್‌ನಲ್ಲಿ 300 ವಿಕೆಟ್ ಸಾಧನೆ ಮಾಡಿದ ಜಸ್ಪ್ರಿತ್ ಬುಮ್ರಾ

ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಹೈದರಾಬಾದ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. 18ನೇ ಆವೃತ್ತಿಯ 41ನೇ ಪಂದ್ಯ ಮುಂಬೈ ಇಂಡಿಯನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡಗಳ ನಡುವೆ ನಡೆಯಿತು. ಈ ವೇಳೆ ಬುಮ್ರಾ ಒಂದು ವಿಕೆಟ್‌ ಪಡೆಯುವ ಮೂಲಕ ಇತಿಹಾಸದ ಪುಟದಲ್ಲಿ ಸ್ಥಾನ ಪಡೆದರು. ಅಂದಹಾಗೆ ಮುಂಬೈ ವೇಗಿ ನಿರ್ಮಿಸಿದ ಇತಿಹಾಸ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮುಂಬೈ ಇಂಡಿಯನ್ಸ್‌ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿ ಸೋಲುಗಳ ಮೇಲೆ ಸೋಲನ್ನು ಕಾಣುತ್ತಲೇ ಇತ್ತು. ಆದರೆ ಈ ವೇಳೆ ಜಸ್ಪ್ರಿತ್ ಬುಮ್ರಾ ತಂಡಕ್ಕೆ ಬಂದ ಮೇಲೆ ತಂಡದ ಲಕ್‌ ಹಾಗೂ ಖದರ್ ಚೆಂಜ್ ಆಯ್ತು. ಬುಮ್ರಾ ತಾವು ಅಷ್ಟೇ ಬಿಗುವಿನ ದಾಳಿ ನಡೆಸುವುದಲ್ಲದೇ ತಂಡದ ಬೇರೆ ಬೌಲರ್‌ಗಳ ಪ್ರದರ್ಶನದ ಮೇಲೂ ಪ್ರಭಾವ ಬೀರುವ ಆಟಗಾರ. ಇದರ ಪರಿಣಾಮ ಮುಂಬೈ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಸಾಧ್ಯವಾಗಿದೆ.

Jasprit Bumrah Equals Lasith Malinga s Record Achieves 300 T20 Wickets Milestone in Hyderabad

ಜಸ್ಪ್ರಿತ್‌ ಬುಮ್ರಾ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಹ್ಯಾನ್ರಿಕ್‌ ಕ್ಲಾಸೆನ್‌ ವಿಕೆಟ್‌ ಪಡೆಯುತ್ತಿದ್ದಂತೆ ಮುಂಬೈ ಇಂಡಿಯನ್ಸ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಲಸಿತ್ ಮಲಿಂಗ್ ಸಾಧನೆಯ ಸಮಕ್ಕೆ ನಿಂತರು. ಇವರಿಬ್ಬರೂ ಐಪಿಎಲ್‌ನಲ್ಲಿ ಮುಂಬೈ ಪರ ಆಡಿ 168 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದ್ದಾರೆ. ಮುಂದಿನ ಪಂದ್ಯದಲ್ಲಿ ಬುಮ್ರಾ ಇನ್ನೊಂದು ವಿಕೆಟ್‌ ಪಡೆಯುತ್ತಿದ್ದಂತೆ ದೊಡ್ಡ ಇತಿಹಾಸ ನಿರ್ಮಿಸಲಿದ್ದಾರೆ.

300 ವಿಕೆಟ್ ಸಾಧನೆ

ಕ್ಲಾಸೇನ್‌ ವಿಕೆಟ್‌ ಪಡೆಯುತ್ತಿದ್ದಂತೆ ಟಿ20 ಕ್ರಿಕೆಟ್‌ಯಲ್ಲಿ 300 ವಿಕೆಟ್‌ ಪಡೆದ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ಎರಡನೇ ವೇಗದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಭುವನೇಶ್ವರ್ ಕುಮಾರ್‌ ಈ ಸಾಧನೆಯನ್ನು ಮಾಡಿದ್ದರು.

ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಟಿ20 ಬೌಲರ್ಸ್‌

ಯುಜುವೇಂದ್ರ ಚಹಾಲ್‌ 320 ಪಂದ್ಯ, 373 ವಿಕೆಟ್‌
ಪಿಯೂಷ್‌ ಚಾವ್ಲಾ, 297 ಪಂದ್ಯ, 319 ವಿಕೆಟ್‌
ಭುವನೇಶ್ವರ್ ಕುಮಾರ್‌, 302 ಪಂದ್ಯ, 318 ವಿಕೆಟ್‌
ಆರ್‌ ಅಶ್ವಿನ್‌, 331 ಪಂದ್ಯ, 315 ವಿಕೆಟ್‌
ಜಸ್ಪ್ರಿತ್‌ ಬುಮ್ರಾ, 237 ಪಂದ್ಯ, 300 ವಿಕೆಟ್‌

ವಿಶ್ವದಲ್ಲೇ ಅತಿ ಹೆಚ್ಚು ವಿಕೆಟ್‌ ಪಡೆದ ಟಾಪ್‌ 5 ಬೌಲರ್ಸ್‌

ರಶೀದ್ ಖಾನ್‌, 470 ಪಂದ್ಯ, 640 ವಿಕೆಟ್‌
ಡ್ವೇನ್ ಬ್ರಾವೋ, 582 ಪಂದ್ಯ, 631 ವಿಕೆಟ್‌
ಸುನಿಕ್‌ ನರೈನ್‌, 543 ಪಂದ್ಯ, 581 ವಿಕೆಟ್‌
ಇಮ್ರಾನ್‌ ತಾಹೀರ್‌, 429 ಪಂದ್ಯ, 533 ವಿಕೆಟ್‌
ಶಕೀಬ್‌ ಅಲ್‌ ಹಸನ್‌, 444 ಪಂದ್ಯ, 492 ವಿಕೆಟ್‌

Story first published: Wednesday, April 23, 2025, 22:11 [IST]
Other articles published on Apr 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+