Jasprit Bumrah: ಜಸ್ಪ್ರಿತ್ ಬುಮ್ರಾ 2 ವಿಕೆಟ್ ಪಡೆದರೆ ದಾಖಲೆ: ಏನದು?
ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಟೀಮ್ ಇಂಡಿಯಾದ ಭರವಸೆಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಟೀಮ್ ಇಂಡಿಯಾದ ಹಂಗಾಮಿ ನಾಯಕ ಜಸ್ಪ್ರಿತ್ ಬುಮ್ರಾ ವಿಕೆಟ್ ಬೇಟೆ ನಡೆಸಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಶನಿವಾರ ನಡೆಯುವ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ 2 ವಿಕೆಟ್ ಪಡೆದಿದ್ದೇ ಆದಲ್ಲಿ ಮತ್ತೊಂದು ದೊಡ್ಡ ದಾಖಲೆ ಬರೆಯಲಿದ್ದಾರೆ. ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಐದನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರಿತ್ ಬುಮ್ರಾ ತಂಡವನ್ನು ಮುನ್ನಡೆಸಿದರು. ಈ ವೇಳೆ ಬುಮ್ರಾ ನಿರ್ಧಾರವನ್ನು ಬ್ಯಾಟರ್‌ಗಳು ಸಮರ್ಥಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಆಸೀಸ್ ಮೊದಲ ಇನಿಂಗ್ಸ್ ಆರಂಭದಲ್ಲಿ ತಾವು ಏನು ಮಾಡಬೇಕು ಆ ಕೆಲಸವನ್ನು ಬುಮ್ರಾ ಮಾಡಿ ಮುಗಿಸಿದರು. ಈ ಮೂಲಕ ಮತ್ತೊಂದು ದಾಖಲೆಯ ಹತ್ತಿರಕ್ಕೆ ಬಂದು ನಿಂತರು.

ಸ್ಯಾಮ್ ಜೊತೆಗೆ ಕಿರಿಕಿಕ್
ಜಸ್ಪ್ರಿತ್ ಬುಮ್ರಾ ಸಾಮಾನ್ಯವಾಗಿ ಶಾಂತ ಸ್ವಾಭಾವದ ಮನುಷ್ಯ. ಅವರು ಮೈದಾನದಲ್ಲಿ ಅಗ್ರೇಸಿವ್ ಆಗಿರುವುದು ನೋಡಿರುವುದೇ ಕಡಿಮೆ. ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವಾಗ ಉಸ್ಮಾನ್ ಖವಾಜ ಸ್ಟ್ರೈಕ್ ನಲ್ಲಿದ್ದರು. ಆಗ ಬುಮ್ರಾ ಬೌಲಿಂಗ್ ಲೈನ್ ಅಪ್‌ನಿಂದ ಓಡಿ ಬಂದು ಬೌಲ್ ಮಾಡಲು ಮುಂದಾದರು. ಆಗ ಸೈಡ್ ಸ್ಕ್ರಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ನಿಲ್ಲಿಸಿದರು. ಆಗ ಸ್ಯಾಮ್ ಕಾನ್‌ಸ್ಟಾಸ್ ಮುಂದೆ ಬಂದು ವಾಗ್ವಾದ ನಡೆಸಿದರು. ಬುಮ್ರಾ ಸಹ ಸಿಟ್ಟಾಗಿ ಮಾತಿಗಿಳಿದರು. ಈ ಘಟನೆಯ ಬಳಿಕ ಇದೇ ಓವರ್‌ನಲ್ಲಿ ಖವಾಜ ಪೆವಿಲಿಯನ್ ಸೇರಿದರು.
ಈ ಮೂಲಕ ಜಸ್ಪ್ರಿತ್ ಬುಮ್ರಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಒಟ್ಟು 31 ವಿಕೆಟ್ ಪಡೆದು ಬೀಗಿದ್ದಾರೆ. ಇನ್ನು ಶನಿವಾರ ನಡೆಯುವ ಮೊದಲ ಇನಿಂಗ್ಸ್‌ನಲ್ಲಿ ಇನ್ನು ಎರಡು ವಿಕೆಟ್ ಪಡೆಯುವಲ್ಲಿ ಬುಮ್ರಾ ಯಶಸ್ವಿ ಆದಲ್ಲಿ, ಹರ್ಭಜನ್ ಸಿಂಗ್ ಅವರ ದಾಖಲೆಯ ಸನಿಹಕ್ಕೆ ಬಂದು ನಿಂತಿದ್ದಾರೆ.
ಭಾರತದ ಪರ ಒಂದೇ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಹರ್ಭಜನ್ ಸಿಂಗ್ ಅತಿ ಹೆಚ್ಚು ವಿಕೆಟ್ ಪಡೆದಿದ್ದಾರೆ. ಇವರು ಆಡಿದ 3 ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿದ್ದಾರೆ. ಈ ಪಟ್ಟಿಯಲ್ಲಿ ಬುಮ್ರಾಗೆ ಎರಡನೇ ಸ್ಥಾನ. ಬುಮ್ರಾ ಆಡಿದ 5 ಪಂದ್ಯಗಳಲ್ಲಿ 31 ವಿಕೆಟ್ ಪಡೆದಿದ್ದಾರೆ. ಭಜ್ಜಿ ದಾಖಲೆ ಅಳಿಸಲು ಬುಮ್ರಾಗೆ ಇನ್ನು ಎರಡು ವಿಕೆಟ್ ಅವಶ್ಯಕತೆ ಇದೆ.

ಪಂದ್ಯದ ಚಿತ್ರಣ
ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ, ಮೊದಲ ಇನಿಂಗ್ಸ್‌ನಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 9 ರನ್ ಸೇರಿಸಿದೆ. ಆರಂಭಿಕ ಸ್ಯಾಮ್ ಕಾನ್‌ಸ್ಟಾಸ್ 7 ರನ್ ಬಾರಿಸಿದ್ದು, ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications