ಜಾವಗಲ್ ಶ್ರೀನಾಥ್ ದಾಖಲೆ ಛಿದ್ರ ? ಬುಮ್ರಾ ಹೊಸ ಮೈಲಿಗಲ್ಲು
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಎರಡನೇ ಟೆಸ್ಟ್ ಶನಿವಾರ ಆರಂಭವಾಗಲಿದೆ. ಈಗಾಗಲೇ ಎರಡೂ ತಂಡಗಳು ಗುವಾಹಟಿಯತ್ತ ಮುಖಮಾಡಿವೆ. ಈ ವೇಳೆ ಟೀಮ್ ಇಂಡಿಯಾದ ಅಭಿಮಾನಿಗಳ ಕಣ್ಣುಗಳು ಮಾತ್ರ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಮೇಲೆ ನೆಟ್ಟಿರುತ್ತವೆ. ಬುಮ್ರಾ ಎರಡನೆ ಟೆಸ್ಟ್‌ನಲ್ಲಿ ದೊಡ್ಡ ದಾಖಲೆಯನ್ನು ಬರೆಯುವ ಕನಸಿನಲ್ಲಿದ್ದಾರೆ. ಈ ಮೂಲಕ ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ದಾಖಲೆ ಅಳಿಸುವ ಸನಿಹದಲ್ಲಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ್ದ ಜಸ್ಪ್ರೀತ್ ಬುಮ್ರಾ, ಗುವಾಹಟಿಯಲ್ಲೂ ಇದೇ ಪ್ರದರ್ಶನ ಮುಂದುವರೆಸುವ ವಿಶ್ವಾಸದಲ್ಲಿದ್ದಾರೆ. ಕೋಲ್ಕತ್ತ ಟೆಸ್ಟ್ ಪಂದ್ಯ ಮೊದಲ ಇನಿಂಗ್ಸ್‌ನಲ್ಲಿ ಬುಮ್ರಾ 5 ವಿಕೆಟ್ ಪಡೆದು ದಕ್ಷಿಣ ಆಫ್ರಿಕಾಕ್ಕೆ ಪೆಟ್ಟು ನೀಡಿದ್ದರು. ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ ಪಂದ್ಯದ ವೇಳೆ ಬುಮ್ರಾ 5 ವಿಕೆಟ್ ಪಡೆದಿದ್ದೇ ಆದಲ್ಲಿ ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ.

ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈ ವರೆಗೆ ಆಡಿದ 51 ಟೆಸ್ಟ್ ಪಂದ್ಯಗಳಲ್ಲಿ 2.77ರ ಎಕಾನಮಿಯಲ್ಲಿ 232 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ತಮ್ಮ ಅಮೋಘ ಲಯವನ್ನು ಬುಮ್ರಾ ಮುಂದುವರೆಸಿದ್ದೇ ಆದಲ್ಲಿ, ಕನ್ನಡಿಗ ಜಾವಗಲ್ ಶ್ರೀನಾಥ್ ಅವರ ದಾಖಲೆಯನ್ನು ಮೀರಿ ನಿಲ್ಲಬಹುದು. ಶ್ರೀನಾಥ್ 1991 ಮತ್ತು 2002 ರ ನಡುವೆ ಭಾರತಕ್ಕಾಗಿ ಒಟ್ಟು 67 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಆಡಿದ 121 ಇನ್ನಿಂಗ್ಸ್‌ಗಳಲ್ಲಿ 30.49 ಸರಾಸರಿಯಲ್ಲಿ 236 ವಿಕೆಟ್‌ಗಳನ್ನು ಪಡೆದಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 4 ವಿಕೆಟ್ ಪಡೆದಿದ್ದೇ ಆದಲ್ಲಿ ಜಾವಗಲ್ ಶ್ರೀನಾಥ್ ಸಾಧನೆಯ ಸಮಕ್ಕೆ ನಿಲ್ಲಲಿದ್ದಾರೆ. ಒಂದು ವೇಳೆ 5 ವಿಕೆಟ್ ಪಡೆದಲ್ಲಿ ಕನ್ನಡಿಗರ ಸಾಧನೆಯನ್ನು ಮೀರಿ ನಿಲ್ಲಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್
1. ಅನಿಲ್ ಕುಂಬ್ಳೆ - 619
2. ರವಿಚಂದ್ರನ್ ಅಶ್ವಿನ್ - 537
3. ಕಪಿಲ್ ದೇವ್ - 434
4. ಹರ್ಭಜನ್ ಸಿಂಗ್ - 417
5. ರವೀಂದ್ರ ಜಡೇಜಾ - 342
6. ಇಶಾಂತ್ ಶರ್ಮಾ - 311
7. ಜಹೀರ್ ಖಾನ್ - 311
8. ಬಿಶನ್ ಸಿಂಗ್ ಬೇಡಿ - 266
9. ಭಾಗವತ್ ಚಂದ್ರಶೇಖರ್ - 242
10. ಜಾವಗಲ್ ಶ್ರೀನಾಥ್ - 236
ಭಾರತಕ್ಕೆ ಮಹತ್ವದ ಪಂದ್ಯ
ಗುವಾಹಟಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ 2ನೇ ಟೆಸ್ಟ್ ಶನಿವಾರದಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯ ಟೀಮ್ ಇಂಡಿಯಾಕ್ಕೆ ಮಹತ್ವದಾಗಿದ್ದು, ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಈಗಾಗಲೇ ದಕ್ಷಿಣ ಆಫ್ರಿಕಾ ಒಂದು ಪಂದ್ಯ ಗೆದ್ದಿದ್ದರಿಂದ, ಆತಿಥೇಯ ತಂಡ ಈ ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications