For Quick Alerts
ALLOW NOTIFICATIONS  
For Daily Alerts
 

Jasprit Bumrah: ಶಮಿ ಮೀರಿಸುವ ಕನಸಿನಲ್ಲಿ ಬುಮ್ರಾ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡು ಪಂದ್ಯಗಳ ಟೆಸ್ಟ್‌ ಸರಣಿ ನವೆಂಬರ್‌ 14 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಟೆಸ್ಟ್‌ ಸರಣಿಯಲ್ಲಿ ಜಯ ಸಾಧಿಸಿ, ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಸುಧಾರಣೆ ಕಾಣುವ ಆಸೆ ಭಾರತ ತಂಡದ್ದಾಗಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ದೊಡ್ಡ ದಾಖಲೆಗಳನ್ನು ನಿರ್ಮಿಸುವ ಕನಸಿನಲ್ಲಿದ್ದಾರೆ. ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಸಹ ಇದೇ ವೇಳೆ ದೊಡ್ಡ ದಾಖಲೆಯ ಮೆಲೆ ಕಣ್ಣು ನೆಟ್ಟಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಏಕದಿನ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದ ಬುಮ್ರಾ, ಟಿ20 ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಈ ವೇಳೆ ಬುಮ್ರಾ ಸ್ಥಿರ ಪ್ರದರ್ಶನ ನೀಡಿದ್ದರು. ಇದೇ ಪ್ರದರ್ಶನವನ್ನು ಬುಮ್ರಾ ತವರಿನಲ್ಲೂ ಮುಂದುವರೆಸು ಇರಾದೆಯನ್ನು ಹೊಂದಿದ್ದಾರೆ. ಇದೇ ವೇಳೆ ಬುಮ್ರಾ ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿಕೆಟ್‌ಗಳನ್ನು ಪಡೆದು ಮತ್ತೊಂದು ಮೈಲಿಗಲ್ಲು ತಲುಪುವ ಕನಸು ಹೊಂದಿದ್ದಾರೆ.

Jasprit Bumrah Eyes Major Milestone in India vs South Africa Test Series Set to Overtake Shami

ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಗೆಲುವಿನ ನಗೆ ಬೀರಬೇಕಾದಲ್ಲಿ ಜಸ್ಪ್ರೀತ್ ಬುಮ್ರಾ ಪ್ರದರ್ಶನ ತುಂಬ ಮುಖ್ಯ. 31 ವರ್ಷದ ಬುಮ್ರಾ 50 ಟೆಸ್ಟ್‌ ಪಂದ್ಯಗಳಲ್ಲಿ 226 ವಿಕೆಟ್‌ ಕಬಳಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಬುಮ್ರಾ 4 ವಿಕೆಟ್‌ ಪಡೆಯುವಲ್ಲಿ ಸಫಲರಾದರೆ, ಮೊಹಮ್ಮದ್ ಶಮಿ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. 36 ವರ್ಷದ ಶಮಿ ಭಾರತದ ಪರ 64 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 229 ವಿಕೆಟ್‌ ಕಬಳಿಸಿದ್ದಾರೆ. ಬುಮ್ರಾ ಕೋಲ್ಕತ್ತಾದಲ್ಲಿ 4 ವಿಕೆಟ್‌ ಪಡೆದಲ್ಲಿ ಶಮಿ ದಾಖಲೆಯನ್ನು ಮೀರಿ ನಿಲ್ಲಬಹುದಾಗಿದೆ. ಇನ್ನು ಭಾರತದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಕೀರ್ತಿ ಅನಿಲ್‌ ಕುಂಬ್ಳೆ ಅವರಿಗೆ ಸಲ್ಲುತ್ತದೆ. ಕುಂಬ್ಳೆ 619 ವಿಕೆಟ್‌ ಪಡೆದಿದ್ದಾರೆ.

ಬುಮ್ರಾ ಸಾಧನೆ

ಬುಮ್ರಾ 2018 ರಲ್ಲಿ ಕೇಪ್ ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಜಸ್ಪ್ರೀತ್ ಬುಮ್ರಾ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಆಡಿದ 8 ಪಂದ್ಯಗಳಲ್ಲಿ ಬುಮ್ರಾ 2.97 ಎಕಾನಮಿಯಲ್ಲಿ 38 ವಿಕೆಟ್‌ ಕಬಳಿಸಿದ್ದಾರೆ. ಇನ್ನು ಭಾರತದ ನೆಲದಲ್ಲೂ ಬುಮ್ರಾ ಮಾರಕ ಎಂಬುದಕ್ಕೆ ಅವರ ಅಂಕಿ ಅಂಶಗಳೇ ಸಾಕ್ಷಿ. ಇವರು ಆಡಿದ 14 ಪಂದ್ಯಗಳಲ್ಲಿ 2.87 ಎಕಾನಮಿಯಲ್ಲಿ 54 ವಿಕೆಟ್‌ ಪಡೆದಿದ್ದಾರೆ. ವೆಸ್ಟ್‌ ಇಂಡೀಸ್ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ಬುಮ್ರಾ ಎದುರಾಳಿಗಳನ್ನು ಕಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧವೂ ಬುಮ್ರಾಇದೇ ಪ್ರದರ್ಶನ ನೀಡುವ ಇರಾದೆ ಹೊಂದಿದ್ದಾರೆ.

Story first published: Tuesday, November 11, 2025, 10:27 [IST]
Other articles published on Nov 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+