IND vs BAN: ಬಾಂಗ್ಲಾದೇಶಕ್ಕೆ ಮೊದಲ ಓವರ್‌ನಲ್ಲಿ ಮ್ಯಾಜಿಕ್ ತೋರಿಸಿದ ಜಸ್ಪ್ರೀತ್ ಬುಮ್ರಾ
ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಟೆಸ್ಟ್‌ನ ಎರಡನೇ ದಿನವಾದ ಇಂದು ಶುಕ್ರವಾರ ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್‌ಗಳಿಗೆ ಆಲೌಟಾಗಿದೆ.
ಇದಾದ ಬಳಿಕ ಬಾಂಗ್ಲಾದೇಶದ ಆರಂಭಿಕ ಜೋಡಿ ಶಾದ್ಮನ್ ಇಸ್ಲಾಂ ಮತ್ತು ಜಾಕಿರ್ ಹಸನ್ ಓಪನಿಂಗ್ ಮಾಡಲು ಮೈದಾನಕ್ಕೆ ಬಂದರು. ಆದರೆ, ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲಿಯೇ ಈ ಜೋಡಿಗೆ ಮ್ಯಾಜಿಕ್ ತೋರಿಸಿದ್ದಾರೆ.

ಬಾಂಗ್ಲಾದೇಶದ ಇನ್ನಿಂಗ್ಸ್‌ನ ಮೊದಲ ಓವರ್ ಬೌಲಿಂಗ್ ಮಾಡಿದ ಬುಮ್ರಾ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಜಸ್ಪ್ರೀತ್ ಬುಮ್ರಾಗೆ ಮೊದಲ ಓವರ್ ಬೌಲಿಂಗ್ ಮಾಡುವಂತೆ ಹೇಳಿದರು.
ನಾಯಕನ ಆಜ್ಞೆಯಂತೆ ಬೌಲಿಂಗ್ ದಾಳಿಗಿಳಿದ ಬುಮ್ರಾ ಅವರು ಬಾಂಗ್ಲಾದೇಶ ತಂಡಕ್ಕೆ ಹಗಲಿನಲ್ಲಿ ನಕ್ಷತ್ರ ತೋರಿಸಿದರು. ಬಾಂಗ್ಲಾ ತಂಡದ ಎಡಗೈ ಬ್ಯಾಟರ್ ಶಾದ್ಮನ್ ಇಸ್ಲಾಂ ಮೊದಲ ಓವರ್‌ನ ಎರಡನೇ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ತಮ್ಮ ಮತ್ತು ತಂಡದ ಖಾತೆಯನ್ನು ತೆರೆದರು. ಆದರೆ, 5ನೇ ಎಸೆತದಲ್ಲಿ ಶಾದ್ಮನ್ ಅವರನ್ನು ಬುಮ್ರಾ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅಚ್ಚರಿ ಮೂಡಿಸಿದರು.
ಬುಮ್ರಾ ಅವರು ಹಾಕಿದ ಲೆಂಗ್ತ್ ಬಾಲ್ ಅನ್ನು ಗುರುತಿಸುವಲ್ಲಿ ಶಾದ್ಮನ್ ವಿಫಲವಾದರು. ಸ್ಟಂಪ್‌ಗಳ ಮೇಲೆ ಬಾಲ್ ಹೋಗುತ್ತದೆ ಎಂದು ಭಾವಿಸಿದ ಶಾದ್ಮನ್ ಯಾವುದೇ ಶಾಟ್ ಆಡಲಿಲ್ಲ. ಆದರೆ, ಬುಮ್ರಾ ಅವರ ಮಿಂಚಿನ ಎಸೆತ ಆಫ್ ಸ್ಟಂಪ್‌ಗೆ ಹೋಗ ಬಡಿಯಿತು. ಈ ವಿಕೆಟ್ ಬೀಳುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಮೈದಾನದಲ್ಲಿ ಸಂಭ್ರಮಾಚರಣೆ ಮಾಡಿದರು.
ಭಾರತದ ಮೊದಲ ಇನಿಂಗ್ಸ್
ಚೆನ್ನೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 376 ರನ್ ಗಳಿಸಿದೆ. ಭಾರತದ ಅಗ್ರ ಸ್ಕೋರರ್ ಎಂದರೆ ಸ್ಟಾರ್ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್. ಅವರು ತಮ್ಮ ತವರು ನೆಲದಲ್ಲಿ 113 ರನ್‌ಗಳ ಅದ್ಭುತ ಶತಕ ಸಿಡಿಸಿ ಟೀಮ್ ಇಂಡಿಯಾಕ್ಕೆ ಆಸರೆಯಾದರು. ಮತ್ತೊಂದೆಡೆ ರವೀಂದ್ರ ಜಡೇಜಾ ಶತಕ ವಂಚಿತರಾಗಿ 86 ರನ್ ಗಳಿಸಿ ಔಟಾಗಿ ಪೆವಿಲಿಯನ್‌ಗೆ ಮರಳಿದರು.
ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (56) ಅಮೋಘ ಅರ್ಧಶತಕ ಗಳಿಸಿದರು. ಬಾಂಗ್ಲಾದೇಶ ಪರ ಬಲಗೈ ವೇಗದ ಬೌಲರ್ ಹಸನ್ ಮಹಮೂದ್ 5 ವಿಕೆಟ್ ಪಡೆದರೆ, ತಸ್ಕಿನ್ ಅಹ್ಮದ್ ಕೂಡ 3 ವಿಕೆಟ್ ಕಬಳಿಸಿದರು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications