ಆಗಸ್ಟ್ 12 ಸೋಮವಾರ, ಭಾರತ ಕ್ರಿಕೆಟ್ ತಂಡದ ಆಟಗಾರರು ಮೈದಾನದಲ್ಲಿ ಒಂದಲ್ಲ ಒಂದು ದಾಖಲೆ ಮಾಡುತ್ತಿರುತ್ತಾರೆ. ಕೆಲವು ದಾಖಲೆಗಳನ್ನು ಇಂದಿಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಇಂತಹ ದಾಖಲೆಯನ್ನು ಭಾರತದ ಸ್ಟಾರ್ ಅಪಾಯಕಾರಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮಾಡಿದ್ದಾರೆ.
ಈ ದಾಖಲೆಯನ್ನು ಅವರು ಬೌಲಿಂಗ್‌ನಲ್ಲಿ ಮಾಡಿಲ್ಲ. ಬದಲಾಗಿ ಬ್ಯಾಟಿಂಗ್ ಮಾಡಿರುವುದು ವಿಶೇಷ. ಇದುವರೆಗೂ ಭಾರತ ತಂಡದ ದಿಗ್ಗಜ ಬ್ಯಾಟರ್‌ಗಳಿಂದಲ್ಲೇ ಈ ದಾಖಲೆಯನ್ನು ಮಾಡಲು ಸಾಧ್ಯವಾಗಲಿಲ್ಲ. ಭಾರತ ಮಾತ್ರವಲ್ಲದೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಟೆಸ್ಟ್ ತಂಡಗಳ ಸ್ಫೋಟಕ ಬ್ಯಾಟರ್‌ಗಳಿಂದಲ್ಲೂ ಈ ದಾಖಲೆ ಸನಿಹವೂ ಬರುವುದಕ್ಕೆ ಆಗಿಲ್ಲ.

ಟಿ20 ಮತ್ತು ಟಿ10 ಕ್ರಿಕೆಟ್ ಯುಗದಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ಶೈಲಿಯೂ ಬದಲಾಗಿದೆ. ವಿಶ್ವದ ಬಹುತೇಕ ತಂಡಗಳು ಟೆಸ್ಟ್ ಕ್ರಿಕೆಟ್ ಅನ್ನು ಅತ್ಯಂತ ಆಕ್ರಮಣಕಾರಿಯಾಗಿ ಆಡುತ್ತಿವೆ. ಇದೇ ನಿಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಜಸ್ಪ್ರೀತ್ ಬುಮ್ರಾ ಹೊಂದಿದ್ದಾರೆ.
ಇಂತಹ ಅಪರೂಪದ ದಾಖಲೆ ಭಾರತೀಯರ ಹೆಸರಿನಲ್ಲಿರುವುದು ದೊಡ್ಡ ವಿಷಯ. ಜಸ್ಪ್ರೀತ್ ಬುಮ್ರಾ ಅಲ್ಲದೆ, ಟೆಸ್ಟ್ ಕ್ರಿಕೆಟ್‌ನ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ಇಲ್ಲಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ 35 ರನ್ ಗಳಿಸಿದ ವಿಶ್ವದಾಖಲೆ ಹೊಂದಿದ್ದಾರೆ. ಜುಲೈ 2022 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ಐದನೇ ಟೆಸ್ಟ್ ಪಂದ್ಯದಲ್ಲಿ ವೇಗದ ಬೌಲರ್ ಸ್ಟೀವ್ ಬ್ರಾಡ್ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಈ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಬುಮ್ರಾ ಅವರ ಬ್ಯಾಟ್‌ನಿಂದ ಒಂದೇ ಓವರ್‌ನಲ್ಲಿ 29 ರನ್ ಬಂದರೆ, ಉಳಿದ 6 ರನ್ ಹೆಚ್ಚುವರಿಯಾಗಿ ಹರಿದು ಬಂದವು.
ಜಸ್ಪ್ರೀತ್ ಬುಮ್ರಾ ಒಂದೇ ಓವರ್‌ನಲ್ಲಿ 35 ರನ್ ಬಾರಿಸುವ ಮೂಲಕ ಕಪಿಲ್ ದೇವ್ ಮತ್ತು ಹಾರ್ದಿಕ್ ಪಾಂಡ್ಯ ದಾಖಲೆಯನ್ನು ಮುರಿದಿದ್ದಾರೆ. 2017ರ ಆಗಸ್ಟ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಮಿಲಿಂದ ಪುಷ್ಪಕುಮಾರ ಅವರ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ 26 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಭಾರತದ ಮಾಜಿ ನಾಯಕ ಕಪಿಲ್ ದೇವ್ ಜುಲೈ 1990 ರಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಎಡ್ಡಿ ಹೆಮ್ಮಿಂಗ್ಸ್ ಅವರ ಓವರ್‌ನಲ್ಲಿ 24 ರನ್ ಹೊಡೆದಿದ್ದರು.
1) ಇಂಗ್ಲೆಂಡ್‌ನ ಎಡ್ಡಿ ಹೆಮಿಂಗ್ಸ್ vs ಕಪಿಲ್ ದೇವ್- 4 ಸಿಕ್ಸರ್‌ಗಳು- 1990
2) ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ vs ಯಶಸ್ವಿ ಜೈಸ್ವಾಲ್- 3 ಸಿಕ್ಸರ್‌ಗಳು- 2024
3) ವೆಸ್ಟ್ ಇಂಡೀಸ್‌ನ ಡಿ ಮೊಹಮ್ಮದ್ vs ಎಂಎಸ್ ಧೋನಿ- 3 ಸಿಕ್ಸರ್‌ಗಳು- 2006
4) ಶ್ರೀಲಂಕಾದ ಮಿಲಿಂದ ಪುಷ್ಪಕುಮಾರ vs ಹಾರ್ದಿಕ್ ಪಾಂಡ್ಯ- 3 ಸಿಕ್ಸರ್‌ಗಳು- 2017
5) ದಕ್ಷಿಣ ಆಫ್ರಿಕಾದ ಡೆನ್ ಪಿಟ್ vs ರೋಹಿತ್ ಶರ್ಮಾ- 3 ಸಿಕ್ಸರ್‌ಗಳು- 2019