ಭಾರತ ತಂಡದಿಂದ ಬೂಮ್ರಾ ಹೊರಗಿರುವುದಕ್ಕೆ ಅಸಲಿ ಕಾರಣ ಬಯಲು!

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಸದ್ಯ ಟೆಸ್ಟ್ ಸರಣಿ ನಡೆಯುತ್ತಿದೆ. ಆದರೆ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ತಂಡದಲ್ಲಿಲ್ಲ. ವೈಯಕ್ತಿಕ ಕಾರಣ ನೀಡಿ ಬೂಮ್ರಾ ತಂಡದಿಂದ ಹೊರಗುಳಿದಿದ್ದಾರೆ. ಮುಂಬರಲಿರುವ ನಿಯಮಿತ ಓವರ್‌ಗಳ ಸರಣಿಯಲ್ಲೂ ಬೂಮ್ರಾ ಆಡೋದು ಅನುಮಾನವಾಗಿದೆ.
ಇಂಗ್ಲೆಂಡ್ ವಿರುದ್ಧ ಇನ್ನೂ ಟೆಸ್ಟ್ ಪಂದ್ಯವಿದೆ, ಐದು ಪಂದ್ಯಗಳ ಟಿ20ಐ ಸರಣಿಯಿದೆ, 3 ಪಂದ್ಯಗಳ ಏಕದಿನ ಸರಣಿಯಿದೆ. ಈ ಯಾವುದೂ ಪಂದ್ಯಗಳಲ್ಲಿ ಬೂಮ್ರಾ ಭಾರತ ಪರ ಆಡದೆ ವಿಶ್ರಾಂತಿ ಪಡೆಯಲಿದ್ದಾರೆ. ಕಾರಣ ಬೂಮ್ರಾ ಮದುವೆಯಾಗುವುದರಲ್ಲಿದ್ದಾರೆ ಎಂದು ವರದಿಯೊಂದು ಹೇಳಿದೆ.
'ತಾನು ಮದುವೆಯಾಗುತ್ತಿರುವುದಾಗಿ ಮತ್ತು ಅದರ ಸಿದ್ಧತೆಗೆ ರಜೆ ತೆಗೆದುಕೊಳ್ಳುವುದಾಗಿ ಬೂಮ್ರಾ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ,' ಎಂದು ಬಿಸಿಸಿಐ ಮೂಲವೊಂದು ಎಎನ್‌ಐಗೆ ಹೇಳಿದೆ. ಈ ಪ್ರಕಾರ 27ರ ಹರೆಯದ ಮುಂಬೈ ಇಂಡಿಯನ್ಸ್ ಬೌಲರ್ ಬೂಮ್ರಾ ಶೀಘ್ರ ದಾಂಪತ್ಯ ಜೀವನಕ್ಕೆ ಕಾಲಿರಿಸುವುದರಲ್ಲಿದ್ದಾರೆ.
ಸದ್ಯ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬೂಮ್ರಾ ಎರಡು ಪಂದ್ಯಗಳಲ್ಲಿ ಆಡಿ ನಾಲ್ಕು ವಿಕೆಟ್ ಪಡೆದುಕೊಂಡಿದ್ದರು. ದ್ವಿತೀಯ ಟೆಸ್ಟ್‌ನಲ್ಲಿ ವಿಶ್ರಾಂತಿ ಪಡೆದಿದ್ದ ಬೂಮ್ರಾ ಮೂರನೇ ಟೆಸ್ಟ್‌ನಲ್ಲಿ ಆಡಿದ್ದರಾದರೂ ಅವರಿಗೆ ವಿಕೆಟ್ ಸಿಕ್ಕಿರಲಿಲ್ಲ. ಯಾಕೆಂದರೆ ಪಿಚ್ ಸ್ಪಿನ್ನರ್‌ಗಳ ಪರವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications