IND vs AUS: ಕೊಹ್ಲಿ-ಪಂತ್ ಅಲ್ಲ; ರವಿಶಾಸ್ತ್ರಿ ಪ್ರಕಾರ ಇವರೇ 'ಒನ್ ಮ್ಯಾನ್ ಆರ್ಮಿ'
ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಉಭಯ ತಂಡಗಳು ಮೆಲ್ಬೋರ್ನ್‌ನಲ್ಲಿ ಡಿಸೆಂಬರ್ 26 ರಂದು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಮಾಜಿ ಹೆಡ್‌ಕೋಚ್ ರವಿಶಾಸ್ತ್ರಿ ಅವರು ಟೀಮ್ ಇಂಡಿಯಾದ ಒನ್ ಮ್ಯಾನ್ ಆರ್ಮಿ ಅನ್ನು ಹೆಸರಿಸಿದ್ದಾರೆ. ರವಿಶಾಸ್ತ್ರಿ ಪ್ರಕಾರ ಭಾರತದ ಒನ್ ಮ್ಯಾನ್ ಆರ್ಮಿ ಎಂದರೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಥವಾ ವಿಕೆಟ್ ಕೀಪರ್ ರಿಷಬ್ ಪಂತ್ ಅಲ್ಲ. ವೇಗದ ಬೌಲರ್ ಜಸ್ಪ್ರೀತ್ ಬುಮ್ಯಾ ಅವರನ್ನು ಟೀಮ್ ಇಂಡಿಯಾದ ಒನ್ ಮ್ಯಾನ್ ಆರ್ಮಿ ರವಿಶಾಸ್ತ್ರಿ ಕರೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಜಸ್ಪ್ರಿತ್ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಇನ್ನೊಂದು ಕಡೆಯಿಂದ ಭಾರತದ ಬೌಲರ್‌ಗಳಿಂದ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ಇಲ್ಲ. ಹೀಗಾಗಿ ಜಸ್ಪ್ರೀತ್ ಬುಮ್ಯಾ ಅವರನ್ನು ರವಿಶಾಸ್ತ್ರಿ ಗುಣಗಾನ ಮಾಡಿದ್ದಾರೆ.

ರವಿಶಾಸ್ತ್ರಿ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತಮನಾಡಿರುವ ರವಿಶಾಸ್ತ್ರಿ ಅವರು, ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವಾಗ ಪ್ರತಿ ಚೆಂಡಿನಲ್ಲಿ ಅವರು ಒಂದು ವಿಕೆಟ್ ಪಡೆಯುವ ನಿರೀಕ್ಷೆಯಲ್ಲಿರುತ್ತಾರೆ. ಆದರೆ ನಾವು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಅರ್ಧದಾರಿಯಲ್ಲೇ ಇಲ್ಲ. ಇದು ನಮಗೆ ಸಮಸ್ಯೆಯಾಗಿದೆ. ನಾವು ಮುಂದೆ ಮೇಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದೇವೆ. ಈ ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕಬಲ್ಲ ಏಕೈಕ ಬೌಲರ್ ಎಂದರೆ ಬುಮ್ರಾ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ದೌರ್ಬಲ್ಯವನ್ನು ವಿವರಿಸಿದ ರವಿಶಾಸ್ತ್ರಿ, 'ಸದ್ಯ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕವು ನನಗೆ ದುರ್ಬಲವಾಗಿರುವಂತೆ ಕಾಣಿಸುತ್ತಿದೆ. ಭಾರತವು ಇದರ ಲಾಭವನ್ನು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿಯೂ ಇದರ ಲಾಭವನ್ನು ಪಡೆಯಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯು ಪ್ರಸ್ತುತ ಸಮಬಲದಲ್ಲಿದೆ. ಬುಮ್ರಾ ಒಂದು ರೀತಿಯಲ್ಲಿ ಭಾರತವನ್ನು ಈ ಸ್ಥಾನಕ್ಕೆ ಏಕಾಂಗಿ ಕೊಂಡೊಯ್ದಿದ್ದಾರೆ ಎಂದಿದ್ದಾರೆ.
ಬುಮ್ರಾ ಪ್ರದರ್ಶನ
ಜಸ್ಪ್ರೀತ್ ಬುಮ್ರಾ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಡೆ ಗೋಡೆಯಾಗಿದ್ದಾರೆ. ಬುಮ್ರಾ ಪರ್ತ್ ಟೆಸ್ಟ್ ಪಂದ್ಯದಲ್ಲಿ ನಾಯಕರಾಗಿ 8 ವಿಕೆಟ್‌ಗಳನ್ನು ಕಬಳಿಸಿ ಪಂದ್ಯದ ಹೀರೋ ಎಂದು ಸಾಬೀತುಪಡಿಸಿದರು. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ ಮತ್ತೆ ಮಾರಕ ಬೌಲಿಂಗ್ ಪ್ರದರ್ಶನ ನೀಡಿ 4 ವಿಕೆಟ್ ಪಡೆದಿದ್ದರು. ಆದರೆ ಅವರಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ಯಶಸ್ಸು ಸಿಗಲಿಲ್ಲ. ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಪುನರಾಗಮನವನ್ನು ಮಾಡಿ 9 ವಿಕೆಟ್‌ಗಳನ್ನು ಉರುಳಿಸಿದರು. ಇದರೊಂದಿಗೆ ಈ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ಸಿಯಾಗಿದ್ದರು. ಇದೀಗ ಮೆಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಬುಮ್ರಾ ಮಾತ್ರವಲ್ಲದೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಿಡಿಸುವ ಶತಕವನ್ನು ಸಂಭ್ರಮಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications