Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah: ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ಸಾಧನೆಯ ಹೊಸ್ತಿಲಲ್ಲಿರುವ ಜಸ್ಪ್ರೀತ್ ಬುಮ್ರಾ!

ಜೂನ್‌ 13 ಗುರುವಾರ, ಟೀಮ್‌ ಇಂಡಿಯಾದ ಅನುಭವಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪ್ರಸ್ತುತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿದ್ದಾರೆ. ಇದರೊಂದಿಗೆ ತಮ್ಮ ಹೆಸರನಲ್ಲಿ ಮತ್ತೊಂದು ವಿಶಿಷ್ಟ ದಾಖಲೆ ಮಾಡುವ ಅವಕಾಶವನ್ನು ಹೊಂದಿದ್ದಾರೆ.

ಟಿ20 ವಿಶ್ವಕಪ್ 2024‌ರಲ್ಲಿ ಭಾರತ ತಂಡ ಇಲ್ಲಿಯವರೆಗೆ 3 ಗುಂಪು ಹಂತದ ಪಂದ್ಯಗಳನ್ನು ಆಡಿದೆ. ಐರ್ಲೆಂಡ್, ಪಾಕಿಸ್ತಾನ ಮತ್ತು ಅಮೆರಿಕ ತಂಡಗಳನ್ನು ಮಣಿಸಿ ಟೀಮ್‌ ಇಂಡಿಯಾ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಈ ಸಾಧನೆಯೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಸೂಪರ್-8 ಸುತ್ತಿಗೆ ಅರ್ಹತೆ ಪಡೆದಿದೆ.

Jasprit Bumrah is going to make a unique achievement in T20 cricket

ಜಸ್ಪ್ರೀತ್ ಬುಮ್ರಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಯಶಸ್ಸನ್ನು ಸಾಧಿಸಲು ಬಹಳ ಹತ್ತಿರದಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಇದುವರೆಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 65 ಪಂದ್ಯಗಳಲ್ಲಿ 79 ವಿಕೆಟ್ ಪಡೆದಿದ್ದಾರೆ. ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಇನ್ನೂ 21 ವಿಕೆಟ್‌ಗಳನ್ನು ಕಬಳಿಸಲು ಯಶಸ್ವಿಯಾದರೆ, ಅವರು ಇತಿಹಾಸ ಸೃಷ್ಟಿಸಲಿದ್ದಾರೆ.

ಜಸ್ಪ್ರೀತ್ ಬುಮ್ರಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪೂರೈಸಲಿದ್ದಾರೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಹಾಗೂ ಏಕೈಕ ಬೌಲರ್ ಎಂಬ ಹೆಗ್ಗಳಿಕೆಗೆ ಜಸ್ಪ್ರೀತ್ ಬುಮ್ರಾ ಪಾತ್ರರಾಗಲಿದ್ದಾರೆ.

ವಿಶ್ವದ ಅತ್ಯಂತ ಯಶಸ್ವಿ ಬೌಲರ್

ಟಿ20 ವಿಶ್ವಕಪ್ 2024ರಲ್ಲಿ ಭಾರತ ಫೈನಲ್‌ಗೆ ತಲುಪಿದರೆ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಭಾರತ ಜೂನ್ 15 ರಂದು ಕೆನಡಾ ವಿರುದ್ಧ ಗುಂಪು ಹಂತದ ಪಂದ್ಯವನ್ನು ಆಡಬೇಕಾಗಿದೆ.

ಇದಾದ ಬಳಿಕ ಟೀಮ್‌ ಇಂಡಿಯಾ ಸೂಪರ್-8 ಸುತ್ತಿನಲ್ಲಿ 3 ಪಂದ್ಯಗಳನ್ನು ಆಡಲಿದೆ. ನಂತರ ಟೀಮ್‌ ಇಂಡಿಯಾ ಅರ್ಹತೆ ಪಡೆದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳನ್ನೂ ಆಡುವ ಅವಕಾಶವಿದೆ.

ಜಸ್ಪ್ರೀತ್ ಬುಮ್ರಾ ಅವರು ವೆಸ್ಟ್ ಇಂಡೀಸ್‌ನ ಪಿಚ್‌ಗಳಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಅಲ್ಲಿ ಟಿ20 ವಿಶ್ವಕಪ್‌ನ ಎರಡನೇ ಹಂತದ ಪಂದ್ಯಗಳನ್ನು ಆಡುವುದರಿಂದ ಜಸ್ಪ್ರೀತ್ ಬುಮ್ರಾ ಎದುರಾಳಿ ತಂಡಗಳಿಗೆ ಮಾರಕವಾಗಬಹುದು.

ಬುಮ್ರಾ ದಾಖಲೆಗಳು

ಜಸ್ಪ್ರೀತ್ ಬುಮ್ರಾ ಭಾರತ ಪರ 65 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 79 ವಿಕೆಟ್ ಪಡೆದಿದ್ದಾರೆ. ಟಿ20 ವಿಶ್ವಕಪ್‌ ತಂಡದಲ್ಲಿರುವ ಮತ್ತೊರ್ವ ಟೀಮ್‌ ಇಂಡಿಯಾ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಟಿ20ಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿ ಅಗ್ರಸ್ಥಾನದಲ್ಲಿದ್ದಾರೆ.

ಚಹಾಲ್ 80 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಂದ 96 ವಿಕೆಟ್ ಪಡೆದಿದ್ದಾರೆ. ಚಹಾಲ್ ಅಂತಾರಾಷ್ಟ್ರೀಯ ಟಿ20ಯಲ್ಲಿ ಒಮ್ಮೆ 5 ವಿಕೆಟ್ ಪಡೆದಿದ್ದಾರೆ. ಇದೀಗಾ ಜಸ್ಪ್ರೀತ್ ಬುಮ್ರಾ ಅವರು ಚಹಾಲ್ ಅನ್ನು ಮೀರಿಸುವ ಅವಕಾಶವನ್ನೂ ಸಹಾ ಹೊಂದಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತ ಬೌಲರ್

  • ಯುಜ್ವೇಂದ್ರ ಚಹಾಲ್ - 96 ವಿಕೆಟ್
  • ಭುವನೇಶ್ವರ್ ಕುಮಾರ್ - 90 ವಿಕೆಟ್
  • ಹಾರ್ದಿಕ್ ಪಾಂಡ್ಯ - 80 ವಿಕೆಟ್
  • ಜಸ್ಪ್ರೀತ್ ಬುಮ್ರಾ - 79 ವಿಕೆಟ್
  • ರವಿಚಂದ್ರನ್ ಅಶ್ವಿನ್ - 72 ವಿಕೆಟ್
  • ಅರ್ಷದೀಪ್ ಸಿಂಗ್ - 69 ವಿಕೆಟ್

Story first published: Thursday, June 13, 2024, 22:29 [IST]
Other articles published on Jun 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+