ಭಾರತದ ಜಸ್‌ಪ್ರೀತ್ ಬೂಮ್ರಾ ವಿಶ್ವದ ಅತ್ಯುತ್ತಮ ವೇಗಿ: ಬಾಂಡ್

ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತೀ ಹೆಚ್ಚು ಟ್ರೋಫಿಗಳನ್ನು ಗೆದ್ದಿರುವ ಬಲಿಷ್ಠ ಫ್ರಾಂಚೈಸಿ ಮುಂಬೈ ಇಂಡಿಯನ್ಸ್‌ನಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಪ್ರಮುಖ ಆಟಗಾರರೆನಿಸಿದ್ದಾರೆ. ಎಂಐ ತಂಡದ ಬೌಲಿಂಗ್ ಕೋಚ್ ಆಗಿರುವ ಶೇನ್ ಬಾಂಡ್, ಬೂಮ್ರಾ ಅವರನ್ನು ವಿಶ್ವದ ಅತ್ಯುತ್ತಮ ವೇಗಿಗಳಲ್ಲೊಬ್ಬ ಎಂದು ಕರೆದಿದ್ದಾರೆ.
ಹಾಲಿ ಚಾಂಪಿಯನ್ಸ್ ಆಗಿರುವ ಮುಂಬೈ ಇಂಡಿಯನ್ಸ್, ಐಪಿಎಲ್ 13ನೇ ಆವೃತ್ತಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ 5 ಗೆಲುವಿನೊಂದಿಗೆ 10 ಅಂಕಗಳನ್ನು ಕಲೆ ಹಾಕಿ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಅಕ್ಟೋಬರ್ 16ರ ಶುಕ್ರವಾರ ರೋಹಿತ್ ಶರ್ಮಾ ಪಡೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರುಗೊಳ್ಳಲಿದೆ.
ಏಳು ಪಂದ್ಯಗಳನ್ನಾಡಿರುವ ಬೂಮ್ರಾ 20.18ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಒಟ್ಟು 28 ಓವರ್‌ಗಳನ್ನು ಎಸೆದಿರುವ ಬೂಮ್ರಾ 76 ಡಾಟ್ ಬಾಲ್‌ಗಳನ್ನು ಹಾಕಿದ್ದಾರೆ. ಈ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಬೂಮ್ರಾ ಸದ್ಯ 5ನೇ ಸ್ಥಾನದಲ್ಲಿದ್ದಾರೆ.
'ಆರು ವರ್ಷಗಳಿಂದ ಬೂಮ್ರಾ ಜೊತೆ ಕೆಲಸ ಮಾಡಲು ನಿಜಕ್ಕೂ ಖುಷಿಯಾಗುತ್ತದೆ. ಜೂಮ್ರಾಗೆ ಇನ್ನೂ ಕಲಿಯುವ ಮನಸ್ಸಿದೆ. ಇದೇ ನನಗೆ ಬೂಮ್ರಾ ಅವರಲ್ಲಿ ಇಷ್ಟವಾಗುವ ವಿಚಾರ. ಬೂಮ್ರಾ ವಿಶ್ವದ ಅತ್ಯುತ್ತಮ ವೇಗಿ ಅನ್ನಿಸಿಕೊಂಡಿದ್ದರಲ್ಲಿ ನನಗೆ ಯಾವುದೇ ರೀತಿಯ ಅಚ್ಚರಿಯಿಲ್ಲ,' ಎಂದು ಮುಂಬೈ ಇಂಡಿಯನ್ಸ್ ಟ್ವಿಟರ್ ವಿಡಿಯೋದಲ್ಲಿ ಬಾಂಡ್ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications