ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಪಂದ್ಯಗಳಿಂದ ಬೂಮ್ರಾಗೆ ವಿಶ್ರಾಂತಿ?!

ನವದೆಹಲಿ: ಇಂಗ್ಲೆಂಡ್ ವಿರುದ್ಧದ ವೈಟ್ ಬಾಲ್ ಪಂದ್ಯಗಳಿಂದ ಭಾರತದ ಅನುಭವಿ ವೇಗಿ ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಕೆಲಸದ ಹೊರೆ ನಿರ್ವಹಿಸುವ ಸಲುವಾಗಿ ಬೂಮ್ರಾಗೆ ಇಂಗ್ಲೆಂಡ್ ವಿರುದ್ಧದ ಎಂಟು ಪಂದ್ಯಗಳಿಂದ ವಿಶ್ರಾಂತಿ ನೀಡಲು ಭಾರತ ತಂಡ ನಿರ್ವಹಣಾ ಸಮಿತಿ ಯೋಚಿಸಿದೆ ಎಂದು ಹೇಳಾಗುತ್ತಿದೆ.
ಸದ್ಯ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಇದಾದ ಬಳಿಕ ಐದು ಪಂದ್ಯಗಳ ಟಿ20ಐ ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಬರುವ ಮಾರ್ಚ್‌ನಿಂದ ಭಾರತ-ಇಂಗ್ಲೆಂಡ್ ನಿಯಮಿತ ಓವರ್‌ಗಳ ಸರಣಿ ಶುರುವಾಗಲಿದೆ.
ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಈಗಾಗಲೇ ಮುಗಿದಿದ್ದು, ಸರಣಿ 1-1ರಿಂದ ಸಮಬಲಗೊಂಡಿದೆ. ಮುಂದಿನ ಎರಡೂ ಟೆಸ್ಟ್ ಪಂದ್ಯಗಳಲ್ಲೂ ಜಸ್‌ಪ್ರೀತ್ ಬೂಮ್ರಾ ಆಡಲಿದ್ದಾರೆ. ಎರಡು ಟೆಸ್ಟ್‌ಗಳ ಫಲಿತಾಂಶ ಆಧರಿಸಿ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೆಣಸಾಡಲಿರುವ ತಂಡ ಯಾವುದು ಅನ್ನೋದು ನಿರ್ಧಾರವಾಗಲಿದೆ.
ಬೂಮ್ರಾಗೆ ವೈಟ್‌ಬಾಲ್‌ನಿಂದ ವಿಶ್ರಾಂತಿ ಖಾತರಿಯಾಗಿಲ್ಲ. ಆದರೆ ಮುಖ್ಯ ಕೋಚ್ ರವಿ ಶಾಸ್ತ್ರಿ, ನಾಯಕ ವಿರಾಟ್ ಕೊಹ್ಲಿ, ಬೌಲಿಂಗ್ ಕೋಚ್ ಭರತ್, ಇನ್ನಿತರ ತರಬೇತುದಾರರು, ಫಿಸಿಯೋ ಸೇರಿ ಆಟಗಾರರ ವಿಶ್ರಾಂತಿಯ ಬಗ್ಗೆ ಅಂತಿಮ ನಿರ್ಧರ ಪ್ರಕಟಿಸಲಿದ್ದಾರೆ. ಅಂದ್ಹಾಗೆ, ತೃತೀಯ ಟೆಸ್ಟ್ ಪಂದ್ಯ ಫೆಬ್ರವರಿ 24ರಿಂದ ಅಹ್ಮದಾಬಾದ್‌ನಲ್ಲಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications