IND vs ENG: ಜಸ್ಪ್ರಿತ್ ಬುಮ್ರಾ, ಸಿರಾಜ್ ಆಡುವ ತಂಡದಲ್ಲಿ ಎಲ್ಲ ಪಂದ್ಯ ಆಡುವುದಿಲ್ಲ? ಏನಿದು ತಂಡದ ಪ್ಲ್ಯಾನ್
ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬದಲಾದ ತಂತ್ರದೊಂದಿಗೆ ಕಣಕ್ಕಿಳಿಯಲಿದೆ. ಈ ತಂತ್ರದ ಅಡಿಯಲ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಪ್ರತಿ ಪಂದ್ಯದಲ್ಲೂ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಡೌಟ್. ಕೆಲಸದ ಹೊರೆಯನ್ನು ನಿರ್ವಹಿಸಲು, ಟೀಮ್ ಇಂಡಿಯಾ ವೇಗದ ಬೌಲರ್‌ಗಳ ವಿಶ್ರಾಂತಿಯ ಮೇಲೆ ಕೆಲಸ ಮಾಡುತ್ತದೆ. ಈ ಯೋಜನೆಯಡಿ ಸರಣಿಯ ವೇಳೆ ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ.
ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರಲ್ಲದೆ, ಮುಖೇಶ್ ಕುಮಾರ್ ಮತ್ತು ಅವೇಶ್ ಖಾನ್ ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸ್ಥಾನ ಪಡೆದಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಎಲ್ಲಾ 5 ಪಂದ್ಯಗಳಲ್ಲಿ ಯಾವುದೇ ವೇಗದ ಬೌಲರ್ ಆಡುವ 11 ರ ತಂಡದಲ್ಲಿ ಸ್ಥಾನ ಪಡೆಯುವದಿಲ್ಲ. ಮೊಹಮ್ಮದ್ ಶಮಿ ಆಡುವ ಬಗ್ಗೆ ಇನ್ನೂ ಪ್ರಶ್ನೆಗಳು ಉಳಿದಿವೆ.

ಸ್ಪಿನ್ನರ್‌ಗಳೇ ಪ್ರಮುಖ ಪಾತ್ರ
ಗಾಯದ ಸಮಸ್ಯೆಯಿಂದಾಗಿ ಮೊಹಮ್ಮದ್ ಶಮಿ ಮೊದಲ ಎರಡು ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾದ ಭಾಗವಾಗಿಲ್ಲ. ಆದರೆ, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗುವುದು ಖಚಿತ ಎಂದು ಮೊಹಮ್ಮದ್ ಶಮಿ ಹೇಳಿದ್ದಾರೆ. ಮೊಹಮ್ಮದ್ ಶಮಿ ಅವರ ಫಿಟ್ನೆಸ್ ನಿರಂತರವಾಗಿ ಸುಧಾರಿಸುತ್ತಿದೆ. ಸರಣಿಯ ಎರಡು ಪಂದ್ಯಗಳ ನಂತರ ಮೊಹಮ್ಮದ್ ಶಮಿ ಆಡುವ 11ರ ಬಳಗಕ್ಕೆ ಮರಳಬಹುದು. ಈ ವರ್ಷ ನಡೆಯಲಿರುವ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬುಮ್ರಾ, ಸಿರಾಜ್ ಮತ್ತು ಶಮಿ ಅವರ ರೋಟೇಷನ್ ಪದ್ಧತಿಯಲ್ಲಿ ವೇಗಿಗಳು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.
ಭಾರತದ ನೆಲದಲ್ಲಿ ಸರಣಿ ನಡೆಯುತ್ತಿರುವುದರಿಂದ ಇಂಗ್ಲೆಂಡ್ ವಿರುದ್ಧ ಸ್ಪಿನ್ನರ್‌ಗಳ ಪಾತ್ರ ಮಹತ್ವದ್ದಾಗಿದೆ. ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅಲ್ಲದೆ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ಮೂವರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೈದಾನದ ಪಿಚ್ ಸಂಪೂರ್ಣವಾಗಿ ಸ್ಪಿನ್ನರ್‌ಗಳಿಗೆ ಅನುಕೂಲಕ ಆಗಿರಲಿದೆ. ಮ್ಯಾನೇಜ್‌ಮೆಂಟ್ ನಾಲ್ವರು ಸ್ಪಿನ್ನರ್‌ಗಳೊಂದಿಗೆ ಮೈದಾನಕ್ಕೆ ಇಳಿಯುವ ಬಗ್ಗೆ ಚಿಂತಿಸಬಹುದು. ಆದರೆ, ಆಡುವ 11ರಲ್ಲಿ ವೇಗದ ಬೌಲರ್‌ಗಳ ಪಾತ್ರವೂ ಪ್ರಮುಖವಹಿಸಲಿದ್ದಾರೆ.

ಏನಿದೆ ಮ್ಯಾನೇಜ್ಮೆಂಟ್ ಪ್ಲ್ಯಾನ್?
ಟೀಮ್ ಇಂಡಿಯಾ ಎಂದಿನಂತೆ ತನ್ನ ಸ್ಪಿನ್ ಬೌಲರ್‌ಗಳ ಮೇಲೆ ತವರಿನಲ್ಲಿ ಹೆಚ್ಚಿನ ನಂಬಿಕೆಯನ್ನು ಇಟ್ಟಿದೆ. ಈ ಹಿನ್ನೆಲೆಯಲ್ಲಿ ಮೊದಲ ಎರಡು ಟೆಸ್ಟ್‌ನಲ್ಲಿ ಸ್ಥಾನ ಪಡೆದಿರುವ ವೇಗದ ಬೌಲರ್‌ಗಳಲ್ಲಿ ಒಬ್ಬ ಅನುಭವಿ ಬೌಲರ್ ಕಣಕ್ಕೆ ಇಳಿಯಬಹುದು. ಟೀಮ್ ಇಂಡಿಯಾ ಬಳಿ ಈಗ ಆಯ್ಕೆಗಳು ಸಾಕಷ್ಟಿವೆ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡುತ್ತಿದೆ.
ಮುಂದಿನ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ವೇಗಿಗಳಿಗೆ ವಿಶ್ರಾಂತಿ ನೀಡುವ ಬಗ್ಗೆ ಚಿಂತನೆಗಳು ನಡೆದಿವೆ. ಒಂದು ವೇಳೆ ಈ ಯೋಜನೆ ಫಲ ನೀಡಿದ್ದೇ ಆದಲ್ಲಿ ಟೀಮ್ ಇಂಡಿಯಾ ಪರ ಯು ವೇಗದ ಬೌಲರ್ ಮುಕೇಶ್ ಕುಮಾರ್, ಆವೀಶ್ ಖಾನ್ ಸಹ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು. ಅಥವಾ ಒಬ್ಬ ಅನುಭವಿ ಹಾಗೂ ಒಬ್ಬ ಯುವ ಆಟಗಾರರೊಂದಿಗೆ ಟೀಮ್ ಇಂಡಿಯಾ ಕಣಕ್ಕೆ ಇಳಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಟೀಮ್ ಮ್ಯಾನೇಜ್ಮೆಂಟ್ ಯೋಜನೆ ರೂಪಿಸಿಕೊಳ್ಳುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications