For Quick Alerts
ALLOW NOTIFICATIONS  
For Daily Alerts
 

ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅಲ್ಲ, ಆಸೀಸ್‌ ನಿದ್ದೇಗೆಡಿಸಿದ್ದಾರೆ ಈ ಪ್ಲೇಯರ್‌

ಈ ವರ್ಷದ ಬಹು ನಿರೀಕ್ಷಿತ ಟೆಸ್ಟ್‌ ಸರಣಿಗಳಲ್ಲಿ ಒಂದಾಗಿರುವ ಬಾರ್ಡರ್ ಗವಾಸ್ಕರ್‌ ಟ್ರೋಫಿ, ಮೇಲೆ ಎಲ್ಲರ ಗಮನ ಕೇಂದ್ರಿ ಕೃತವಾಗಿದೆ. ಈ ಟೆಸ್ಟ್‌ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಯಾವ ತಂಡ ಕ್ವಾಲಿಫೈ ಆಗುತ್ತದೆ ಎಂಬುದು ಈ ಸರಣಿಯ ಬಳಿಕವೇ ತಿಳಿಯಲಿದೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಈ ಪ್ಲೇಯರ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ಇರಾದೆಯನ್ನು ಹೊಂದಿದ್ದಾರೆ. ಆಸೀಸ್‌ ತಂಡವನ್ನು ಕಾಡಲು ಭಾರತದ ಸ್ಟಾರ್‌ ಆಟಗಾರರು ಸಹ ಸಜ್ಜಾಗಿದ್ದಾರೆ. ಈ ನಡುವೆ ಆಸ್ಟ್ರೇಲಿಯಾಕ್ಕೆ ಆ ಒಬ್ಬ ಪ್ಲೇಯರ್‌ ಟೆನ್ಷನ್‌ ಹೆಚ್ಚಿಸಿದ್ದಾನೆ. ಹಾಗಿದ್ದರೆ ಆ ಪ್ಲೇಯರ್‌ ಯಾರು ಇಲ್ಲಿದೆ ವರದಿ.

Jasprit Bumrah Not Rohit Sharma is Australia s Biggest Threat in the Upcoming Border-Gavaskar Trophy

ಆಸೀಸ್‌ ನಿದ್ದೆ ಗೆಡಿಸಿರುವ ಆ ಪ್ಲೇಯರ್‌ ಯಾರು?

ಆಸ್ಟ್ರೇಲಿಯಾ ಆಟಗಾರರಿಗೆ ಈ ಪ್ಲೇಯರ್‌ ನಿದ್ದೆ ಗೆಡಿಸಿದ್ದಾನೆ. ಆತ ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ ಅಲ್ಲ. ಆದರೆ ತಂಡದಲ್ಲಿ ಸ್ಟಾರ್‌ ಗಿರಿಯನ್ನು ಪಡೆದಿರುವ ಆತ, ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಅಬ್ಬರಿಸಿದ್ದೇ ಆದಲ್ಲಿ ಆಸೀಸ್‌ಗೆ ಕಾಟ ಬೀಡಬಲ್ಲರು ಎಂದು ಪ್ಯಾಟ್‌ ಕಮಿನ್ಸ್‌ ಅಭಿಪ್ರಾಯ ಪಟ್ಟಿದ್ದಾರೆ.

ಆಸೀಸ್‌ ನಿದ್ದೆ ಹಾಳು ಮಾಡಿರುವ ಆಟಗಾರ ಬೇರ್ಯಾರೂ ಅಲ್ಲ ವೇಗಿ ಜಸ್ಪ್ರಿತ್ ಬುಮ್ರಾ. ಕಮ್ಮಿನ್ಸ್ ಸ್ಟಾರ್‌ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು. ನಾನು ಬುಮ್ರಾ ಅವರ ದೊಡ್ಡ ಅಭಿಮಾನಿ. ನನ್ನ ಪ್ರಕಾರ ಅವರೊಬ್ಬ ಅದ್ಭುತ ಬೌಲರ್. ಸರಣಿಯಲ್ಲಿ ಅವರ ಆರ್ಭಟಕ್ಕೆ ಬ್ರೇಕ್‌ ಹಾಕಲು ನಾವು ಪ್ರಯತ್ನಿಸುತ್ತೇವೆ. ಬುಮ್ರಾ ಜೊತೆಗೆ ಇನ್ನೂ ಕೆಲವು ಆಟಗಾರರಿದ್ದಾರೆ. ಅವರು ಆಸ್ಟ್ರೇಲಿಯಾದಲ್ಲಿ ಹೆಚ್ಚು ಆಡಿದ ಅನುಭವ ಹೊಂದಿಲ್ಲ. ಆದರೆ ಅವರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಆಸೀಸ್‌ ಬೌನ್ಸಿ ಪಿಚ್‌ಗಳಲ್ಲಿ ಬುಮ್ರಾ ನಮ್ಮ ತಂಡದ ಬ್ಯಾಟರ್‌ಗಳಿಗೆ ಕಟ್ಟಿ ಹಾಕಬಹುದು ಎಂದಿದ್ದಾರೆ.

ವೇಗಿಯ ಸಾಧನೆ ಆಸೀಸ್‌ ವಿರುದ್ಧ ಹೇಗಿದೆ?

ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಅವರ ದಾಖಲೆ ಅಮೋಘವಾಗಿದೆ. ಬುಮ್ರಾ ಅವರು ಆಡಿದ ಏಳು ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಬುಮ್ರಾ ಅವರ ಬೌಲಿಂಗ್ ಸರಾಸರಿ 21.25 ಆಗಿದೆ. ಆಸ್ಟ್ರೇಲಿಯೂ ವಿರುದ್ಧ ಬುಮ್ರಾ ಐದು ವಿಕೆಟ್ ಸಾಧನೆ ಮಾಡಿಯೇ ಇಲ್ಲ. ಬುಮ್ರಾ ಆಸೀಸ್‌ ವಿರುದ್ಧ ಎಲ್ಲ ಪಂದ್ಯಗಳನ್ನು ಆಸ್ಟ್ರೇಲಿಯಾದಲ್ಲಿ ಮಾತ್ರ ಆಡಿದ್ದಾರೆ. ಅವರಿಗೆ ಆಸೀಸ್‌ ವಿರುದ್ಧ ಆಡುವುದು ತುಂಬ ಇಷ್ಟ.

ಬಾಂಗ್ಲಾದೇಶದ ವಿರುದ್ಧ ಟೆಸ್ಟ್‌ ಸರಣಿಯಲ್ಲೂ ಬುಮ್ರಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಈಗ ಕಿವೀಸ್‌ ತಂಡವನ್ನು ಕಟ್ಟಿ ಹಾಕಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಬುಮ್ರಾ ಆಸೀಸ್‌ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್‌ ಪಂದ್ಯ ನವೆಂಬರ್‌ 22 ರಿಂದ ಆರಂಭವಾಗಲಿದೆ. ಭಾರತ ಈ ಬಾರಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ಐದು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ.

Story first published: Wednesday, October 16, 2024, 8:07 [IST]
Other articles published on Oct 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+