For Quick Alerts
ALLOW NOTIFICATIONS  
For Daily Alerts
 

Jasprit Bumrah: 2 ವಿಕೆಟ್‌ ಪಡೆಯುತ್ತಲೇ ಎಲೈಟ್‌ ಕ್ಲಬ್‌ಗೆ ಬುಮ್ರಾ ಎಂಟ್ರಿ

ಭಾರತದ ಕ್ರಿಕೆಟ್‌ ಅಭಿಮಾನಿಗಳಿಗೆ ಸಂಡೇ ಡಬಲ್‌ ಧಮಾಕಾ. ಮುಂಬೈನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಕಾದಾಟವನ್ನು ನಡೆಸಿದರೆ, ದೂರದ ಆಸ್ಟ್ರೇಲಿಯಾದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಹೋಬಾರ್ಟ್‌ನಲ್ಲಿ ಮೈದಾನ ಪ್ರವೇಶಿಸಲಿವೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯುತ್ತಿರುವ 5 ಪಂದ್ಯ ಟಿ20 ಸರಣಿಯಲ್ಲಿ, ಆತಿಥೇಯ ತಂಡ 1-0 ಮುನ್ನಡೆ ಸಾಧಿಸಿದೆ. ಮೂರನೇ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಕನಸು ಭಾರತ ತಂಡದ್ದಾಗಿದೆ. ಈ ವೇಳೆ ಭಾರತದ ಸ್ಟಾರ್ ವೇಗದ ಬೌಲರ್‌ ಜಸ್ಪ್ರೀತ್ ಬುಮ್ರಾ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದಿದ್ದ ಏಕದಿನ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದ ಬುಮ್ರಾ, ಮತ್ತೆ ಮೈದಾನ ಪ್ರವೇಶಿಸಿದ್ದಾರೆ. ಈ ವೇಳೆ ಎರಡನೇ ಟಿ20 ಪಂದ್ಯದಲ್ಲಿ 2 ವಿಕೆಟ್‌ ಪಡೆದು ಭರವಸೆ ಮೂಡಿಸಿದ್ದಾರೆ. ಈಗ ಎಲ್ಲರ ಕಣ್ಣುಗಳು ಹೋಬಾರ್ಟ್‌ನಲ್ಲಿ ಬುಮ್ರಾ ಅವರ ಮೇಲೆ ನೆಟ್ಟಿರಲಿವೆ. ಈ ಪಂದ್ಯದಲ್ಲಿ ಇವರು 2 ವಿಕೆಟ್‌ಗಳನ್ನು ಪಡೆದಿದ್ದೇ ಆದಲ್ಲಿ ದೊಡ್ಡ ಸಾಧನೆಯನ್ನು ಮಾಡಲಿದ್ದಾರೆ.

Jasprit Bumrah on Cusp of Elite Club Needs 2 Wickets for 100 T20I Scalps in Hobart Clash

ಭಾರತದ ಸ್ಟಾರ್ ಬೌಲರ್‌ ಜಸ್ಪ್ರೀತ್ ಬುಮ್ರಾ ಹೋಬಾರ್ಟ್‌ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ 2 ವಿಕೆಟ್‌ಗಳನ್ನು ಪಡೆದಿದ್ದೇ ಆದಲ್ಲಿ, ಚುಟುಕು ಕ್ರಿಕೆಟ್‌ನಲ್ಲಿ 100 ವಿಕೆಟ್‌ ಪಡೆದ ಸಾಧನೆ ಮಾಡಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಸಹ ಬುಮ್ರಾ ಅವರದ್ದಾಗಲಿದೆ. ಇನ್ನು ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಬುಮ್ರಾ ಕಬಳಿಸಿದರೆ, ವಿಕೆಟ್‌ಗಳ ಲೆಕ್ಕಾಚಾರದಲ್ಲೂ ಅರ್ಷದೀಪ್‌ ಅವರನ್ನು ಸಹ ಹಿಂದಿಕ್ಕಬಹುದಾಗಿದೆ.

ಎರಡು ದಾಖಲೆ

ಯರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ ಆಡಿದ 77 ಪಂದ್ಯಗಳ 75 ಇನಿಂಗ್ಸ್‌ನಲ್ಲಿ 98 ವಿಕೆಟ್‌ ಪಡೆದಿದ್ದಾರೆ. ಈಗ ಇವರು ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದವ ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಾಖಲೆ ಅರ್ಶದೀಪ್‌ ಸಿಂಗ್ ಅವರ ಹೆಸರನಿಲ್ಲಿದೆ. ಇವರು ಈಗಾಗಲೇ 101 ವಿಕೆಟ್‌ ಕಬಳಿಸಿದ್ದಾರೆ. ಮೂರನೇ ಟಿ20 ಪಂದ್ಯದಲ್ಲಿ ಬುಮ್ರಾ ಈ ದಾಖಲೆಯನ್ನು ಮುರಿಯುವ ಅವಕಾಶವನ್ನು ಸಹ ಹೊಂದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಮೂರನೇ ಪಂದ್ಯದಲ್ಲಿ ಒಂದು ವಿಕೆಟ್ ಪಡೆದರೂ ಬುಮ್ರಾ ದಾಖಲೆ ನಿರ್ಮಿಸಲಿದ್ದಾರೆ. ಆಸೀಸ್‌ ವಿರುದ್ಧ ಬುಮ್ರಾ 15 ಟಿ20 ಪಂದ್ಯಗಳಲ್ಲಿ 19 ವಿಕೆಟ್‌ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಇನ್ನೊಂದ ವಿಕೆಟ್‌ ಪಡೆದರೆ ದಾಖಲೆ ಬರೆಯಲಿದ್ದಾರೆ.

Jasprit Bumrah on Cusp of Elite Club Needs 2 Wickets for 100 T20I Scalps in Hobart Clash

ಉಭಯ ತಂಡಗಳ ನಡುವಣ ಮೊದಲ ಪಂದ್ಯ ಕ್ಯಾನ್‌ಬೆರಾದಲ್ಲಿ ನಡೆದಿತ್ತು. ಈ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ ಆಸೀಸ್‌ ಗೆಲುವು ದಾಖಲಿಸಿದ್ದರಿಂದ ಮೂರನೇ ಪಂದ್ಯ ಕುತೂಹಲ ಹೆಚ್ಚಿಸಿದೆ.

Story first published: Sunday, November 2, 2025, 8:00 [IST]
Other articles published on Nov 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+