Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah: ಜಸ್ಪ್ರಿತ್ ಬುಮ್ರಾ ವೇಗಕ್ಕೆ ಪೀಸ್‌ ಪೀಸ್‌ ಆಗುತ್ತಾ ಕಪಿಲ್‌ ದೇವ್ ದಾಖಲೆ?

ಟೀಮ್ ಇಂಡಿಯಾದ ಆಟಗಾರರು ಸದ್ಯ ದಾಖಲೆಯ ಮೇಲೆ ದಾಖೆಯನ್ನು ಬರೆಯುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತದ ಆಟಗಾರರು ದಾಖಲೆ ನಿರ್ಮಿಸಿದ್ದಾರೆ. ಈ ವರ್ಷ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್‌ ಜಸ್ಪ್ರಿತ್ ಬುಮ್ರಾ ಮತ್ತೊಂದು ದಾಖಲೆ ನಿರ್ಮಿಸುವ ಕನಸ ಹೊಂದಿದ್ದಾರೆ.

ಟೀಮ್ ಇಂಡಿಯಾದ ಭರವಸೆಯ ಆಟಗಾರರು ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 27000 ರನ್‌ ಪೂರೈಸಿದರೆ, ಯಶಸ್ವಿ ಜೈಸ್ವಾಲ್ ಒಂದೇ ವರ್ಷ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತದ ಆಟಗಾರ. ಅಶ್ವಿನ್‌ ಪ್ರಸಕ್ತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್. ಹೀಗೆ ಸಾಲು ಸಾಲು ದಾಖಲೆಗಳಿಗೆ ಟೀಮ್ ಇಂಡಿಯಾ ಆಟಗಾರರು ಭಾಜನರಾಗುತ್ತಿದ್ದಾರೆ. ಈ ಸಾಲಿಗೆ ಎಂಟ್ರಿ ನೀಡಲು ಯಾರ್ಕರ್‌ ಸ್ಪೆಷಲಿಸ್ಟ್‌ ಬುಮ್ರಾ ಸಹ ಸನ್ನದ್ಧವಾಗಿದ್ದಾರೆ.

Jasprit Bumrah on Track to Break Kapil Dev s Record for Most Test Wickets in a Calendar Year

ಪ್ರಸಕ್ತ ವರ್ಷ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಜಸ್ಪ್ರಿತ್ ಬುಮ್ರಾ ಅಮೋಘ ಫಾರ್ಮ್‌ನಲ್ಲಿದ್ದಾರೆ. ಇವರು ಆಡಿರುವ 7 ಟೆಸ್ಟ್‌ ಪಂದ್ಯಗಳ 14 ಇನಿಂಗ್ಸ್‌ಗಳಲ್ಲಿ 14.42ರ ಸರಾಸರಿಯಲ್ಲಿ 38 ವಿಕೆಟ್ ಕಬಳಿಸಿದ್ದಾರೆ. ಭಾರತ ಅಕ್ಟೋಬರ್‌ 16ರಿಂದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಸರಣಿಯನ್ನು ಆಡಬೇಕಿದೆ. ಈ ವೇಳೆ ಮೂರು ಟೆಸ್ಟ್‌ ಆಡಲಾಗುತ್ತದೆ. ಇದಾದ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಒಟ್ಟು 5 ಟೆಸ್ಟ್‌ ಪಂದ್ಯಗಳು ನಡೆಯಲಿದ್ದು, 4 ಪಂದ್ಯಗಳಲ್ಲಿ ಇದೇ ವರ್ಷ ನಡೆಯಲಿವೆ. ಈ ಪಂದ್ಯಗಳಲ್ಲಿ ಬುಮ್ರಾ ದಾಖಲೆಯ ವಿಕೆಟ್‌ ಪಡೆಯುವ ಅವಕಾಶವ ಇದೆ.

ಬುಮ್ರಾ ಮಾಡುವ ದಾಖಲೆ ಯಾವುದು?

ಬುಮ್ರಾ ಅವರ ಸದ್ಯದ ವೇಗವನ್ನು ಗಮನಿಸಿದರೆ, ಅವರು ಈ ವರ್ಷ ಕಪಿಲ್‌ ದೇವ್ ಅವರ ದಾಖಲೆಯನ್ನು ಅಳಿಸಬಹುದು. ಈ ವರ್ಷದಲ್ಲಿ ಬುಮ್ರಾ ಇನ್ನು 7 ಟೆಸ್ಟ್‌ ಆಡಬೇಕಿದೆ. ಒಂದು ವೇಳೆ ಇದೇ ವೇಗದಲ್ಲಿ ಬುಮ್ರಾ ವಿಕೆಟ್ ಬೇಟೆ ನಡೆಸಿದರೆ, ಸದ್ಯದಲ್ಲೇ ಕ್ಯಾಲೆಂಡರ್ ವರ್ಷದಲ್ಲಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಬರೆಯಲಿದ್ದಾರೆ.

Jasprit Bumrah on Track to Break Kapil Dev s Record for Most Test Wickets in a Calendar Year

ಕಪಿಲ್‌ ಪಡೆದ ವಿಕೆಟ್‌ ಎಷ್ಟು?

ವಿಶ್ವಕಪ್ ವಿಜೇತ ನಾಯಕ ಕಪಿಲ್‌ ದೇವ್, 1983 ರಲ್ಲಿ 23.18 ರ ಸರಾಸರಿಯಲ್ಲಿ 18 ಟೆಸ್ಟ್ ಪಂದ್ಯಗಳ 25 ಇನ್ನಿಂಗ್ಸ್‌ಗಳಲ್ಲಿ 75 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಬುಮ್ರಾ ಅವರು ಈ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಕಪಿಲ್‌ ದೇವ್ ಅವರ ದಾಖಲೆಯನ್ನು ಅಳಿಸಿ ಹಾಕಲು ಬುಮ್ರಾ ಅವರಿಗೆ ಇನ್ನು 38 ವಿಕೆಟ್‌ ಅವಶ್ಯಕತೆ ಇದೆ. ಒಂದು ವೇಳೆ ಬುಮ್ರಾ ಈ ಸಾಧನೆ ಮಾಡುವಲ್ಲಿ ಯಶಸ್ವಿಯಾದರೆ, ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

ಕಪಿಲ್‌ ದೇವ್ ಅವರ ಬಳಿಕ ಅತಿ ಹೆಚ್ಚು ವಿಕೆಟ್‌ ಒಂದೇ ವರ್ಷದಲ್ಲಿ ಪಡೆದ ದಾಖಲೆ ಅಶ್ವಿನ್ ಅವರ ಹೆಸರಿನಲ್ಲಿ ಇದೆ. ಅಶ್ವಿನ್ 72 ವಿಕೆಟ್‌ ಪಡೆದಿದ್ದರೆ, ಹರ್ಭಜನ್ ಸಿಂಗ್ 63 ವಿಕೆಟ್ ಕಬಳಿಸಿದ್ದಾರೆ.

Story first published: Thursday, October 3, 2024, 17:57 [IST]
Other articles published on Oct 3, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+