ಬೌಲಿಂಗ್ ಶೈಲಿ ಕಾಪಿ ಮಾಡಿದ ಆಸೀಸ್ ಪುಟಾಣಿಗೆ ಪ್ರತಿಕ್ರಿಯಿಸಿದ ಬೂಮ್ರಾ


ನವದೆಹಲಿ, ಜನವರಿ 9: ಭಾರತದ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್ ಶೈಲಿಯನ್ನೇ ಅನುಸರಿಸಿದ ಆಸ್ಟ್ರೇಲಿಯಾದ ಬಾಲಕನೋರ್ವನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಂಡಿತ್ತು. ಅದಕ್ಕೆ ಬೂಮ್ರಾ ಕೂಡ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ-ಭಾರತ ನಡುವಣ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬೂಮ್ರಾ ಒಟ್ಟು 21 ವಿಕೆಟ್‌ಗಳೊಂದಿಗೆ ಮಿಂಚಿದ್ದರು. 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಭಾರತದ ವಶವಾಗಿತ್ತು.
ಅಂದ್ಹಾಗೆ ಸಾಮಾಜಿಕ ಜಲತಾಣಗಳಲ್ಲಿ ಹರಿದಾಡುತ್ತಿದ್ದ ಟ್ವಿಟರ್ ವಿಡಿಯೋವನ್ನು ಮೈಕಲ್ ಕರ್ಟಿನ್ ಎಂಬವರು ಪೋಸ್ಟ್ ಮಾಡಿದ್ದರು. 'ಆಸೀಸ್ ಮುಂದಿನ ಪೀಳಿಗೆಯ ಕ್ರಿಕೆಟ್‌ಗೆ ಪ್ರೇರಣೆಯೀತ' ಎಂಬ ಒಂದು ಸಾಲನ್ನೂ ವಿಡಿಯೋದೊಂದಿಗೆ ಸೇರಿಸಿಕೊಂಡಿದ್ದರು.
ಬೂಮ್ರಾ ಕೂಡ ವಿಡಿಯೋವನ್ನು ಗಮನಿಸಿದ್ದಾರೆ. ಖುಷಿಗೊಂಡಿದ್ದಾರೆ. ಜೊತೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ಕೂಡ ಮಾಡಿದ್ದಾರೆ. ಪುಟಾಣಿ ವಿಡಿಯೋವನ್ನು ರಿಟ್ವೀಟ್ ಮಾಡಿರುವ ಬೂಮ್ರಾ, 'ಈ ಹುಡುಗ ಮುದ್ದಾಗಿದ್ದಾನೆ. ಇವನಿಗೆ ನಂದೊಂದು ಹಾರೈಕೆಯಿದೆ' ಎಂದು ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications