Jasprit Bumrah: ಹೊಸ ವರ್ಷದಂದು ಬುಮ್ರಾಗೆ ಗುಡ್ ನ್ಯೂಸ್
ಭಾರತ ತಂಡದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ ನಂಬರ್ 1 ಬೌಲರ್ ಆಗಿ ಉಳಿದಿದ್ದಾರೆ. ಐಸಿಸಿ ಟೆಸ್ಟ್ ರ‍್ಯಾಕಿಂಗ್‌ಯನ್ನು ಬುಧವಾರ ಬಿಡುಗಡೆ ಮಾಡಿದೆ. ಜಸ್ಪ್ರೀತ್ ಬುಮ್ರಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಪರಿಣಾಮವಾಗಿ ಹೊಸ ವರ್ಷದ ಮೊದಲ ದಿನವೇ ಅವರಿಗೆ ಸಿಹಿ ಸುದ್ದಿ ಸಿಕ್ಕಿದೆ. ಭಾರತ ತಂಡದ ಮಾಜಿ ದಿಗ್ಗಜ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ 8 ವರ್ಷಗಳ ಹಳೆಯ ದಾಖಲೆಯನ್ನು ಬುಮ್ರಾ ಮುರಿದ್ದಾರೆ. ಬುಮ್ರಾ ಐಸಿಸಿ ಅತ್ಯಧಿಕ ರೇಟಿಂಗ್ ಗಳಿಸಿದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಬೆನ್ನೆಲುಬಾಗಿ ನಿಂತಿದ್ದಾರೆ. ಇದುವರೆಗೆ ಆಡಿರುವ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 30 ವಿಕೆಟ್‌ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ. ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಬುಮ್ರಾ ದಾಖಲೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬುಮ್ರಾ ಈಗ 907 ಐಸಿಸಿ ರೇಟಿಂಗ್‌ನೊಂದಿಗೆ ನಂಬರ್-1 ಸ್ಥಾನದಲ್ಲಿದ್ದಾರೆ. ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಬುಮ್ರಾ 907 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್‌ನ ಡೆರೆಕ್ ಅಂಡರ್‌ವುಡ್ ಅವರೊಂದಿಗೆ ಜಂಟಿ 17ನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ಸಾಧನೆ
ಭಾರತ ಮತ್ತು ಆಸ್ಟ್ರೇಲಿಯಾ ಸರಣಿಯ ವೇಳೆ ಆರ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ ಹಠಾತ್ ನಿವೃತ್ತಿ ಘೋಷಣೆ ಮಾಡಿದರು. ಆದರೆ ಅಶ್ವಿನ್ 8 ವರ್ಷಗಳ ಹಿಂದೆ ಅಂದರೆ 2016ರಲ್ಲಿ 904 ರೇಟಿಂಗ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಬುಮ್ರಾ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಬುಮ್ರಾ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಒಂಬತ್ತು ವಿಕೆಟ್ ಪಡೆದಿದ್ದರು. ಈ ಪ್ರದರ್ಶನ ಐಸಿಸಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ ಬುಮ್ರಾ ಸ್ಥಾನವನ್ನು ಭದ್ರಪಡಿಸಿದೆ.
ಇಲ್ಲಿಯವರೆಗೆ ಆಸ್ಟ್ರೇಲಿಯಾ ವಿರುದ್ಧ ಬುಮ್ರಾ 4 ಟೆಸ್ಟ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಆದರೆ ಇನ್ನೂ ಹೆಚ್ಚಿನ ರೇಟಿಂಗ್‌ಗಳನ್ನು ಸಾಧಿಸುವ ಅವಕಾಶವನ್ನು ಹೊಂದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಜನವರಿ 3 ರಂದು ಸಿಡ್ನಿಯಲ್ಲಿ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿವೆ. ಈ ಪಂದ್ಯದಲ್ಲಿ ಬುಮ್ರಾ ಎಷ್ಟು ವಿಕೆಟ್‌ಗಳನ್ನು ಕಬಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಆಸೀಸ್ ಬೌಲರ್ಸ್ ಮೇಲುಗೈ
ಆಸ್ಟ್ರೇಲಿಯಾ ತಂಡದ ಬೌಲರ್ಸ್ ಕೂಡ ಐಸಿಸಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ತಲಾ ಒಂದು ಸ್ಥಾನ ಗಳಿಸಿದ್ದಾರೆ. ಹೇಜಲ್‌ವುಡ್ ಎರಡನೇ ಸ್ಥಾನಕ್ಕೆ ಹಾಗೂ ಕಮ್ಮಿನ್ಸ್ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಕಗಿಸೊ ರಬಾಡ 2 ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಮಾರ್ಕೊ ಜಾನ್ಸೆನ್ 6 ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ತಲುಪಿದ್ದಾರೆ. ಬುಮ್ರಾ ಹೊರತುಪಡಿಸಿ, ರವೀಂದ್ರ ಜಡೇಜಾ ಅವರು ಟಾಪ್-10 ಟೆಸ್ಟ್ ಬೌಲರ್‌ಗಳ ರ‍್ಯಾಕಿಂಗ್‌ನಲ್ಲಿ ಇರುವ ಎರಡನೇ ಭಾರತೀಯ ಬೌಲರ್ ಆಗಿದ್ದಾರೆ. ಜಡೇಜಾ 10ನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications