Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah: ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: ಅಭ್ಯಾಸ ಆರಂಭಿಸಿದ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಮುಂಬೈ ತನ್ನ ಲೀಗ್‌ ಹಂತದ ಮೂರನೇ ಪಂದ್ಯವನ್ನು ಸೋಮವಾರ ಮುಂಬೈನಲ್ಲಿ ವಾಂಖೇಡೆ ವಿರುದ್ಧ ಆಡಲಿದೆ. ಈ ವೇಳೆ ಎಂಐ ತಂಡಕ್ಕೆ ಸಾಲು ಸಾಲು ಸೋಲುಗಳು ತಂಡದ ಚಿಂತೆಯನ್ನು ಹೆಚ್ಚು ಮಾಡಿವೆ. ಅಲ್ಲದೆ ತಂಡಕ್ಕೆ ಆ ಒಬ್ಬ ಸ್ಟಾರ್ ವೇಗದ ಬೌಲರ್‌ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ.

ಗಾಯದ ಸಮಸ್ಯೆಯನ್ನು ಎದುರಿಸುತ್ತಿರುವ ಸ್ಟಾರ್ ವೇಗದ ಬೌಲರ್‌ ಜಸ್ಪ್ರಿತ್ ಬುಮ್ರಾ ಅವರು ಚೇತರಿಕೆ ಹಂತದಲ್ಲಿದ್ದಾರೆ. ಇವರ ಅನುಪಸ್ಥಿತಿ ತಂಡಕ್ಕೆ ಬಹುವಾಗಿ ಕಾಡುತ್ತಿದೆ. 31 ವರ್ಷದ ಸ್ಟಾರ್ ವೇಗಿ ಬುಮ್ರಾ ಅವರು ಅಭ್ಯಾಸ ಆರಂಭಿಸಿದ ವಿಡಿಯೋ ಸದ್ಯ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಬುಮ್ರಾ ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಬುಮ್ರಾ ಬೆನ್ನು ಗಾಯಕ್ಕೆ ತುತ್ತಾಗಿದ್ದರು. ಅಲ್ಲಿಂದ ಇವರು ಮೈದಾನಕ್ಕೆ ಪ್ರವೇಶಿಸರಲಿಲ್ಲ. ಇವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಪಟ್ಟವನ್ನು ಅಲಂಕರಿಸಿತ್ತು.

Jasprit Bumrah Resumes Training Raising Hopes for Mumbai Indians Comeback Mumbai

ಮುಂಬೈ ಇಂಡಿಯನ್ಸ್ ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಸಾಲು ಸಾಲು ಸೋಲುಗಳನ್ನು ಕಂಡಿದೆ. ಮೊದಲ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ 4 ವಿಕೆಟ್‌, ಗುಜರಾತ್ ವಿರುದ್ಧ 36 ರನ್‌ ಸೋಲು ಕಂಡಿದ್ದ ಮುಂಬೈ ಸಂಕಷ್ಟದಲ್ಲಿದೆ.

ಮುಂಬೈ ತಂಡದ ಸ್ಟಾರ್ ಬೌಲರ್

ಜಸ್ಪ್ರಿತ್ ಬುಮ್ರಾ ಐಪಿಎಲ್‌ ಕೆರಿಯರ್ ಏಪ್ರಿಲ್‌ 4, 2013ರಂದು ಆರಂಭಿಸಿದರು. ಈ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಿದ್ದವು. ಕಳೆದ 13 ವರ್ಷಗಳಲ್ಲಿ ಬುಮ್ರಾ ಬೆಳೆದು ನಿಂತಿರುವ ಪರಿ ಬೇರೆಯವರಿಗೆ ಮಾದರಿ. ಮುಂಬೈ ಪರ ಬುಮ್ರಾ ಆಡಿದ 133 ಪಂದ್ಯಗಳಲ್ಲಿ 165 ವಿಕೆಟ್‌ ಸಾಧನೆ ಮಾಡಿದ್ದಾರೆ. ಇನ್ನು ಐಪಿಎಲ್‌ ಇತಿಹಾಸದಲ್ಲಿ ಕೇವಲ ನಾಲ್ಕು ಬೌಲರ್‌ಗಳು ಮಾತ್ರ ಐಪಿಎಲ್‌ನಲ್ಲಿ ಐದು ವಿಕೆಟ್‌ ಸಾಧನೆಯನ್ನು ಎರಡು ಬಾರಿ ಮಾಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಬುಮ್ರಾ ಬೌಲಿಂಗ್ ಮಾಡುವುದನ್ನು ನೋಡಬಹುದಾಗಿದೆ. ಆದರೆ ಇವರು ಯಾವಾಗ ಮೈದನ ಪ್ರವೇಶಿಸುತ್ತಾರೆ ಎಂಬ ಬಗ್ಗೆ ಇನ್ನು ಯಾವುದೇ ಅಧಿಕೃತ ಮಾಹಿತಿ ಇಲ್ಲ. ನಿಜಕ್ಕೂ ಇವರ ಅನುಪಸ್ಥಿತಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಬಹುವಾಗಿ ಕಾಡುತ್ತಿದೆ.

ಹಲವು ಸರಣಿ ಮಿಸ್

ಈಗಾಗಲೇ ಜಸ್ಪ್ರಿತ್ ಬುಮ್ರಾ ಹಲವು ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆದ ಸರಣಿಯ ವೇಳೆ ಬುಮ್ರಾ ಫಿಟ್ ಆಗಬಹುದು ಎಂಬ ಲೆಕ್ಕಾಚಾರ ಇತ್ತು. ಆದರೆ ಅದು ಹುಸಿಯಾಗಿತ್ತು. ಅಲ್ಲದೆ ಇವರ ಸ್ಥಾನದಲ್ಲಿ ಮಿಸ್ಟ್ರಿ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ತಂಡದಲ್ಲಿ ಸ್ಥಾನ ಪಡೆದದಿದ್ದರು. ಚಾಂಪಿಯನ್ಸ್ ಟ್ರೋಫಿ ತಂಡದಲ್ಲೂ ಮೊದಲು ಬುಮ್ರಾ ಅವರಿಗೆ ಚಾನ್ಸ್ ನೀಡಲಾಗಿತ್ತು. ಆದರೆ ಗಾಯ ಗುಣಮುಖವಾಗದ ಕಾರಣ ಇವರನ್ನು ತಂಡದಿಂದ ಕೈ ಬಿಡಲಾಯಿತು.

Story first published: Monday, March 31, 2025, 15:44 [IST]
Other articles published on Mar 31, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+