ಎಂಸಿಜಿಯಲ್ಲಿ ಮಾರಕ ಬೌಲಿಂಗ್ ನಡೆಸಿದರ ಗುಟ್ಟು ಬಿಟ್ಟುಕೊಟ್ಟ ಬೂಮ್ರಾ

ಮೆಲ್ಬರ್ನ್, ಡಿಸೆಂಬರ್ 28: ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಶುಕ್ರವಾರ (ಡಿಸೆಂಬರ್ 28) ನಡೆದ ಭಾರತ-ಆಸ್ಟ್ರೇಲಿಯಾ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಭಾರತದ ಜಸ್‌ಪ್ರೀತ್‌ಬೂಮ್ರಾ ಅದ್ಭುತ ಬೌಲಿಂಗ್ ಪ್ರದರ್ಶಿಸಿದರು. ಇದರ ಹಿಂದಿನ ಗುಟ್ಟನ್ನು ಬೂಮ್ರಾ ಹೇಳಿಕೊಂಡಿದ್ದಾರೆ.
ಫಸ್ಟ್ ಕ್ಲಾಸ್ (ರಣಜಿ) ಕ್ರಿಕೆಟ್ ವೇಳೆ ಸ್ಲೋ ಪಿಚ್‌ನಲ್ಲಿ ರಿವರ್ಸ್ ಸ್ವಿಂಗ್ ಎಸೆದ ಅನುಭವ ತನಗೆ ಇಲ್ಲೂ ನೆರವಿಗೆ ಬಂತು ಎಂದು ಬೂಮ್ರಾ ಹೇಳಿದ್ದಾರೆ. ಆಸೀಸ್, ಪ್ರಥಮ ಇನ್ನಿಂಗ್ಸ್‌ನಲ್ಲಿ 66.5 ಓವರ್‌ಗೆ ಕೇವಲ 151 ರನ್ ಗಳಿಸಿ ಆಟ ಮುಗಿಸಿತ್ತು. ಬೂಮ್ರಾ ಭರ್ಜರಿ ಆರು ವಿಕೆಟ್ ಉರುಳಿಸಿ ಆಸ್ಟ್ರೇಲಿಯಾವನ್ನು ಕಾಡಿದ್ದರು.
'ನಾನು ಬೌಲಿಂಗ್ ಮಾಡುತ್ತಿದ್ದಾಗ, ವಿಕೆಟ್ ನಿಜವಾಗಿಯೂ ನಿಧಾನವಾಯಿತು ಮತ್ತು ಚೆಂಡು ಮೃದುವಾಯಿತು. ನಾನು ಇನ್ನೂ ಕೊಂಚ ನಿಧಾನವಾಗಿ ಮತ್ತು ಸ್ವಿಂಗ್ ಎಸೆತಕ್ಕಾಗಿ ಪ್ರಯತ್ನಿಸಿದೆ, ಅದು ಕೆಲಸಕ್ಕೆ ಬಂತು. ಯಾಕೆಂದರೆ ಚೆಂಡು ಆಗ ರಿವರ್ಸ್ ಸ್ವಿಂಗ್‌ಗೆ ಸ್ಪಂದಿಸಲಾರಂಭಿಸಿತ್ತು' ಎಂದು ಬುಮ್ರಾ ಪಂದ್ಯದ ಬಳಿಕ ಹೇಳಿದರು.
ಆಸೀಸ್ ಪ್ರಥಮ ಇನ್ನಿಂಗ್ಸ್‌ನಲ್ಲಿ ಜಸ್‌ಪ್ರೀತ್ 33 ರನ್ನಿಗೆ 6 ವಿಕೆಟ್ ಕೆಡವಿದ್ದರು. ಇದಕ್ಕಾಗಿ ಒಟ್ಟು 15.5 ಓವರ್ ಬಳಸಿಕೊಂಡಿದ್ದರು. ಈ ವರ್ಷ ಈ ಅಪರೂಪದ ಸಾಧನೆಗಾಗಿ ಬೂಮ್ರಾ ಗಮನ ಸೆಳೆದಿದ್ದಾರೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 443 ರನ್ ಬಳಿಕ ಡಿಕ್ಲೇರ್ ಘೋಷಿಸಿತ್ತು. ದ್ವಿತೀಯ ಇನ್ನಿಂಗ್ಸ್‌ಗೆ ಇಳಿದಿರುವ ಭಾರತ 5 ವಿಕೆಟ್ ಕಳೆದು 54 ರನ್ ಗಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications