ವಿಜಯ್ ಶಂಕರ್‌ಗೆ ಎಸೆದ ಯಾರ್ಕರ್ ಬಗ್ಗೆ ಮಾತನಾಡಿದ ಬುಮ್ರಾ!

ಸೌಥಂಪ್ಟನ್, ಜೂನ್ 20: ಈಗಾಗಲೇ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೆಬ್ಬೆರಳಿನ ಮೂಳೆ ಮುರಿತದ ಗಾಯದ ಸಮಸ್ಯೆಗೆ ತುತ್ತಾಗಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿರುವುದು ಟೀಮ್ ಇಂಡಿಯಾಗೆ ಭಾರಿ ಆಘತ ತಂದೊಡ್ಡಿದೆ.
ಇದರ ಬೆನ್ನಲ್ಲೇ ಬುಧವಾರ ಅಭ್ಯಾಸದ ವೇಳೆ ಜಸ್‌ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್ ಪಾದದ ಗಾಯದ ಸಮಸ್ಯೆಗೆ ತುತ್ತಾದದ್ದು, ಟೀಮ್ ಇಂಡಿಯಾದಲ್ಲಿ ಆತಂಕ ಹೆಚ್ಚುವಂತೆ ಮಾಡಿತ್ತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಅಫಘಾನಿಸ್ತಾನ ವಿರುದ್ಧ ಜೂನ್ 22ರಂದು ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದ ಸಲುವಾಗಿ ಟೀಮ್ ಇಂಡಿಯಾ ಬುಧವಾರ ನೆಟ್ಸ್ ಅಭ್ಯಾಸ ನಡೆಸುವ ವೇಳೆ ವಿಜಯ್ ಶಂಕರ್ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಒಡಿಐ ಕ್ರಿಕೆಟ್‌ನ ನಂ.1 ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಅಪಾಯಕಾರಿ ಯಾರ್ಕರ್ ಎಸೆತವು ವಿಜಯ್ ಶಂಕರ್ ಅವರ ಪಾದಕ್ಕೆ ಅಪ್ಪಳಿಸಿದ್ದು, ತಕ್ಷಣಕ್ಕೆ ವಿಜಯ್ ಭಾರಿ ನೋವಿನಿಂದ ನರಳಿದ್ದರು ಎಂದು ವರದಿಯಾಗಿತ್ತು.
ಈ ವಿಚಾರವಾಗಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, "ನನ್ನ ಎಸೆತದಲ್ಲಿ ವಿಜಯ್ ಶಂಕರ್‌ಗೆ ಗಾಯವಾಗಿದ್ದು ನಿಜಕ್ಕೂ ದುರದೃಷ್ಠಕರ ಸಂಗತಿ. ಆದರೆ ಅವರೀಗ ಚೇತರಿಸಿದ್ದಾರೆ,'' ಎಂದು ಹೇಳಿದ್ದಾರೆ.
ಇದೇ ವೇಳೆ ಟೂರ್ನಿಯಿಂದ ನಿರ್ಗಮಿಸಿರುವ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕುರಿತಾಗಿಯೂ ಮಾತನಾಡಿದ ಬುಮ್ರಾ, "ಧವನ್ ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸುವಂತಾಗಿರುವುದು ಮತ್ತೂ ದುರದೃಷ್ಠಕರವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಅವರು ಅದ್ಭುತವಾಗಿ ಬ್ಯಾಟ್ ಮಾಡಿದರು. ಆದರೂ, ಈ ಆಘಾತದಿಂದ ಹೊರಬಂದು ಮುಂದಿನದ್ದನ್ನು ಎದುರು ನೋಡಬೇಕಿದೆ. ನಮ್ಮದು ಉತ್ತಮ ತಂಡ,'' ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಔಟಾದರೂ ಕೇನ್ ವಿಲಿಯಮ್ಸನ್ ಕ್ರೀಡಾ ಸ್ಫೂರ್ತಿ ಮೆರೆಯಲಿಲ್ಲ ಏಕೆ?
ಟೂರ್ನಿಯಲ್ಲಿ ಭಾರತ ತಂಡ ಈವರೆಗೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳಗೆ ಆಹುತಿಯಾದರೆ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧದ ಕಠಿಣ ಪಂದ್ಯಗಳಲ್ಲಿ ಜಯ ದಾಖಲಿಸಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಪಟ್ಟದೊಂದಿಗೆ ಅಂಕಪಟ್ಟಿಯಲ್ಲಿ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ. ಇದೀಗ ತನ್ನ ಮುಂದಿನ ಪಂದ್ಯದಲ್ಲಿ ಕ್ರಿಕೆಟ್ ಕೂಸು ಅಫಘಾನಿಸ್ತಾನ ವಿರುದ್ಧ ಜೂನ್ 22ರಂದು ಸೌಥಂಪ್ಟನ್‌ನ ರೋಸ್‌ಬೌಲ್ ಕ್ರೀಡಾಂಗಣದಲ್ಲಿ ಪೈಪೋಟಿ ನಡೆಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications