Jasprit Bumrah: ಚಾಂಪಿಯನ್ಸ್ ಟ್ರೋಫಿಯಲ್ಲಿ ಬುಮ್ರಾ ಅನುಪಸ್ಥಿತಿ ಭಾರತಕ್ಕೆ ಕಾಡಲಿದೆಯಾ? ಕಪಿಲ್ ದೇವ್ ಹೇಳಿದ್ದೇನು?
ಇನ್ನೇನು 4 ದಿನಗಳಲ್ಲಿ ಐಸಿಸಿ ಚಾಂಪಿಯನ್ ಶಿಪ್ ಆರಂಭವಾಗಲಿದೆ. 9ನೇ ಆವೃತ್ತಿಯ ಚಾಂಪಿಯನ್ ಶಿಪ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿವೆ. ಭಾರತ ಸಹ ಈ ಟೂರ್ನಿ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿದೆ. ಈಗ ಮೂರನೇ ಬಾರಿ ಕಪ್ ಗೆಲುವಿನ ಕನಸಿನಲ್ಲಿದೆ. ಆದರೆ ಈ ಆಸೆಗೆ ಆರಂಭದಲ್ಲಿ ಪೆಟ್ಟು ಬಿದ್ದಿದೆ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಗಾಯದ ಕಾರಣದಿಂದಾಗಿ ತಂಡದಿಂದ ಹೊರ ನಡೆದಿದ್ದಾರೆ. ಇದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ.
ಜಸ್ಪ್ರೀತ್ ಬುಮ್ರಾ ಇಲ್ಲದೆ ಭಾರತೀಯ ವೇಗದ ಬೌಲಿಂಗ್ ದಾಳಿಗೆ ಏನಾಗುತ್ತದೆ? ಈ ಪ್ರಶ್ನೆಗೆ ಭಾರತದ ಮಾಜಿ ನಾಯಕ ಕಪಿಲ್ ದೇವ್ ಉತ್ತರಿಸಿದ್ದಾರೆ. ಜಸ್ಪ್ರೀತ್ ಬುಮ್ರಾ ಇಲ್ಲದೆ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಹೇಗೆ ಪರಿಣಾಮ ಬೀರುತ್ತದೆ. ರೋಹಿತ್ ಶರ್ಮಾ ಅವರ ಮುಂದಿರುವ ಆಯ್ಕೆಗಳೇನು ಎಂಬುದರ ಬಗ್ಗೆ ವಿವರಿಸಿದ್ದಾರೆ.

ಕಪಿಲ್ ಹೇಳಿದ್ದೇನು?
ನಾವು ಮೈದಾನದಲ್ಲಿ ವೈಯಕ್ತಿಕ ಪಂದ್ಯವನ್ನು ಆಡುತ್ತಿಲ್ಲ. ಇದು ತಂಡದ ಆಟ. ತಂಡದ ಪ್ರತಿಯೊಬ್ಬ ಆಟಗಾರ ಸ್ಥಿರ ಪ್ರದರ್ಶನ ನೀಡುವುದು ಅವಶ್ಯ. ಪ್ರಮುಖ ಟೂರ್ನಿಯಿಂದ ಸ್ಟಾರ್ ಆಟಗಾರ ಮೈದಾನದಿಂದ ಹೊರಗಿರುವುದು ಬೇಸರದ ಸಂಗತಿ. ಆಟಗಾರ ಗಾಯಕ್ಕೆ ತುತ್ತಾದರೆ ಏನು ಮಾಡಲು ಆಗದು. ರೋಹಿತ್ ಪಡೆಗೆ ನನ್ನ ಶುಭಾಶಯಗಳು. ತಂಡ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿ, ಗೆಲುವು ಸಾಧಿಸಬೇಕು ಎಂಬುದನ್ನು ನಾನು ಬಯಸುತ್ತೇನೆ ಎಂದು ವಿಶ್ವ ಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೆ.20 ರಂದು ಬಾಂಗ್ಲಾದೇಶದ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಫೆ.23 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹಾಗೂ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಗುಂಪು ಪಂದ್ಯವನ್ನು ಆಡಲಿದೆ. ಈ ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆಯುತ್ತವೆ.

ಗವಾಸ್ಕರ್ ಸರಣಿಯ ವೇಳೆಗೆ ಗಾಯ
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಜಸ್ಪ್ರಿತ್ ಬುಮ್ರಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಜಸ್ಪ್ರಿತ್ ಬುಮ್ರಾ ಸ್ಥಿರ ಪ್ರದರ್ಶನ ನೀಡಿದ್ದರು. ಅಲ್ಲದೆ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪತ್ರರಾಗಿದ್ದರು. ಇವರು ಈ ಸರಣಿಯಲ್ಲಿ 32 ವಿಕೆಟ್ ಪಡೆದು ಬೀಗಿದ್ದರು. ಆದರೆ ಸಿಡ್ನಿ ಪಂದ್ಯದ ವೇಳೆ ಇವರು ಗಾಯಕ್ಕೆ ತುತ್ತಾಗಿ ಮೈದಾನದಿಂದ ದೂರ ಉಳಿಯಬೇಕಾಯಿತು. ಆದರೆ ಇವರ ಗಾಯದ ಬಗ್ಗೆ ಇದೇ 11 ರಂದು ಬಿಸಿಸಿಐ ಬಿಗ್ ಅಪ್ ಡೇಟ್ ನೀಡಿದ್ದು ಇವರು ಇನ್ನು ಚೇತರಿಸಿಕೊಂಡಿಲ್ಲ ಎಂದು ತಿಳಿಸಿದೆ. ಹೀಗಾಗಿ ಇವರ ಬದಲಿಗೆ ವರುಣ್ ಚಕ್ರವರ್ತಿ ತಂಡವನ್ನು ಸೇರಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications