ಪತ್ನಿ ಹುಟ್ಟುಹಬ್ಬಕ್ಕೆ ಬುಮ್ರಾ ವಿಶ್ ; ಟ್ರೋಲ್ ಮಾಡಿದ ನೀಶಮ್

ಟೀಮ್ ಇಂಡಿಯಾದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾದ ಜಸ್ಪ್ರೀತ್ ಬುಮ್ರಾ ಮಾರ್ಚ್ 15ರಂದು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ಸಮಯದಲ್ಲಿ ನಡೆಯುತ್ತಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ ಟ್ವೆಂಟಿ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಭಾಗವಹಿಸಿರಲಿಲ್ಲ. ಆ ಟಿ ಟ್ವೆಂಟಿ ಸರಣಿಯಲ್ಲಿ ಜಸ್ಪ್ರೀತ್ ಬೂಮ್ರಾ ಗೈರಾಗಿದ್ದಕ್ಕೆ ಯಾವುದೇ ಕಾರಣವನ್ನು ನೀಡಿರಲಿಲ್ಲ, ಸಂಜನಾ ಗಣೇಶನ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಬುಮ್ರಾ ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಗೈರಾಗಿದ್ದೇಕೆ ಎಂಬುದಕ್ಕೆ ಉತ್ತರ ಸಿಕ್ಕಿತ್ತು.

ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಂಡ ಜಸ್ಪ್ರೀತ್ ಬುಮ್ರಾ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಪ್ರಸ್ತುತ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಕಳಪೆ ಪ್ರದರ್ಶನವನ್ನು ನೀಡಿದರು ಎಂದೇ ಹೇಳಬಹುದು. ಪಂದ್ಯವೊಂದರಲ್ಲಿ 4 ಓವರ್‌ಗಳನ್ನು ಎಸೆದ ಜಸ್ಪ್ರೀತ್ ಬುಮ್ರಾ 56 ರನ್ ನೀಡುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿಯೇ ಅತಿಕೆಟ್ಟ ಇನ್ನಿಂಗ್ಸ್ ಆಡಿದರು. ಅಷ್ಟೇ ಅಲ್ಲದೆ ಐಪಿಎಲ್ ನಿಲುಗಡೆ ವೇಳೆಗೆ 7 ಪಂದ್ಯಗಳನ್ನಾಡಿರುವ ಜಸ್ಪ್ರೀತ್ ಬುಮ್ರಾ ಕೇವಲ 6 ವಿಕೆಟ್‍ಗಳನ್ನು ಪಡೆದಿದ್ದರು. ಕೊರೊನಾವೈರಸ್ ಕಾರಣದಿಂದ ಐಪಿಎಲ್ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಮನೆಗೆ ತೆರಳಿರುವ ಜಸ್ಪ್ರೀತ್ ಬುಮ್ರಾ ಪತ್ನಿ ಹುಟ್ಟುಹಬ್ಬಕ್ಕೆ ಸುಂದರವಾದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ 'ನನ್ನ ಹೃದಯವನ್ನು ಪ್ರತಿದಿನ ಕದಿಯುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡು ಶುಭಾಶಯವನ್ನು ಕೋರಿದ್ದಾರೆ.

ಬೂಮ್ರಾ ಹಾಕಿದ ಈ ಫೋಟೋಗೆ ಮುಂಬೈ ಇಂಡಿಯನ್ಸ್ ತಂಡದ ಮತ್ತೊಬ್ಬ ಆಟಗಾರ ನ್ಯೂಜಿಲೆಂಡ್‌ನ ಜೇಮ್ಸ್ ನೀಶಮ್ ಕಾಮೆಂಟ್ ಮಾಡುವ ಮೂಲಕ ಬೂಮ್ರಾ ಅವರ ಕಾಲನ್ನು ಎಳೆದಿದ್ದಾರೆ. ಬೂಮ್ರಾ ಬರೆದುಕೊಂಡಿದ್ದ ಸಾಲುಗಳನ್ನು ಟ್ರೆಂಟ್ ಬೌಲ್ಟ್ ಕುರಿತಾಗಿ ಬರೆದ ಸಾಲುಗಳೇನೋ ಎಂದು ಊಹಿಸಿದ್ದೆ ಎಂದು ನೀಶಮ್ ಬೂಮ್ರಾರ ಕಾಲೆಳೆದಿದ್ದಾರೆ. ಕಳೆದ ಬಾರಿ ಯುಎಇಯಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಮುಂಬೈ ಇಂಡಿಯನ್ಸ್ ತಂಡದ ಪರ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿದ್ದರು. ಈ ಮೂಲಕ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಜೋಡಿ ಮುಂಬೈ ಇಂಡಿಯನ್ಸ್ ಚಾಂಪಿಯನ್ಸ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಹೀಗಾಗಿ ಬುಮ್ರಾ ಪೋಸ್ಟ್‌ನಲ್ಲಿ ಟ್ರೆಂಟ್ ಬೌಲ್ಟ್ ಅವರನ್ನು ಉಲ್ಲೇಖಿಸಿ ನೀಶಮ್ ಕಾಮೆಂಟ್ ಮಾಡಿ ಕಾಲೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications