Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ಗೆ ಮೊದಲೇ ಸಿದ್ಧತೆ ನಡೆಸಿದ್ದೆ ಎಂದ ಜಸ್ಪ್ರೀತ್ ಬೂಮ್ರಾ

11 ತಿಂಗಳ ವಿರಾಮದ ಬಳಿಕ ಅನುಭವಿ ವೇಗಿ ಜಸ್ಪ್ರೀತ್ ಬೂಮ್ರಾ ಭಾರತ ತಂಡದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದಾರೆ. ಗಾಯದಿಂದಾಗಿ ತಂಡದಿಂದ ಹೊರಬಿದ್ದಿದ್ದ ಬೂಮ್ರಾ ಸಂಪೂರ್ಣ ಚೇತರಿಕೆ ಕಂಡಿದ್ದು ಈಗ ತಂಡಕ್ಕೆ ಮರಳುವುದರ ಜೊತೆಗೆ ತಂಡದ ನಾಯಕತ್ವ ಕೂಡ ವಹಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಬೂಮ್ರಾಗೆ ಸವಾಲಾಗಿರುವುದರಲ್ಲಿ ಅನುಮಾನವಿಲ್ಲ.

ಇನ್ನು ಈ ಸಂದರ್ಭದಲ್ಲಿ ಬೂಮ್ರಾ ವಿಶ್ವಕಪ್‌ಗೆ ತಮ್ಮ ಸಿದ್ಧತೆಯ ಬಗ್ಗೆ ಮಾತನಾಡಿದ್ದು ರಿಹ್ಯಾಬ್ ಸಮಯದಿಂದಲೇ ತಾನು ವಿಶ್ವಕಪ್‌ ಟೂರ್ನಿಗೆ ಸಿದ್ಧತೆ ಆರಂಭಿಸಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ರಿಹ್ಯಾಬ್ ಸಂದರ್ಭದಲ್ಲಿಯೇ ತಾನು ಟಿ20 ಮಾದರಿಯ ಬದಲಾಗಿ ಏಕದಿನ ಮಾದರಿಗೆ ಅನುವಾಗುವಂತೆ ಸಿದ್ಧತೆಯನ್ನು ಆರಂಭಿಸಿದ್ದೆ ಎಂದು ಬೂಮ್ರಾ ಹೇಳಿಕೊಂಡಿದ್ದಾರೆ.

Jasprit Bumrah said I was preparing for ODI World Cup during my rehab

"ವಿಶ್ವಕಪ್ ಟೂರ್ನಿಯವರೆಗೆ ಟೆಸ್ಟ್ ಮಾದರಿಯಲ್ಲಿ ಆಡುವುದಿಲ್ಲ ಎನ್ನುವ ಮನಸ್ಥಿತಿಯನ್ನು ಹೊಂದಿದ್ದೆ. ನನ್ನ ರಿಹ್ಯಾಬ್ ಸಂದರ್ಭದಲ್ಲಿಯೂ ನಾನು ಟಿ20ಗಾಗಿ ಸಿದ್ಧತೆ ನಡೆಸುತ್ತಿರಲಿಲ್ಲ. ನಾನು ಯಾವಾಗಲೂ ವಿಶ್ವಕಪ್ ಟೂರ್ನಿಗಾಗಿಯೇ ಸಿದ್ಧತೆಯನ್ನು ನಡೆಸುತ್ತಿದ್ದೆ" ಎಂದು ಐರ್ಲೆಂಡ್ ವಿರುದ್ಧದ ಟಿ20 ಸರಣಿಗೂ ಮುನ್ನಾದಿನ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಹೇಳಿಕೆ ನೀಡಿದ್ದಾರೆ.

"ನಾನು ನಿತ್ಯವೂ 10, 12 ಕೆಲವೊಮ್ಮೆ 15 ಓವರ್‌ಗಳ ಬೌಲಿಂಗ್ ಕೂಡ ನಡೆಸಿಕೊಂಡು ಬಂದಿದ್ದೇನೆ. ನಾನು ಹೆಚ್ಚಿನ ಓವರ್‌ಗಳನ್ನು ನಾನು ಬೌಲಿಂಗ್ ಮಾಡುತ್ತಿದ್ದೆ. ಆಗ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬೌಲಿಂಗ್ ಮಾಡುವ ಅಗತ್ಯವಿದ್ದಾ ಸುಲಭವಾಗುತ್ತದೆ. ನಾವೆಲ್ಲರು ಕೂಡ ಏಕಿನ ಮಾದರಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಸ್ಪಷ್ಟವಾಗಿದ್ದೆವು. ನಾಲ್ಕು ಓವರ್‌ಗಳಿಗಾಗಿ ಅಲ್ಲ" ಎಂದು ಬೂಮ್ರಾ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಡಬ್ಲಿನ್‌ನಲ್ಲಿ ಐರ್ಲೆಂಡ್ ವಿರುದ್ಧದ ಟಿ20 ಸರಣಿಗಾಗಿ ಅಭ್ಯಾಸ ನಡೆಸುತ್ತಿದ್ದಾಗ ಬೂಮ್ರಾ ತೀಕ್ಷ್ಣವಾದ ಯಾರ್ಕರ್ ಹಾಗೂ ಬೌನ್ಸರ್‌ಗಳ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ನೆಟ್ಸ್‌ನಲ್ಲಿ ಹಿಮ್ಮೆಟ್ಟಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಹೀಗಾಗಿ ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡುತ್ತಿದ್ದರೂ ಬೂಮ್ರಾ ಉತ್ತಮ ಲಯದಲ್ಲಿರುವುದು ಗೋಚರಿಸುತ್ತಿದೆ.

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೇರ್, ರಾಸ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್
ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್.

Story first published: Thursday, August 17, 2023, 23:46 [IST]
Other articles published on Aug 17, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+