ಬೂಮ್ರಾಗೆ ವಿಶ್ ಮಾಡುವಾಗ ಎಡವಟ್ಟು, ಟ್ರೋಲ್‌ಗೀಡಾದ ಅಗರ್ವಾಲ್!

ಬೆಂಗಳೂರು: ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಅವರು ಮಾರ್ಚ್ 15ರಂದು ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಮದುವೆಯಾಗಿದ್ದಾರೆ. ಇಬ್ಬರ ಮದುವೆ ಸಮಾರಂಭ ಗೋವಾದಲ್ಲಿ ನಡೆದಿದೆ. ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರಿಕೆಟಿಗನಿಗೆ ಕ್ರಿಕೆಟಿಗರು, ಸಿನಿಮಾ ತಾರೆಯರು ಮತ್ತು ಇತರ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಮದುಮಗ ಜಸ್‌ಪ್ರೀತ್ ಬೂಮ್ರಾಗೆ ಶುಭ ಕೋರಿ ಅನೇಕರು ಟ್ವೀಟ್ ಮಾಡಿದ್ದರು. ಈ ವೇಳೆ ಕರ್ನಾಟಕ ತಂಡದ ಆಟಗಾರ ಮಯಾಂಕ್ ಅಗರ್ವಾಲ್ ಅವರ ಟ್ವೀಟ್ ಹೆಚ್ಚು ಗಮನ ಸೆಳೆಯತೊಡಗಿದೆ. ಕಾರಣ ಟ್ವೀಟಿನಲ್ಲಿ ಯಡವಟ್ಟಾಗಿತ್ತು!
ಟ್ವೀಟ್ ಯಡವಟ್ಟು
ಸೆಲೆಬ್ರಿಟಿಗಳು ಟ್ವೀಟ್ ಮಾಡುವಾಗ ಯಡವಟ್ಟಾಗಿದ್ದು ಅನೇಕ ಸಾರಿ ನಡೆದಿದೆ. ಮಯಾಂಕ್ ಅಗರ್ವಾಲ್ ಕೂಡ ಇಂಥದ್ದೇ ಯಡವಟ್ಟಿಗಾಗಿ ಈಗ ಪೇಚಿಗೆ ಸಿಲುಕಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜಸ್‌ಪ್ರೀತ್ ಬೂಮ್ರಾ ಮತ್ತು ಸಂಜನಾ ಗಣೇಶನ್ ಅವರನ್ನು ಟ್ವೀಟ್‌ನಲ್ಲಿ ಮೆನ್ಶನ್ ಮಾಡುವಾಗ ಮಿಸ್ಟೇಕ್ ಆಗಿದೆ. ಟ್ವೀಟಿನಲ್ಲಿ ಮಯಾಂಕ್ ಅವರು ಸಂಜನಾ ಬದಲು ಸಂಜಯ್ ಬಂಗಾರ್ ಅವರನ್ನು ಮೆನ್ಶನ್ ಮಾಡಿ ಶುಭ ಕೋರಿದ್ದಾರೆ.

ಸಂಜನಾ ಚಿತ್ರ ಎಡಿಟ್
ಬೂಮ್ರಾ ಪತ್ನಿ ಸಂಜನಾ ಗಣೇಶನ್ ಅವರನ್ನು ಉಲ್ಲೇಖಿಸುವ ಬದಲಾಗಿ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರನ್ನು ಉಲ್ಲೇಖಿಸಿ ಮಯಾಂಕ್ ಅಗರ್ವಾಲ್ ಮಾಡಿರುವ ಟ್ವೀಟ್ ನೆಟ್ಟಿಗರು ಹಲ್ಲು ಕಿಸಿಯುವಂತೆ ಮಾಡಿದೆ. ಅನೇಕರು ಬೂಮ್ರಾ-ಸಂಜನಾ ಜೊತೆಗಿರುವ ಚಿತ್ರದಲ್ಲಿ ಸಂಜನಾ ಮುಖದ ಜಾಗದಲ್ಲಿ ಬಂಗಾರ್ ಫೋಟೋ ಎಡಿಟ್ ಮಾಡಿ ತಮಾಷೆ ತೆಗೆದುಕೊಳ್ಳುತ್ತಿದ್ದಾರೆ.
ಮಯಾಂಕ್‌ನಿಂದ ತಪ್ಪಾಗಿದ್ದೆಲ್ಲಿ?
ಟ್ವೀಟ್ ಮಾಡುವಾಗ, 'ಜಸ್‌ಪ್ರೀತ್ ಬೂಮ್ರಾ ಮತ್ತು ಸಂಜನಾ ಗಣೇಶನ್‌ಗೆ ಅಭಿನಂದನೆಗಳು. ಜೊತೆಯಾಗಿ ನಡೆಯುವಾಗ ನಿಮಗೆ ಖುಷಿ ಮತ್ತು ಆರೋಗ್ಯ ಇರಲಿ ಎಂದು ಹಾರೈಸುತ್ತೇನೆ' ಎಂದು ಪಾಪ ಮಯಾಂಕ್ ಅಸಲಿಗೆ ಬರೆದುಕೊಂಡಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ಬುಕ್ ಅಥವಾ ಟ್ವಿಟರ್ ಖಾತೆ ಹೊಂದಿರುವವರಿಗೆ ನಾವು ವಿಶ್ ಮಾಡುವಾಗ ಅವರ ಖಾತೆಯನ್ನು ಮಿನ್ಶನ್ ಮಾಡಬಹುದು. ಹೀಗೆ ಸಂಜನಾ ಖಾತೆ ಮೆನ್ಶನ್ ಮಾಡುವಾಗ ಕಣ್ತಪ್ಪಿ ಮಯಾಂಕ್ ಅವರು ಸಂಜಯ್ ಬಂಗಾರ್ ಖಾತೆ ಮೆನ್ಶನ್ ಮಾಡಿದ್ದರು. ಅಲ್ಲಿಗೆ ಟ್ರೋಲಿಗರ ತರಲೆ ಶುರುವಾಯ್ತು ನೋಡಿ!
ಯಾರೀ ಸಂಜನಾ ಗಣೇಶನ್?
ಬೂಮ್ರಾ ಮದುವೆಯಾಗುತ್ತಿರುವ ಸಂಜನಾ ಗಣೇಶನ್ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲಿಸ್ಟ್ ಮತ್ತು ಜನಪ್ರಿಯ ಟಿವಿ ಆ್ಯಂಕರ್. ಸ್ಟಾರ್ ಸ್ಪೋರ್ಟ್ಸ್‌ನ ಆ್ಯಂಕರ್‌ಗಳಲ್ಲಿ ಒಬ್ಬರಾಗಿರುವ ಸಂಜನಾ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಕವರ್ ಮಾಡ್ತಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿಯೂ ಕೆಲಸ ಮಾಡುತ್ತಾರೆ. ಮದುವೆ ಕಾರಣದಿಂದ ಬೂಮ್ರಾ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಆರ್ಧದಿಂದಲೇ ಹೊರಗುಳಿದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications