Jasprit Bumrah: ಜಡೇಜಾ ದಾಖಲೆ ಅಳಿಸಿ ಹಾಕಿದ ಜಸ್ಪ್ರೀತ್ ಬುಮ್ರಾ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಇಂಗ್ಲೆಂಡ್ ತಂಡದ ಆರಂಭಿಕರಾದ ಬೆನ್ ಡಕೆಟ್ ಹಾಗೂ ಜಾಕಬ್ ಬೆಥೆಲ್ ಜೋಡಿ ಭರ್ಜರಿ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಇದೇ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಕಣಕ್ಕೆ ಇಳಿದರು. ಇವರು ಸಹ ಬಿಗುವಿನ ಪ್ರದರ್ಶನ ನೀಡಿ ಮಿಂಚು ಹರಿಸಿದರು.
ಮೊದಲ ವಿಕೆಟ್‌ಗೆ ಜಾಕಬ್ ಬೆಥೆಲ್ ಹಾಗೂ ಡಕೆಟ್ ಜೋಡಿ 12.2 ಓವರ್‌ಗಳಲ್ಲಿ 61 ರನ್ ಸೇರಿಸಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಗುರ್ನರು ಬ್ರಾರ್ ಯಶಸ್ವಿಯಾದರು. ಇವರು ಒಂದೇ ಓವರ್‌ನಲ್ಲಿ ಇಬ್ಬರು ಆರಂಭಿಕ ಆಟಗಾರರನ್ನು ಬೇರ್ಪಡಿಸುವಲ್ಲಿ ಸಫಲರಾದರು. 14ನೇ ಓವರ್‌ನ ಮೊದಲ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅವರು ನಾಯಕ ಹ್ಯಾರಿ ಬ್ರೂಕ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.

ಬುಮ್ರಾ ಅವರ ಅಮೋಘ ದಾಳಿಗೆ ಹ್ಯಾರಿ ಬ್ರೂಕ್ ಔಟ್ ಆದರು. ಬುಮ್ರಾ ಅವರು ಎಸೆದ ಬ್ಯಾಕ್ ಆಫ್ ಲೆಂಥ್ ಎಸೆತ ಪುಟಿದು ಬ್ರೂಕ್ ಅವರ ಬಳಿ ಬಂದಿತು. ಇದನ್ನು ಅವರು ತಪ್ಪಾಗಿ ಗ್ರಾಹಿಸಿ ಸ್ಲಿಪ್‌ನಲ್ಲಿ ರೋಹಿತ್ ಶರ್ಮಾ ಅವರಿಗೆ ಕ್ಯಾಚ್ ನೀಡಿದರು. ಈ ಮೂಲಕ ಬುಮ್ರಾ ಏಕದಿನ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದರು.
ಜಸ್ಪ್ರೀತ್ ಬುಮ್ರಾ ಅತಿ ಕಡಿಮೆ ಎಸೆತಗಳಲ್ಲಿ 150 ವಿಕೆಟ್ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಕಡಿಮೆ ಎಸೆತದಲ್ಲಿ 150 ವಿಕೆಟ್ ಪಡೆದ ಭಾರತೀಯ ಬೌಲರ್ಸ್
4070, ಮೊಹಮ್ಮದ್ ಶಮಿ
4513, ಕುಲ್‌ದೀಪ್ ಯಾದವ್
4605, ಜಸ್ಪ್ರೀತ್ ಬುಮ್ರಾ
ಹ್ಯಾರಿ ಬ್ರೂಕ್ ವಿಕೆಟ್ ಪಡೆಯುತ್ತಿದ್ದಂತೆ ಬುಮ್ರಾ ಅವರು ಇಂಗ್ಲೆಂಡ್ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಇಂಗ್ಲೆಂಡ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ಸ್
31, ಜಸ್ಪ್ರೀತ್ ಬುಮ್ರಾ
30, ರವೀಂದ್ರ ಜಡೇಜಾ
28, ಭುವನೇಶ್ವರ್ ಕುಮಾರ್
ಇಂಗ್ಲೆಂಡ್ 258 ರನ್‌ಗೆ ಆಲೌಟ್
ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ ಬೆನ್ ಡಕೆಟ್ 43, ಜಾಕೊಬ್ ಬೆಥೆಲ್ 14 ರನ್ ಸಿಡಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೋ ರೂಟ್ ಅಜೇಯ 76 ರನ್ (6 ಬೌಂಡರಿ, 1 ಸಿಕ್ಸರ್) ಸಿಡಿಸಿ ತಂಡದ ಮೊತ್ತವವನ್ನು ಹಿಗ್ಗಿಸಿದರು. ಲಿಯಾಮ್ ಡಾಸನ್ 6 ಬೌಂಡರಿ, 1 ಸಿಕ್ಸರ್ ಸಹಿತ 68 ರನ್ ಬಾರಿಸಿ ಮಿಂಚಿದರು. ಅಂತಿಮವಾಗಿ ಇಂಗ್ಲೆಂಡ್ 258 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ಸ್ಪಿನ್ ಬೌಲರ್ ಅಕ್ಷರ್ ಪಟೇಲ್ 62 ರನ್ ನೀಡಿ 4 ವಿಕೆಟ್ ಕಬಳಿಸಿದರು. ಉಳಿದಂತೆ ವೇಗಿ ಪ್ರಸಿದ್ಧ್ ಕೃಷ್ಣ, ಗುರ್ನರ್ ಬ್ರಾರ್ ತಲಾ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications