For Quick Alerts
ALLOW NOTIFICATIONS  
For Daily Alerts
 

ಚೆನ್ನೈ ಟೆಸ್ಟ್‌ನಲ್ಲಿ ಎಲ್ಲರ ಟೀಮ್ ಇಂಡಿಯಾ ಸ್ಟಾರ್‌ ವೇಗಿ ಬುಮ್ರಾ ಮೇಲೆ: ಕಾರಣವೇನು?

ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಟೆಸ್ಟ್‌ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಟಾರ್ ಬ್ಯಾಟರ್‌ಗಳು ಈ ಟೆಸ್ಟ್‌ನಲ್ಲಿ ಅಂಗಳ ಪ್ರವೇಶಿಸಲಿದ್ದು, ಎಲ್ಲರ ಕಣ್ಣು ವಿರಾಟ್‌ ಕೊಹ್ಲಿ, ರೋಹಿತ್ ಶರ್ಮಾ, ಸ್ಪಿನ್ ಮಾಂತ್ರಿಕ ಅಶ್ವಿನ್‌ ಮೇಲೆ ನೆಟ್ಟಿದೆ. ಆದರೆ ಟೀಮ್ ಇಂಡಿಯಾದ ವೇಗಿ ಯೊಬ್ಬರು ಈ ಪಂದ್ಯದಲ್ಲಿ ವಿಶೇಷ ಸಾಧನೆ ಮಾಡಲಿದ್ದಾರೆ.

ಸೆಪ್ಟೆಂಬರ್ 19 ರಂದು, ಭಾರತ ಹಾಗೂ ಬಾಂಗ್ಲಾ ತಂಡಗಳು ಮೊದಲ ಟೆಸ್ಟ್‌ಗೆ ಚೆನ್ನೈನ ಅಂಗಳ ಸಿದ್ಧವಾಗಿದೆ. ಈ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಜಸ್ಪ್ರಿತ್ ಬುಮ್ರಾ ಅವರು ಪದಾರ್ಪಣೆ ಮಾಡಲಿದ್ದಾರೆ. ಚೊಚ್ಚಲ ಪಂದ್ಯ ಅಂದ ಮೇಲೆ ನಿಮಗೆ ಅನಿಸಬಹುದು. ಈಗಾಗಲೇ ಟೆಸ್ಟ್‌ನಲ್ಲಿ ಅಬ್ಬರಿಸಿರುವ ಬುಮ್ರಾ ಮತ್ತೆ ಏಕೆ ಟೆಸ್ಟ್‌ಗೆ ಪದಾರ್ಪಣೆ ಮಾಡುತ್ತಾರೆ ಎಂದು ಆ ಬಗ್ಗೆ ವರದಿ ಇಲ್ಲಿದೆ.

Jasprit Bumrah Set for Test Debut Against Bangladesh as Team India Eyes Victory in Chennai

ಬುಮ್ರಾ ಮೇಲೆ ಕಣ್ಣು

ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಜಸ್ಪ್ರಿತ್ ಬುಮ್ರಾ ಅವರು ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಇವರಿಗೆ ಈ ಸರಣಿಯಲ್ಲಿ ವಿಶ್ರಾಂತಿ ನೀಡಲಾಗುತ್ತದೆ ಎಂಬು ಮಾತುಗಳು ಕೇಳಿ ಬಂದಿದ್ದವು. ಆದರೆ ಆಯ್ಕೆ ಸಮಿತಿ ಇವರಿಗೆ ಮಣೆ ಹಾಕಿದೆ. ಈ ವರ್ಷದ ಅಂತ್ಯದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ನಡೆಯಲಿದೆ. ಈ ಸರಣಿಗೆ ಬುಮ್ರಾ ಅವರ ಪಾತ್ರ ಮುಖ್ಯವಾಗಿದೆ. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಎಲ್ಲ ಊಹೆಗಳನ್ನು ಮೀರಿ ಆಯ್ಕೆ ಸಮಿತಿ ಲೆಕ್ಕಹಾಕಿದ್ದು, ಸ್ಟಾರ್‌ ವೇಗಿಗೆ ಅವಕಾಶ ನೀಡಿದೆ.

ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನೀಡುವ ಪ್ರದರ್ಶನದ ಮೇಲೆ ಜಸ್ಪ್ರಿತ್ ಬುಮ್ರಾ ಎರಡನೇ ಟೆಸ್ಟ್‌ ಆಡುತ್ತಾರೋ ಇಲ್ಲವೋ ಎಂಬುದು ತಿಳಿಯುತ್ತದೆ. ಈಗ ಟೀಮ್ ಇಂಡಿಯಾವನ್ನು ಮೊದಲ ಟೆಸ್ಟ್‌ಗೆ ಮಾತ್ರ ಪ್ರಕಟಿಸಲಾಗಿದೆ. ಇನ್ನು ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸುಲಭವಾಗಿ ಪಂದ್ಯವನ್ನು ಗೆದ್ದಲ್ಲಿ, ಎರಡನೇ ಟೆಸ್ಟ್‌ಗೆ ಬುಮ್ರಾಗೆ ವಿಶ್ರಾಂತಿ ನೀಡಲಾಗುವುದು. ಮತ್ತು ದುಲೀಪ್ ಟ್ರೋಫಿಯಲ್ಲಿ ಮಿಂಚಿದ ಆಟಗಾರನಿಗೆ ಮಣೆ ಹಾಕಲಾಗುವುದು.

Jasprit Bumrah Set for Test Debut Against Bangladesh as Team India Eyes Victory in Chennai

ಬುಮ್ರಾ ಪದಾರ್ಪಣೆ

ಜಸ್ಪ್ರಿತ್ ಬುಮ್ರಾ ಮೈದಾನಕ್ಕೆ ಇಳಿದರೆ ಎದುರಾಳಿಗಳಿಗೆ ನಡುಕ. ಬ್ಯಾಟ್ಸ್‌ಮನ್‌ಗಳ ಮೆರೆದಾಟದಲ್ಲಿ ಬುಮ್ರಾ ಅವರು ಸಹ ಸುದ್ದಿಯಲ್ಲಿದ್ದಾರೆ. ಕಪಿಲ್‌ ದೇವ್, ಜಹೀರ್ ಖಾನ್ ಅವರಂತೆ ಸ್ಟಾರ್‌ ಗಿರಿ ಪಡೆದ ವೇಗಿ ಜಸ್ಪ್ರಿತ್ ಬುಮ್ರಾ. ಯಾರ್ಕರ್‌ ಸ್ಪೇಷಲಿಸ್ಟ್ ಖ್ಯಾತಿಯ ಬುಮ್ರಾ ಬಾಂಗ್ಲಾ ವಿರುದ್ಧ ಒಂದೇ ಒಂದು ಟೆಸ್ಟ್‌ ಪಂದ್ಯವನ್ನು ಆಡಿಲ್ಲ. ಹೀಗಾಗಿ ಅವರು ಬಾಂಗ್ಲಾ ವಿರುದ್ಧ ಚೆನ್ನೈನಲ್ಲಿ ಪದಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಬುಮ್ರಾ ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ತಮ್ಮ ಕ್ಷಮತೆ ಪ್ರದರ್ಶಿಸಿದ್ದಾರೆ.

ವಿಶ್ವದಾದ್ಯಂತ ಸ್ಟಾರ್‌ ಬ್ಯಾಟರ್‌ಗಳಿಗೆ ತಮ್ಮ ಬಿಗುವಿನ ದಾಳಿಯ ಮೂಲಕ ಕಾಟ ನೀಡಿರುವ ಬುಮ್ರಾ, ಈಗ ಬಾಂಗ್ಲಾದೇಶದ ಬ್ಯಾಟರ್‌ಗಳನ್ನು ಕಾಡಲು ಸಿದ್ಧರಾಗಿದ್ದಾರೆ.

Story first published: Thursday, September 12, 2024, 19:01 [IST]
Other articles published on Sep 12, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+