Jasprit Bumrah: 51 ವರ್ಷಗಳ ಹಳೆಯ ದಾಖಲೆಯ ಮೇಲೆ ಜಸ್ಪ್ರಿತ್ ಬುಮ್ರಾ ಕಣ್ಣು
ಭಾರತ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಿದೆ. ಈ ವೇಳೆ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ನಿರಾಸೆ ಅನುಭವಿಸಿದೆ. ಅಲ್ಲದೆ ಸದ್ಯ ಟೀಮ್ ಇಂಡಿಯಾ ಈ ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಭಾರತ ಸತತ ಸೋಲು ಕಾಣುತ್ತಿದ್ದರೂ, ಟೀಮ್ ಇಂಡಿಯಾದ ಒಬ್ಬ ಪ್ಲೇಯರ್ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ, ಆಸೀಸ್‌ನ ಪಿಚ್‌ಗಳಲ್ಲಿ ಅಬ್ಬರ ನಡೆಸುತ್ತಿದ್ದಾರೆ. ಬೌನ್ಸಿ ಟ್ರ್ಯಾಕ್ ಇರಲಿ, ಟರ್ನಿಂಗ್ ಟ್ರ್ಯಾಕ್ ಇರಲಿ, ಬುಮ್ರಾ ಅಬ್ಬರ ಏನು ಕಮ್ಮಿ ಆಗುವುದಿಲ್ಲ. ಪ್ರಸಕ್ತ ಸರಣಿಯಲ್ಲಿ ಟೀಮ್ ಇಂಡಿಯಾದ ಪರ ಸ್ಥಿರ ಆಟಗಾರರ ಪಟ್ಟಿಯನ್ನು ಒಮ್ಮೆ ತೆಗೆದು ನೋಡಿದಾಗ ಈ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಜಸ್ಪ್ರಿತ್ ಬುಮ್ರಾ. ಐದನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನ ಮಾಲೆ ತೊಡಬೇಕಾದಲ್ಲಿ ಬುಮ್ರಾ ಅವರ ಕೊಡುಗೆ ಸಹ ಇಂಪಾರ್ಟೆಂಟ್.

ಪ್ರಸಕ್ತ ಸರಣಿಯಲ್ಲಿ ಗರಿಷ್ಠ ವಿಕೆಟ್
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಬುಮ್ರಾ ಆರ್ಭಟಕ್ಕೆ ಆಸ್ಟ್ರೇಲಿಯಾ ಬ್ಯಾಟರ್‌ಗಳು ಸುಸ್ತು ಹೊಡೆದಿದ್ದಾರೆ. ಇವರು ಆಡಿದ 4 ಪಂದ್ಯಗಳ 8 ಇನ್ನಿಂಗ್ಸ್‌ಗಳಲ್ಲಿ ಒಟ್ಟು 30 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಕೀರ್ತಿ ಇವರ ಪಾಲಾಗಿದೆ. ಇವರ ಸನಿಹದಲ್ಲೂ ಯಾವೊಬ್ಬ ಬೌಲರ್ ಇಲ್ಲ. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಈ ಸರಣಿಯಲ್ಲಿ 20 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾರಿ ಹೇಳಿದ್ದಾರೆ.
ಹೇಗಿತ್ತು 2024ರಲ್ಲಿ ಬುಮ್ರಾ ಪ್ರದರ್ಶನ?
ಜಸ್ಪ್ರೀತ್ ಬುಮ್ರಾ 2024 ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇವರು ಮೂರು ಫಾರ್ಮೆಟ್‌ಗಳನ್ನು ಸೇರಿಸಿ ಒಟ್ಟು 86 ವಿಕೆಟ್ ಪಡೆದಿದ್ದಾರೆ. ಇವರು ಆಡಿರುವ 13 ಟೆಸ್ಟ್ ಪಂದ್ಯಗಳ 26 ಇನ್ನಿಂಗ್ಸ್‌ಗಳಲ್ಲಿ 71 ವಿಕೆಟ್ ಪಡೆದಿದ್ದು, ಹೊಸ ವರ್ಷದಲ್ಲಿ ನವ ಉತ್ಸಾಹದಿಂದ ಅಂಗಳಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಯಾವ ದಾಖಲೆ ನಿರ್ಮಾಣ?
ಜನವರಿ ಮೂರರಿಂದ ಬಾರ್ಡರ್ ಗವಾಸ್ಕರ್ ಸರಣಿಯ ಐದನೇ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಬುಮ್ರಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿವೆ. ಈ ಪಂದ್ಯದಲ್ಲಿ ಇವರು ಆರು ವಿಕೆಟ್ ಪಡೆದಲ್ಲಿ ದೊಡ್ಡ ದಾಖಲೆ ನಿರ್ಮಿಸಲಿದ್ದಾರೆ. ಬುಮ್ರಾ ಈ ಮೂಲಕ 51 ವರ್ಷದ ಹಳೆಯ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಒಂದೇ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಕೀರ್ತಿ ಬುಮ್ರಾ ಅವರದ್ದಾಗುತ್ತದೆ. 1972-73ರಲ್ಲಿ ಇಂಗ್ಲೆಂಡ್ ವಿರುದ್ಧ ಬಿಎಸ್ ಚಂದ್ರಶೇಖರ್ 35 ವಿಕೆಟ್‌ಗಳನ್ನು ಪಡೆದು ಬೀಗಿದ್ದರು. ಬುಮ್ರಾ 6 ವಿಕೆಟ್ ಪಡೆದಲ್ಲಿ ಅವರ ದಾಖಲೆ ಧ್ವಂಸವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications