ಭಾರತ ತಂಡಕ್ಕೆ ಮರಳಲು ಸಜ್ಜಾಗುತ್ತಿರುವ ಸ್ಟಾರ್ ಆಟಗಾರರು

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯ ನಂತರ ಭಾರತ ತಂಡ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಏಕದಿನ ಮತ್ತು ಟಿ20 ಸರಣಿಯನ್ನು ಆಡಲಿದೆ. ಈ ಸರಣಿ ವೇಳೆಗೆ ಭಾರತದ ಇಬ್ಬರು ಸ್ಟಾರ್ ಆಟಗಾರರು ತಂಡವನ್ನು ಸೇರಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈಗಾಗಲೇ ಸಂಪೂರ್ಣವಾಗು ಸುಧಾರಿಸಿಕೊಂಡಿದ್ದಾರೆ. ಎನ್‌ಸಿಎ ನಲ್ಲಿ ಅವರು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಅವರು ತಂಡಕ್ಕೆ ಮರಳಲು ಸಿದ್ಧವಾಗುತ್ತಿದ್ದಾರೆ.
ಜನವರಿ ಆರಂಭದಲ್ಲಿ ನಡೆಯುವ ಭಾರತ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬುಮ್ರಾ ಆಡುವ ಸಾಧ್ಯತೆ ಇದೆ. ಒಂದು ವೇಳೆ ಶ್ರೀಲಂಕಾ ವಿರುದ್ಧದ ಸರಣಿಗೆ ಅವರು ಅಲಭ್ಯರಾದರೂ, ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ಅವರು ತಂಡಕ್ಕೆ ಮರಳುವುದು ನಿಶ್ಚಿತವಾಗಿದೆ.
2022ರಲ್ಲಿ ಬುಮ್ರಾ ಗಾಯದ ತೊಂದರೆಯಿಂದ ಬಳಲಿದರು. ಏಷ್ಯಾಕಪ್‌ನಲ್ಲಿ ಅವರು ಭಾಗವಹಿಸಲಿಲ್ಲ, ನಂತರ ಟಿ20 ವಿಶ್ವಕಪ್ ಆರಂಭಕ್ಕೆ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅವರು ಚೇತರಿಸಿಕೊಂಡರು, ನಂತರ ಅವರು ಮತ್ತೆ ಗಾಯಗೊಂಡ ಕಾರಣ, ಟಿ20 ವಿಶ್ವಕಪ್‌ಗೆ ಅಲಭ್ಯರಾದರು.

ಎನ್‌ಸಿಎನಲ್ಲಿ ಬುಮ್ರಾ ತರಬೇತಿ
ಜಸ್ಪ್ರೀತ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತರಬೇತಿಯನ್ನು ಪುನರಾರಂಭಿಸಿದ್ದಾರೆ. ಶೀಘ್ರದಲ್ಲೇ ಅವರು ಸಂಪೂರ್ಣವಾಗಿ ಫಿಟ್ ಆಗಲಿದ್ದಾರೆ. ಅವರನ್ನು ಶ್ರೀಲಂಕಾ ಸರಣಿಗೆ ಆಯ್ಕೆ ಮಾಡಲಾಗುತ್ತದೆಯಾ ಎನ್ನುವುದನ್ನು ಆಯ್ಕೆದಾರರು ತೀರ್ಮಾನಿಸಲಿದ್ದಾರೆ. ಆದರೂ, ರಿಸ್ಕ್ ತೆಗೆದುಕೊಳ್ಳದೆ ಅವರನ್ನು ನ್ಯೂಜಿಲೆಂಡ್ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.
2022ರ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಕೆಳ ಬೆನ್ನಿನ ಗಾಯಕ್ಕೆ ಒಳಗಾಗಿದ್ದರು. ಅಂದಿನಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಬುಮ್ರಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿತ್ತು.

ಇನ್ನೂ ಫಿಟ್ ಆಗದ ಜಡೇಜಾ
ಏಷ್ಯಾಕಪ್ ಟೂರ್ನಿಯ ಸಂದರ್ಭದಲ್ಲಿ ಗಾಯಗೊಂಡು ತಂಡದಿಂದ ಹೊರಬಿದ್ದ ರವೀಂದ್ರ ಜಡೇಜಾ ಸದ್ಯ ಚೇತರಿಸಿಕೊಂಡಿದ್ದಾರೆ. ಮೊಣಕಾಲು ಗಾಯಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಜಡೇಜಾ, ಬಾಂಗ್ಲಾದೇಶದ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು, ಸಂಪೂರ್ಣವಾಗಿ ಫಿಟ್ ಆಗದ ಕಾರಣ ತೆರಳಲಿಲ್ಲ.
ಮುಂದಿನ ಎರಡು ವಾರಗಳಲ್ಲಿ ಜಡೇಜಾ ಎನ್‌ಸಿಎಗೆ ವರದಿ ಸಲ್ಲಿಸಲಿದ್ದಾರೆ. ಅವರು, ಬಾಂಗ್ಲಾದೇಶದ ಸರಣಿಗೆ ಫಿಟ್ ಆಗಿರಲಿಲ್ಲ. ಪೂರ್ಣ ತರಬೇತಿಯನ್ನು ಆರಂಭಿಸಿದ ನಂತರ ಅವರ ಗಾಯದ ಬಗ್ಗೆ ತಿಳಿಯಲಿದೆ. ತಜ್ಞರು ಅವರ ಗಾಯವನ್ನು ನಿರ್ಣಯಿಸಲಿದ್ದಾರೆ. ಶ್ರೀಲಂಕಾ ಅಥವಾ ನ್ಯೂಜಿಲೆಂಡ್ ಸರಣಿಗೆ ಅವರು ಲಭ್ಯರಾಗುವ ಸಾಧ್ಯತೆ ಇಲ್ಲವಾದರೂ, ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಅವರು ಲಭ್ಯವಾಗುತ್ತಾರೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ಟಿ20 ಸರಣಿಯಲ್ಲಿ ಆಡುವ ಸಾಧ್ಯತೆ
ಬುಮ್ರಾ ಮತ್ತು ಜಡೇಜಾ ರಣಜಿಯಲ್ಲಿ ಆಡಬೇಕು ಎಂದು ಹಲವರು ಹೇಳುತ್ತಿದ್ದರು ಅದು ಕಾರ್ಯಸಾಧುವಲ್ಲ. ಟಿ20 ಅಥವಾ ಏಕದಿನ ಮಾದರಿಯಾಗಿದ್ದರೆ ಅದನ್ನು ಪ್ರಯತ್ನಿಸಬಹುದಿತ್ತು. ಅವರು ನೇರವಾಗಿ ಟೆಸ್ಟ್ ಆಡುವುದು ಉತ್ತಮವಲ್ಲ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಬುಮ್ರಾ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಒಳಬರುವ ಆಯ್ಕೆ ಸಮಿತಿಯು ಜಡೇಜಾ ಟಿ20 ಮಾದರಿಯಲ್ಲಿ ಆಡಿಸುವ ಬಗ್ಗೆ ಯೋಚನೆ ಮಾಡುವ ಸಾಧ್ಯತೆ ಇದೆ. ಆದರೆ, ಏಕದಿನ ವಿಶ್ವಕಪ್ 2023ಕ್ಕೆ ಸಿದ್ಧತೆಯ ಹಿನ್ನಲೆಯಲ್ಲಿ ಟಿ20 ಸರಣಿಗಿಂತ ಏಕದಿನ ಪಂದ್ಯಗಳಲ್ಲಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications