Jasprit Bumrah: ಜಸ್ಪ್ರಿತ್ ಬುಮ್ರಾ ಐಪಿಎಲ್‌ನಲ್ಲಿ ಹೊಸ ರೆಕಾರ್ಡ್
ಮಂಗಳವಾರ ಮುಂಬೈನ ವಾಂಖೇಡೆ ಅಂಗಳದಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ ವಿರೋಚಿತ ಸೋಲು ಕಂಡಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ ಗುಜರಾತ್ ಟೈಟನ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಬಿಗುವಿನ ದಾಳಿ ನಡೆಸಿ ಎಲ್ಲರ ಗಮನ ಸೆಳೆದರು. ಜಸ್ಪ್ರಿತ್ ಬುಮ್ರಾ ಅಮೋಘ ದಾಳಿಯನ್ನು ಸಂಘಟಿಸಿದರೂ ಸಹ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಜಸ್ಪ್ರಿತ್ ಬುಮ್ರಾ ಅಮೋಘ ದಾಳಿ ನಡೆಸಿ ತಂಡಕ್ಕೆ ನೆರವಾಗಿದ್ದಾರೆ. ಇವರು ಗುಜರಾತ್ ತಂಡದ ಬ್ಯಾಟರ್‌ಳನ್ನು ಕಟ್ಟಿ ಹಾಕಿ ಗೆಲುವಿನಲ್ಲಿ ಮಿಂಚಬೇಕಿತ್ತು. ಆದರೆ ಕೊನೆಯ ಓವರ್‌ನಲ್ಲಿ ದೀಪಕ್ ಚಹಾರ್
15 ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ವಿಫಲರಾದ್ರು. ಈ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರು. ಆದರೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಜಯ ಸಾಧಿಸದೇ ಇರುವುದೇ ಬೇಸರದ ಸಂಗತಿ. ಆದರೆ ಬುಮ್ರಾ ದೊಡ್ಡ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ 3 ವಿಕೆಟ್‌ಗಳ ಅಮೋಘ ಜಯ ದಾಖಲಿಸಿತು. ಈ ಪಂದ್ಯಕ್ಕೆ ಮಳೆ ಹಲವು ಬಾರಿ ಕಾಟ ನೀಡಿತು. ಈ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಸಖತ್ ಸೆಟ್‌ಅಪ್ ಮಾಡಿ ಶುಭಮನ್ ಗಿಲ್ ಅವರಿಗೆ ಮನೆಯ ಹಾದಿ ತೋರಿಸಿದರು. ಬಳಿಕದ ಇದೇ ಓವರ್‌ನಲ್ಲಿ ಶಾರೂಕ್ ಖಾನ್ ಗೂ ಪೆವಿಲಿಯನ್‌ಗೆ ಅಟ್ಟಿದರು. ಈ ವೇಳೆ ಮುಂಬೈ ಗೆಲ್ಲಬಹುದು ಎಂದು ಎಲ್ಲರು ಭಾವಿಸಿದ್ದರು. ಈ ವೇಳೆ ಮಳೆ ಬಂದಿತು. ಆಗ ಇನ್ನು 2 ಓವರ್ ಬಾಕಿ ಇದ್ದವು. ಆದರೆ ಮಳೆ ಬಂದಿದ್ದರಿಂದ ಓವರ್‌ಗಳಿಗೆ ಕತ್ತರಿ ಹಾಕಲಾಯಿತು. ಪರಿಣಾಮ 19 ಓವರ್‌ಗೆ ಇಳಿಸಲಾಯಿತು.. ಆಗ ಟೈಟಾನ್ಸ್ ಸ್ಥಿರ ಪ್ರದರ್ಶನ ನೀಡಿ ಅಗತ್ಯ 15 ರನ್ ಕಲೆ ಹಾಕಿ ಮಿಂಚಿತು.
ಜಸ್ಪ್ರಿತ್ ಬುಮ್ರಾ ದಾಖಲೆ
ಈ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಹೊಸ ದಾಖಲೆಯನ್ನು ಬರೆದಿದ್ದಾರೆ. ಬುಮ್ರಾ ಗುಜರಾತ್ ವಿರುದ್ಧ 4 ಓವರ್ ಬೌಲಿಂಗ್ ನಡೆಸಿ 2 ಪ್ರಮುಖ ವಿಕೆಟ್ ಪಡೆದರು. ಅಲ್ಲದೆ ಇದೇ ವೇಳೆ 15 ಡಾಟ್ ಬೌಲ್‌ಗಳನ್ನು ಎಸೆದರು. ಇದರಲ್ಲಿ 6 ಡಾಟ್ ಬೌಲ್‌ಗಳು ಡೆತ್ ಓವರ್‌ಗಳಲ್ಲಿ ಬಂದಿದ್ದವು. ಈ ಮೂಲಕ ಜಸ್ಪ್ರಿತ್ ಬುಮ್ರಾ ಡೆತ್ ಓವರ್‌ಗಳಲ್ಲಿ ಮತ್ತೊಂದು ದಾಖಲೆಯನ್ನು ಬರೆದರು. ಡೆತ್ ಓವರ್‌ಗಳಲ್ಲಿ ಬುಮ್ರಾ 400ಕ್ಕೂ ಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಹಿರಿಮೆಗೆ ಪಾತ್ರರಾದರು.
ಈ ಮೂಲಕ ಜಸ್ಪ್ರಿತ್ ಬುಮ್ರಾ ಐಪಿಎಲ್‌ನ ಡೆತ್ ಓವರ್‌ಗಳಲ್ಲಿ ಹೆಚ್ಚಿನ ಡಾಟ್ ಬೌಲ್‌ಗಳನ್ನು ಎಸೆದ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ 400ಕ್ಕೂ ಹೆಚ್ಚು ಡಾಟ್ ಬೌಲ್‌ಗಳನ್ನು ಡೆತ್ ಓವರ್‌ಗಳಲ್ಲಿ ಮಾಡಿದ್ದಾರೆ. ಜಸ್ಪ್ರಿತ್ 402 ಡಾಟ್ ಬೌಲ್ ಮಾಡಿದ್ದಾರೆ.
ಡೆತ್ ಓವರ್‌ಗಳಲ್ಲಿ ಅತಿ ಹೆಚ್ಚು ಡಾಟ್ ಬಾಲ್
402 - ಜಸ್ಪ್ರೀತ್ ಬುಮ್ರಾ
365 - ಭುವನೇಶ್ವರ್ ಕುಮಾರ್
345 - ಡ್ವೇಯ್ನ್ ಬ್ರಾವೋ
323 - ಲಸಿತ್ ಮಾಲಿಂಗ
279 - ಸುನಿಲ್ ನರೈನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications