Jasprit Bumrah ಮುಡಿಗೆ ಪಂದ್ಯ ಶ್ರೇಷ್ಠ ಗರಿ: ಇಲ್ಲಿದೆ ಫೈನಲ್‌ನಲ್ಲಿ ಪ್ರಶಸ್ತಿ ಪಡೆದ ಆಟಗಾರರ ಪಟ್ಟಿ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೂರ್ಯಪಡೆ ಅಬ್ಬರಿಸಿದೆ. ತವರಿನಲ್ಲಿ ಅಬ್ಬರಿಸಿದ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ ಹಾಗೂ ಸಂಜು ಸ್ಯಾಮ್ಸನ್ ಅಮೋಘ ಪ್ರದರ್ಶನ ನೀಡಿದರು. ಆದರೆ ಈ ಪಂದ್ಯದಲ್ಲಿ ಸೂಪರ್ ಬೌಲಿಂಗ್‌ನಲ್ಲಿ ಸೂಪರ್ ಪ್ರದರ್ಶನ ನೀಡಿದ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಹಮದಾಬಾದ್‌ನಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದ ಭಾರತ ಇತಿಹಾಸ ನಿರ್ಮಿಸಿದೆ. ತವರಿನಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಹೆಗ್ಗಳಿಕೆ ಭಾರತ ತಂಡದ್ದಾಗಿದೆ. ಟೂರ್ನಿಯುದ್ದಕ್ಕೂ ಬಿಗುವಿನ ಬೌಲಿಂಗ್ ದಾಳಿಯನ್ನು ನಡೆಸಿದ ಜಸ್ಪ್ರೀತ್ ಬುಮ್ರಾ ಅವರಿಗೆ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ. ಈ ಮೂಲಕ ಜಸ್ಪ್ರೀತ್ ಬುಮ್ರಾ ಇತಿಹಾಸ ನಿರ್ಮಿಸಿದ್ದಾರೆ.

ಟೀಮ್ ಇಂಡಿಯಾ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ರಚಿನ್ ರವೀಂದ್ರ, ಜೇಮ್ಸ್ ನೀಶಮ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್ ಅವರ ವಿಕೆಟ್ ಪಡೆದ ಬುಮ್ರಾ ಅಬ್ಬರಿಸಿದರು. ಈ ಮೂಲಕ ಬುಮ್ರಾ ಇರ್ಫಾನ್ ಪಠಾಣ್, ವಿರಾಟ್ ಕೊಹ್ಲಿ ಅವರ ವಿಶೇಷ ಕ್ಲಬ್‌ಗೆ ಸ್ಥಾನ ಪಡೆದರು.
ಟೀಮ್ ಇಂಡಿಯಾದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದರು. 32 ವರ್ಷದ ಬುಮ್ರಾ ಈ ಟೂರ್ನಿಯಲ್ಲಿ ಆರ್ಭಟ ನಡೆಸಿದರು. ಇವರು ಆಡಿದ 8 ಪಂದ್ಯಗಳಲ್ಲಿ 12.42ರ ಸರಾಸರಿಯಲ್ಲಿ 14 ವಿಕೆಟ್ ಪಡೆದು ಎದುರಾಳಿಗಳಿಗೆ ಕಾಟ ನೀಡಿದರು. ಇವರು ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು. ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿ ಇಲ್ಲಿದೆ.
ಟಿ20 ವಿಶ್ವಕಪ್ ಫೈನಲ್‌ನಲ್ಲಿ ಪಂದ್ಯ ಪ್ರಶಸ್ತಿ ಗೆದ್ದ ಆಟಗಾರರು
2007, ಇರ್ಫಾನ್ ಪಠಾಣ (ಭಾರತ)
2009, ಶಾಹೀದ್ ಅಫ್ರಿದಿ (ಪಾಕಿಸ್ತಾನ)
2010, ಕ್ರೇಗ್ ಕೀಸ್‌ವೆಟ್ಟರ್ (ಇಂಗ್ಲೆಂಡ್)
2012, ಮರ್ಲಾನ್ ಸ್ಯಾಮುಯೆಲ್ಸ್ (ವೆಸ್ಟ್ ಇಂಡೀಸ್)
2014, ಕುಮಾರ್ ಸಂಗಾಕ್ಕರ (ಶ್ರೀಲಂಕಾ)
2016, ಮರ್ಲಾನ್ ಸ್ಯಾಮುಯೆಲ್ಸ್ (ವೆಸ್ಟ್ ಇಂಡೀಸ್)
2021, ಮಿಚೆಲ್ ಮಾರ್ಷ್ (ಆಸ್ಟ್ರೇಲಿಯಾ)
2022, ಸ್ಯಾಮ್ ಕರನ್ (ಇಂಗ್ಲೆಂಡ್)
2024, ವಿರಾಟ್ ಕೊಹ್ಲಿ (ಭಾರತ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications