Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah: ICC ಪ್ರಶಸ್ತಿಗೆ ನಾಮನಿರ್ದೇಶನ ಗೊಂಡ ಬೂಮ್ರಾ, ರೇಸ್‌ನಲ್ಲಿದ್ದಾರೆ ಇಬ್ಬರು

ಟೀಮ್ ಇಂಡಿಯಾ ಕಂಡ ಶ್ರೇಷ್ಠ ಬೌಲರ್‌ಗಳ ಪಟ್ಟಿಯನ್ನು ನೋಡಿದಾಗ ಈ ಪಟ್ಟಿಯಲ್ಲಿ ಜಸ್ಪ್ರಿತ್‌ ಬುಮ್ರಾ ಹೆಸರು ಕಾಣಿಸಿಕೊಳ್ಳುತ್ತದೆ. ಇವರ ಅನ್‌ ಅರ್ಥೋಡಾಕ್ಸ್‌ ಬೌಲಿಂಗ್‌ ಶೈಲಿಯನ್ನು ಬ್ಯಾಟರ್‌ಗಳು ಗುರುತಿಸಿ ದಂಡಿಸುವಲ್ಲಿ ವಿಫಲರಾಗುತ್ತಾರೆ. ಇವರು ಸುಲಭವಾಗಿ ಯಾರ್ಕರ್‌ ಎಸೆಯಬಲ್ಲ ಕ್ಷಮತೆಯನ್ನು ಹೊಂದಿರುವ ಪ್ಲೇಯರ್. ಪಿಚ್ ಯಾವುದೇ ಇರಲಿ, ಜಸ್ಪ್ರಿತ್ ಬುಮ್ರಾ ತಮ್ಮ ಕರಾಮತ್ತು ತೋರಿಸಿಯೇ ಬಿಡುತ್ತಾರೆ. ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗವಾಸ್ಕರ್‌ ಸರಣಿಯಲ್ಲಿ ಜಸ್ಪ್ರಿತ್ ಬುಮ್ರಾ ಅಮೋಘ ಪ್ರದರ್ಶನ ನೀಡಿ ಅಬ್ಬರಿಸಿದ್ದಾರೆ.

ಬಾರ್ಡರ್‌ ಗವಾಸ್ಕರ್ ಸರಣಿಯ ಆಡಿದ ಐದು ಪಂದ್ಯಗಳಲ್ಲಿ 32 ವಿಕೆಟ್‌ ಕಬಳಿಸಿ ಅಬ್ಬರಿಸಿದ್ದಾರೆ. ಐದನೇ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಲಿಲ್ಲ. ಪ್ರಸಕ್ತ ವರ್ಷ ಬುಮ್ರಾ ವಿಕೆಟ್‌ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಐಸಿಸಿ ಅವರನ್ನು ಡಿಸೆಂಬರ್ 2024 ರ ತಿಂಗಳ ಆಟಗಾರನ ತಿಂಗಳ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ. ಇವರೊಂದಿಗೆ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತು ದಕ್ಷಿಣ ಆಫ್ರಿಕಾದ ಡಾನ್ ಪ್ಯಾಟರ್ಸನ್ ಸಹ ಈ ರೇಸ್‌ನಲ್ಲಿದ್ದಾರೆ.

Jasprit Bumrah Shines in Border-Gavaskar Series Leads ICC Player of the Month Nominations

ಬುಮ್ರಾ ಕಮಾಲ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ಆಟಗಾರರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಆದರೆ ಬುಮ್ರಾ ಮಾತ್ರ ತಮ್ಮ ಕರಾರುವಕ್ ದಾಳಿಯ ನೆರವಿನಿಂದ ಅಬ್ಬರಿಸಿದ್ದಾರೆ. ಇವರು ಆಡಿದ ಐದೂ ಪಂದ್ಯಗಳಲ್ಲಿ ಬಿಗುವಿನ ದಾಳಿ ನಡೆಸಿ 14.22ರ ಸರಾಸರಿಯಲ್ಲಿ ವಿಕೆಟ್‌ ಪಡೆದಿದ್ದಾರೆ. ಇವರು ಸರಣಿಯುದ್ದಕ್ಕೂ ಸ್ಥಿರ ಬೌಲಿಂಗ್ ನಡೆಸಿ ಅಬ್ಬರಿಸಿದರು. ಇವರ ಬಿಗುವಿನ ದಾಳಿಯ ನೆರವಿನಿಂದಲೇ ಆಸೀಸ್‌ಗೆ ಟೀಮ್ ಇಂಡಿಯಾ ಹಲವು ಬಾರಿ ಕಾಟ ನೀಡಿದೆ. ಇವರ ಅಮೋಘ ಸಾಧನೆಯ ಫಲವಾಗಿ ಇವರು ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಸದ್ಯ ನಂಬರ್ 1 ಸ್ಥಾನದಲ್ಲಿದ್ದು, ಇವರ ಬುಟ್ಟಿಯಲ್ಲಿ 907 ರೇಟಿಂಗ್ ಪಾಯಿಂಟ್‌ಗಳಿವೆ.

ಪ್ಯಾಟ್‌ ಕಮಿನ್ಸ್‌

ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್‌ ಸಹ ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ಮನಮೋಹಕ ಪ್ರದರ್ಶನ ನೀಡಿದರು. ಅಲ್ಲದೆ ಬ್ಯಾಟಿಂಗ್‌ನಿಂದಲೂ ಇವರು ತಂಡಕ್ಕೆ ನೆರವಾಗಿದ್ದಾರೆ. ಇವರು ಆಡಿರುವ ಐದು ಪಂದ್ಯಗಳಲ್ಲಿ 17.64ರ ಸರಾಸರಿಯಲ್ಲಿ 17 ವಿಕೆಟ್‌ ಪಡೆದು ತಮ್ಮ ಕ್ಷಮತೆಯ ಸಾಬೀತು ಪಡಿಸಿದ್ದಾರೆ. ಮೆಲ್ಬೋರ್ನ್‌ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿದ್ದಾರೆ.

Jasprit Bumrah Shines in Border-Gavaskar Series Leads ICC Player of the Month Nominations

ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದೆ. ಈ ವೇಳೆ ತಂಡದ ಸಂಘಟಿತ ಆಟ ಎದ್ದು ಕಂಡಿದೆ. ದಕ್ಷಿಣ ಆಫ್ರಿಕಾ ಈ ಪ್ರದರ್ಶನದ ಹಿಂದೆ ವೇಗದ ಬೌಲರ್ ಡಾನ್ ಪ್ಯಾಟರ್ಸನ್‌ಗೆ ಸಲ್ಲುತ್ತದೆ. ಇವರು ಡಿಸೆಂಬರ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ 16.92 ಸರಾಸರಿಯಲ್ಲಿ 13 ವಿಕೆಟ್‌ಗಳನ್ನು ಪಡೆದಿದ್ದಾರೆ.

Story first published: Tuesday, January 7, 2025, 18:50 [IST]
Other articles published on Jan 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+