For Quick Alerts
ALLOW NOTIFICATIONS  
For Daily Alerts
 

Melbourne Test: ದಾಖಲೆ ಬರೆಯಲು ಜಸ್ಪ್ರೀತ್ ಬುಮ್ರಾ-ಸ್ಟೀವ್ ಸ್ಮಿತ್ ತಯಾರು

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ ಆರಂಭವಾಗಲಿದೆ. ಈ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರು ದೊಡ್ಡ ಸಾಧನೆಯನ್ನು ಸಾಧಿಸುವ ಸನಿಹದಲ್ಲಿದ್ದಾರೆ. ಈ ಟೆಸ್ಟ್ ಪಂದ್ಯದಲ್ಲಿ ಮಹತ್ವದ ಸಾಧನೆ ಮಾಡುವ ಗುರಿಯೊಂದಿಗೆ ಇಬ್ಬರೂ ದಿಗ್ಗಜರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡುವ ಅವಕಾಶವನ್ನು ಬುಮ್ರಾ ಹೊಂದಿದ್ದಾರೆ. ಇನ್ನು 6 ವಿಕೆಟ್‌ ಕಬಳಿಸುವ ಮೂಲಕ ಬುಮ್ರಾ ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ವಿಕೆಟ್‌ ಪಡೆದ ಸಾಧನೆ ಮಾಡಲಿದ್ದಾರೆ. ಇದಕ್ಕೂ ಮೊದಲು ಕೇವಲ 5 ಭಾರತದ ವೇಗದ ಬೌಲರ್‌ಗಳು ಈ ಸಾಧನೆ ಮಾಡಿದ್ದು, ಕಪಿಲ್ ದೇವ್, ಇಶಾಂತ್ ಶರ್ಮಾ, ಜಾವಗಲ್ ಶ್ರೀನಾಥ್ ಮತ್ತು ಮೊಹಮ್ಮದ್ ಶಮಿ ಹೆಸರಿನಲ್ಲಿದೆ. ಒಟ್ಟಾರೆ 11 ಭಾರತದ ಬೌಲರ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ.

Jasprit Bumrah Steve Smith ready to create record in Melbourne Test

ಸ್ಟೀವ್ ಸ್ಮಿತ್ ಅವರು ಕೂಡ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಅವರಿಗೂ ದಾಖಲೆ ಸೃಷ್ಟಿಸುವ ಅವಕಾಶವಿದೆ. ಅವರು 10000 ಟೆಸ್ಟ್ ರನ್ ಪೂರೈಸಲು 191 ರನ್‌ಗಳ ಅಂತರದಲ್ಲಿದ್ದಾರೆ. ಆಸ್ಟ್ರೇಲಿಯಾ ಪರ 10000 ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಳ್ಳಲು ಸ್ಮಿತ್ ರೆಡಿಯಾಗಿದ್ದಾರೆ. ಆಸೀಸ್‌ ಪರ ಅಲನ್ ಬಾರ್ಡರ್, ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರು 10000 ಟೆಸ್ಟ್ ರನ್ ಗಳಿಸಿದ ಬ್ಯಾಟರ್‌ಗಳಾಗಿದ್ದಾರೆ. ವಿಶೇಷವೆಂದರೆ ಸ್ಮಿತ್ ತಮ್ಮ ವೃತ್ತಿ ಜೀವನದಲ್ಲಿ 6 ಬಾರಿ ಟೆಸ್ಟ್ ಕ್ರಿಕೆಟ್‌ನಲ್ಲಿ 191 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.

ಸೋಲು-ಗೆಲುವಿನ ಲೆಕ್ಕಚಾರ

ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯು ಪ್ರಸ್ತುತ 1-1 ರಲ್ಲಿ ಸಮಗೊಂಡಿದೆ. ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ. ಪರ್ತ್‌ನಲ್ಲಿ ಭಾರತ ಮೊದಲ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಸರಣಿಯನ್ನು ಪ್ರಾರಂಭಿಸಿತು. ಆದರೆ ಆಸ್ಟ್ರೇಲಿಯಾ ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಗೆಲುವಿನೊಂದಿಗೆ ಪುಟಿದೇಳಿತು. ಮಳೆಯಿಂದಾಗಿ ಮೂರನೇ ಟೆಸ್ಟ್ ಡ್ರಾವಾಯಿತು. ಈಗ, ಇನ್ನೂ ಎರಡು ಪಂದ್ಯಗಳು ಬಾಕಿಯಿದ್ದು, ಸರಣಿಯ ಫಲಿತಾಂಶವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಫೈನಲ್‌ಗೆ ಅರ್ಹತೆ ಪಡೆಯುವ ಎರಡೂ ತಂಡಗಳ ಅವಕಾಶಗಳ ಮೇಲೆ ಪರಿಣಾಮ ಬೀರಬಹುದು.

Story first published: Tuesday, December 24, 2024, 11:43 [IST]
Other articles published on Dec 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+