Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Jasprit Bumrah: ಜಸ್ಪ್ರೀತ್‌ ಬುಮ್ರಾ ಯಾವಾಗ ಬೌಲಿಂಗ್ ಮಾಡಿದರೆ ಬೆಸ್ಟ್‌?

ಟೀಮ್ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ತಮ್ಮ ಬಿಗುವಿನ ದಾಳಿಯಿಂದ ಹೆಸರುವಾಸಿ. ತಂಡ ಅಗತ್ಯಕ್ಕೆ ತಕ್ಕಂತೆ ಬುಮ್ರಾ ಅವರ ಜವಾಬ್ದಾರಿ ಬದಲಾಗುತ್ತದೆ. ಕೆಲವೊಮ್ಮೆ ಪವರ್‌ ಪ್ಲೇನಲ್ಲಿ ಕಾಟ ನೀಡುವ ಬುಮ್ರಾ, ಇನ್ನು ಕೆಲವೊಮ್ಮೆ ಮಿಡ್ಲ್‌ ಓವರ್‌ಗಳಲ್ಲಿ ರನ್‌ಗಳಿಗೆ ಕಡಿವಾಣ ಹಾಕುತ್ತಾರೆ. ಹೆಚ್ಚು ಬಾರಿ ಡೆತ್‌ ಓವರ್‌ಗಳಲ್ಲಿ ತಮ್ಮ ಕರಾರುವಾಕ್ ದಾಳಿಯಿಂದ ಇವರು ಎದುರಾಳಿ ಬ್ಯಾಟರ್‌ಗಳಿಗೆ ಕಾಟ ನೀಡುತ್ತಾರೆ.

ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಬುಮ್ರಾ ಮಾರಕ ದಾಳಿ ನಡೆಸಿದರು. ಬುಮ್ರಾ ಅವರ ಶಿಸ್ತು ಬದ್ಧ ದಾಳಿಯ ನೆರವಿನಿಂದ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿ, ಟಿ20 ಸರಣಿಯನ್ನು ವಶಕ್ಕೆ ಪಡೆದಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬುಮ್ರಾ 4 ಓವರ್‌ ಬೌಲಿಂಗ್ ನಡೆಸಿ 17 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು. ಇವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.

Jasprit Bumrah

ಬುಮ್ರಾ ಭಾನುವಾರ ಪವರ್‌ ಪ್ಲೇನ ಕೊನೆಯ ಓವರ್‌, 11ನೇ ಓವರ್‌ ಹಾಗೂ ಡೆತ್‌ ಓವರ್‌ಗಳಲ್ಲಿ ದಾಳಿ ನಡೆಸಿದರು. ತಂಡದ ಅಗತ್ಯಕ್ಕೆ ತಕ್ಕಂತೆ ಬುಮ್ರಾ ಅವರ ಪಾತ್ರ ಸಹ ಬದಲಾಗುತ್ತದೆ. ಇವರು 2025 ಏಷ್ಯಾ ಕಪ್‌ನಲ್ಲಿ ಹೊಸ ಚೆಂಡಿನೊಂದಿಗೆ ಮೂರು ಓವರ್‌ ಬೌಲ್‌ ಮಾಡಿ, ತಂಡಕ್ಕೆ ಮುನ್ನಡೆ ತಂದು ಕೊಡುತ್ತಿದ್ದರು. ಬುಮ್ರಾ ಅವರಿಗೆ ಹಲವು ರೋಲ್‌ ನೀಡುತ್ತಾ ಬಂದಿದ್ದರಿಂದ ಅವರ ಮೇಲಿದ್ದ ಡೆತ್ ಓವರ್‌ ಹೊರೆ ಸಹ ಕೊಂಚ ಕಡಿಮೆ ಆಗುತ್ತಿದೆ.

ಯಾವುದೇ ಪಾತ್ರಕ್ಕೂ ನಾನು ಸಿದ್ಧ

ಜಸ್ಪ್ರೀತ್‌ ಬುಮ್ರಾ ತಮ್ಮ ಪಾತ್ರದ ಬಗ್ಗೆ ಮೂರನೇ ಪಂದ್ಯದ ಬಳಿಕ ಮಾತನಾಡಿದ್ದಾರೆ. ನಾನು ತಂಡದ ಗೆಲುವಿನಲ್ಲಿ ಕಾಣಿಕೆ ನೀಡಿದ್ದು ಖುಷಿ ನೀಡಿದೆ. ತಂಡ ನನಗೆ ಪವರ್‌ ಪ್ಲೇನಲ್ಲಿ ಬೌಲಿಂಗ್ ನೀಡಿದರೂ ಖುಷಿ. ಇಲ್ಲವೇ ಡೆತ್‌ ಓವರ್‌ಗಳ ಜವಾಬ್ದಾರಿ ನೀಡಿದರೂ ಸಂತಸ ಎಂದು ತಿಳಿಸಿದ್ದಾರೆ. ಏಷ್ಯಾ ಕಪ್‌ನಲ್ಲಿ ತಂಡದ ಅಗತ್ಯಕ್ಕೆ ತಕ್ಕಂತೆ ಬೌಲಿಂಗ್ ನಡೆಸಿದ್ದೇನೆ. ಅಲ್ಲದೆ ಪವರ್‌ ಪ್ಲೇನಲ್ಲಿ ಸತತ ಮೂರು ಓವರ್ ಬೌಲಿಂಗ್ ನಡೆಸಿದ್ದೆ. ತಂಡದ ಅಗತ್ಯಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅವಶ್ಯಕ ಎಂದು ಬುಮ್ರಾ ತಿಳಿಸಿದ್ದಾರೆ.

ಬುಮ್ರಾ ಬತ್ತಳಿಕೆಯಲ್ಲಿನ ಅಸ್ತ್ರಗಳು

ಬುಮ್ರಾ ತಮ್ಮ ಬೌಲಿಂಗ್‌ನಲ್ಲಿ ಹಲವು ಮಿಶ್ರಣಗಳನ್ನು ಹೊಂದಿದ್ದಾರೆ. ಇವರ ಕರಾರುವಾಕ್‌ ಯಾರ್ಕರ್‌ಗಳಿಂದ ಎದುರಾಳಿಗಳಿಗೆ ಕಾಡಬಲ್ಲರು. ಅಲ್ಲದೆ ಬ್ಯಾಕ್‌ ಆಫ್‌ ಲೆಂತ್‌, ಕಟರ್, ಸ್ಲೋವರ್‌ ಒನ್‌ ಎಸೆತಗಳು ಬ್ಯಾಟರ್‌ಗೆ ಕಾಟ ನೀಡುತ್ತವೆ. ಯಾವಾಗ ಯಾವ ಎಸೆತವನ್ನು ಬುಮ್ರಾ ಬತ್ತಳಿಕೆಯಿಂದ ಹೊರ ತೆಗೆಯುತ್ತಾರೋ ಎಂಬುದೇ ದೊಡ್ಡ ಪ್ರಶ್ನೆ. ಹೀಗಾಗಿ ಇವರು ವಿಶ್ವದ ಅಪಾಯಕಾರಿ ಬೌಲರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಟಿ20 ವಿಶ್ವಕಪ್‌ ಸಮೀಪಿಸುತ್ತಿದ್ದು ಜಸ್ಪ್ರೀತ್ ಬುಮ್ರಾ ಎದುರಾಳಿಗಳನ್ನು ಕಾಡಲು ಸನ್ನದ್ಧರಾಗಿದ್ದಾರೆ. ತವರಿನಲ್ಲಿ ಅಬ್ಬರದ ಪ್ರದರ್ಶನ ನೀಡಿ ಅಭಿಮಾನಿಗಳನ್ನು ರಂಜಿಸಲು ಬುಮ್ರಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

Story first published: Monday, January 26, 2026, 15:51 [IST]
Other articles published on Jan 26, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+