For Quick Alerts
ALLOW NOTIFICATIONS  
For Daily Alerts
 

Jasprit Bumrah: ಪ್ರತಿಷ್ಠಿತ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ ಭಾಜನ

ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ 2024ರ ವರ್ಷ ಸ್ಮರಣೀಯವಾಗಿದೆ. ಕಳೆದ ವರ್ಷ ಅವರು ಟೀಮ್ ಇಂಡಿಯಾಗೆ ಅಮೂಲ್ಯ ಕೊಡುಗೆ ನೀಡಿದ್ದಲ್ಲದೆ, ಹಲವು ದಾಖಲೆಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಬುಮ್ರಾ ಅವರಿಗೆ ಐಸಿಸಿ 'ವರ್ಷದ ಟೆಸ್ಟ್ ಕ್ರಿಕೆಟಿಗ' ಪ್ರಶಸ್ತಿಯನ್ನು ನೀಡಲಾಗಿದೆ. ಇದೀಗ ಬುಮ್ರಾ ಅವರಿಗೆ ಸರ್ 'ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ'ಯನ್ನೂ ನೀಡಲಾಗುತ್ತಿದೆ. ಇದು ವರ್ಷದ ಅತ್ಯುತ್ತಮ ಕ್ರಿಕೆಟಿಗನಿಗೆ ಐಸಿಸಿ ನೀಡುವ ಗೌರವವಾಗಿದೆ. ಈ ಪ್ರಶಸ್ತಿ ಪಡೆದ ಭಾರತದ 5ನೇ ಆಟಗಾರ ಎಂಬ ಹೆಗ್ಗಳಿಕೆ ಬುಮ್ರಾ ಪಾತ್ರರಾಗಿದ್ದಾರೆ.

ಐಸಿಸಿ ಇತ್ತೀಚೆಗೆ ವರ್ಷದ ಅತ್ಯುತ್ತಮ ಟೆಸ್ಟ್ ತಂಡವನ್ನು ಆಯ್ಕೆ ಮಾಡಿತ್ತು. ಆಡುವ ಹನ್ನೊಂದರ ಬಳಗದಲ್ಲಿ ಜಸ್ಪ್ರೀತ್ ಬುಮ್ರಾ ಹೆಸರು ಇತ್ತು. ಬುಮ್ರಾ ಕುರಿತು ಐಸಿಸಿ ತನ್ನ ಪ್ರಕಟಣೆಯಲ್ಲಿ, 'ಐಸಿಸಿ ಪ್ರಶಸ್ತಿಗಳಲ್ಲಿ ವರ್ಷದ ಅತ್ಯುತ್ತಮ ಪುರುಷ ಕ್ರಿಕೆಟಿಗನಿಗೆ ನೀಡುವ ಸರ್ ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿಗೆ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿದೆ. 2024 ರಲ್ಲಿ, ಅವರು ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ಎದುರಾಳಿ ತಂಡಗಳ ಮೇಲೆ ಒತ್ತಡವನ್ನು ಉಳಿಸಿಕೊಂಡು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ ಎಂದು ಬರೆದುಕೊಂಡಿದೆ.

Jasprit Bumrah to receive Sir Garfield Sobers Award

ಜಸ್ಪ್ರೀತ್ ಬುಮ್ರಾ 7 ವರ್ಷಗಳ ನಂತರ ಸರ್ 'ಗಾರ್ಫೀಲ್ಡ್ ಸೋಬರ್ಸ್ ಪ್ರಶಸ್ತಿ ಪಡೆಯುತ್ತಿರುವ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಬಾರಿ ವಿರಾಟ್ ಕೊಹ್ಲಿಗೆ ಈ ಪ್ರಶಸ್ತಿ ನೀಡಲಾಗಿತ್ತು. ರಾಹುಲ್ ದ್ರಾವಿಡ್ (2004), ಸಚಿನ್ ತೆಂಡೂಲ್ಕರ್ (2010), ರವಿಚಂದ್ರನ್ ಅಶ್ವಿನ್ (2016) ಮತ್ತು ವಿರಾಟ್ ಕೊಹ್ಲಿ (2017 ಮತ್ತು 2018) ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರನ್ನು ಐಸಿಸಿ ಶ್ಲಾಘಿಸಿದೆ. ಬುಮ್ರಾ ಅವರ ಕೌಶಲ್ಯವು ಐಸಿಸಿ ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಪ್ರತಿಫಲಿಸುತ್ತದೆ. ಇದರಲ್ಲಿ ಅವರು 900 ಅಂಕಗಳ ಗಡಿ ದಾಟಿದ್ದಾರೆ. ವರ್ಷದ ಕೊನೆಯಲ್ಲಿ, ಅವರು ತಮ್ಮ ಹೆಸರಿನಲ್ಲಿ 907 ಅಂಕಗಳನ್ನು ಹೊಂದಿದ್ದರು. ಇದು ಶ್ರೇಯಾಂಕದ ಇತಿಹಾಸದಲ್ಲಿ ಯಾವುದೇ ಭಾರತೀಯ ಬೌಲರ್‌ಗೆ ಅತ್ಯಧಿಕವಾಗಿದೆ ಎಂದು ಐಸಿಸಿ ಹೇಳಿದೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾದ ಬೆನ್ನೆಲುಬಾಗಿ ನಿಂತಿದ್ದರು. ಆಡಿದ ಕೇವಲ 4 ಟೆಸ್ಟ್ ಪಂದ್ಯಗಳಲ್ಲಿ 30 ವಿಕೆಟ್‌ಗಳನ್ನು ಬುಮ್ರಾ ಉರುಳಿಸಿದ್ದರು. ಮೆಲ್ಬೋರ್ನ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಆಧಾರದ ಮೇಲೆ ಬುಮ್ರಾ ದಾಖಲೆಯನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಬುಮ್ರಾ
907 ಐಸಿಸಿ ರೇಟಿಂಗ್‌ನೊಂದಿಗೆ ನಂಬರ್-1 ಸ್ಥಾನಕ್ಕೆರಿದ್ದರು.

Story first published: Tuesday, January 28, 2025, 23:21 [IST]
Other articles published on Jan 28, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+