ಟ್ರೋಲ್‌ಗೀಡಾದ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ

ನವದೆಹಲಿ: ಭಾರತ-ಇಂಗ್ಲೆಂಡ್ ಟಿ20ಐ ಸರಣಿಯಿಂದ ಹೊರಗಿರುವ ಭಾರತದ ಪ್ರಮುಖ ವೇಗಿ ಜಸ್‌ಪ್ರೀತ್ ಬೂಮ್ರಾ ಟ್ರೋಲ್‌ಗೀಡಾಗಿದ್ದಾರೆ. ತನ್ನ ಮದುವೆ ಸಮಾರಂಭದ ವೇಳೆ ಬೂಮ್ರಾ ಕುಟುಂಬಸ್ಥರು, ಸ್ನೇಹಿತರು ಪಟಾಕಿ (ನಕ್ಷತ್ರ ಕಡ್ಡಿ) ಹಚ್ಚಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತ್ತು. ಹೀಗಾಗಿ ನೆಟ್ಟಿಗರು ಬೂಮ್ರಾ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
ಮುಂಬೈ ಇಂಡಿಯನ್ಸ್ ಅನುಭವಿ ಬೌಲರ್ ಜಸ್‌ಪ್ರೀತ್ ಬೂಮ್ರಾ ಮತ್ತು ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರ ವಿವಾಹ ಮಾರ್ಚ್ 14ರಂದು ಗೋವಾದಲ್ಲಿ ನಡೆದಿತ್ತು. ಮದುವೆಯ ವಿವಿಧ ಕಾರ್ಯಕ್ರಮಗಳು ಮುಂದಿನ ಮೂರು-ನಾಲ್ಕು ದಿನಗಳು ನಡೆದಿದ್ದವು. ಇದರಲ್ಲಿ ಒಂದು ಕಾರ್ಯಕ್ರಮದ ವೇಳೆ ಬೂಮ್ರಾ ಕುಟುಂಬಸ್ಥರು ಪಟಾಕಿ ಹಚ್ಚಿದ್ದು ಕಾಣಿಸಿತ್ತು.
ಮಾರ್ಚ್ 19ರಂದು ಜಸ್‌ಪ್ರೀತ್ ಬೂಮ್ರಾ ಒಂದು ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದರಲ್ಲಿ ಬೂಮ್ರಾ ಮತ್ತು ಸಂಜನಾ ಜೊತೆಯಾಗಿ ನಡೆಯುತ್ತಿದ್ದರೆ ಸುತ್ತ ನಿಂತಿದ್ದವರು ನಕ್ಷತ್ರ ಕಡ್ಡಿ ಹಚ್ಚಿ ನವ ಜೋಡಿಯ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದರು. ಆ ಚಿತ್ರ ಆಕರ್ಷಕವಾಗಿ ಇತ್ತು ಕೂಡ.
ಬೂಮ್ರಾ ತನ್ನ ಮದುವೆಯ ಕಾರ್ಯಕ್ರಮದಲ್ಲಿ ಪಟಾಕಿ ಹಚ್ಚಿ ಸಂಭ್ರಮಾಚರಿಸಿದರೆ ಅದರಲ್ಲೇನು ವಿಶೇಷ? ಅದಕ್ಯಾಕೆ ಟ್ರೋಲ್ ಎನ್ನುವವರಿರಬಹುದು. ಆದರೆ ಬೂಮ್ರಾ ಕಳೆದ ಬಾರಿ ದೀಪಾವಳಿ ಶುಭಾಶಯ ಹೇಳುವಾಗ ಟ್ರೆಂಡ್‌ನಲ್ಲಿದ್ದ #saynotocrackers ಹ್ಯಾಷ್ ಟ್ಯಾಗ್ ಬಳಸಿದ್ದರು. ಹೀಗಾಗಿ ಪಟಾಕಿ ಸಿಡಿಸಬೇಡಿ ಎಂದ ಬೂಮ್ರಾ ತನ್ನ ಮದುವೆ ಸಮಾರಂಭದಲ್ಲಿ ಪಟಾಕಿ ಸಿಡಿಸಿದ್ದಾರೆ ಎಂದು ನೆಟ್ಟಿಗರು ಕಾಲೆಳೆಯತೊಡಗಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಕೂಡ ಇದೇ ವಿಷಯಕ್ಕೆ ಟ್ರೋಲ್ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications