Jasprit Bumrah: ಜಸ್ಪ್ರಿತ್ ಬುಮ್ರಾ ಮುಡಿಗೆ ICC ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿ
ಜಸ್ಪ್ರಿತ್ ಬುಮ್ರಾ ಅವರಿಗೆ ಗಾಯದ ಮಧ್ಯೆಯೂ ಖುಷಿಯ ಸುದ್ದಿಯೊಂದು ಸಿಕ್ಕಿದೆ. ಈ ಸುದ್ದಿ ನಿಜಕ್ಕೂ ಅವರು ಕಳೆದ ವರ್ಷ ಮೈದಾನದಲ್ಲಿ ತೋರಿದ ಭರ್ಜರಿ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಟೀಮ್ ಇಂಡಿಯಾದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಮುಡಿಗೆ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟ್ ಆಟಗಾರ ಎಂಬ ಪ್ರಶಸ್ತಿಯನ್ನು ನೀಡಿದೆ. ಈ ಪ್ರಶಸ್ತಿಯನ್ನು ಪಡೆದ ಭಾರತದ ಆರನೇ ಆಟಗಾರ ಎಂಬ ಹೆಗ್ಗಳಿಕೆ ಬುಮ್ರ ಅವರ ಪಾಲಾಗಿದೆ.
ಜಸ್ಪ್ರಿತ್ ಬುಮ್ರಾ ಕಳೆದ ವರ್ಷ ಅಮೋಘ ಫಾರ್ಮ್‌ನಲ್ಲಿದ್ದರು. ಅಲ್ಲದೆ ಆಡಿದ 13 ಟೆಸ್ಟ್ ಪಂದ್ಯಗಳಲ್ಲಿ 71 ವಿಕೆಟ್ ಕಬಳಿಸಿ ಮಿಂಚಿದ್ದರು. ಈ ಮೂಲಕ ಭಾರತ ಅತಿ ಹೆಚ್ಚು ವರ್ಷದ ಕ್ರಿಕೆಟ್ ಆಟಗಾರ ಪ್ರಶಸ್ತಿಯನ್ನು ಪಡೆದ, ಆಸ್ಟ್ರೇಲಿಯಾ ತಂಡದ ಸಾಧನೆಯನ್ನು ಸಮನಾಗಿಸಿದೆ. ಆದರೆ ಈ ಪಟ್ಟಿಯಲ್ಲಿ ಸ್ಟೀವನ್ ಸ್ಮಿತ್ ಎರಡು ಬಾರಿ ಗೆದ್ದ ಹಿರಿಮೆ ಹೊಂದಿದ್ದಾರೆ. ಉಳಿದಂತೆ ಯಾವೊಬ್ಬ ಆಟಗಾರ ಈ ಸಾಧನೆ ಮಾಡಿಲ್ಲ. ಬುಮ್ರಾ ಅವರು ಕಳೆದ ವರ್ಷ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಬುಮ್ರಾಗೆ ಪ್ರಶಸ್ತಿ
ಟೀಮ್ ಇಂಡಿಯಾದ ಪರ ಬುಮ್ರಾ 71 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಗಸ್ ಅಟ್ಕಿನ್ಸನ್ 52 ವಿಕೆಟ್ ಪಡೆದಿದ್ದಾರೆ. ಈ ಮೊದಲು ಟೀಮ್ ಇಂಡಿಯಾ ಪರ ರಾಹುಲ್ ದ್ರಾವಿಡ್ (2004), ಗೌತಮ್ ಗಂಭೀರ್ (2009), ವೀರೇಂದ್ರ ಸೆಹ್ವಾಗ್ (2010), ಆರ್. ಅಶ್ವಿನ್ (2016) ಹಾಗೂ ವಿರಾಟ್ ಕೊಹ್ಲಿ (2018) ಈ ಸಾಧನೆ ಮಾಡಿದ್ದರು.
ಗಾಯದ ಬಳಿಕ 2023ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಬುಮ್ರಾ ಕಂ ಬ್ಯಾಕ್ ಮಾಡಿದ್ದಾರೆ. ಈ ಅವಧಿಯಲ್ಲಿ ಬುಮ್ರಾ ಅಮೋಘ ಪ್ರದರ್ಶನ ನೀಡಿದ್ದಾರೆ. ಭಾರತದಲ್ಲಿ ಬುಮ್ರಾ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧ ತಂಡ ಗೆಲುವು ಸಾಧಿಸುವಲ್ಲಿ ಇವರು ಭರ್ಜರಿ ಪ್ರದರ್ಶನ ನೀಡಿದ್ದರು. ಇನ್ನು ಬುಮ್ರಾ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲೂ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು.

ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 357 ಓವರ್‌ಗಳಲ್ಲಿ ಮಾಡಿ 2.96 ಎಕನಾಮಿಯಲ್ಲಿ ಬೌಲಿಂಗ್ ನಡೆಸಿದ್ದರು. ಇವರು ಒಂದೇ ಕ್ಯಾಲೆಂಡರ್ ವರ್ಷದಲ್ಲಿ 70ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇದಕ್ಕೂ ಮೊದಲು ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ, ಆರ್. ಅಶ್ವಿನ್, ಕಪಿಲ್ ದೇವ್ ಈ ಮೊದಲು ಈ ಸಾಧನೆಯನ್ನು ಮಾಡಿದ್ದಾರೆ. ಇವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು.
ಬುಮ್ರಾ ಸಾಧನೆ
ಟೀಮ್ ಇಂಡಿಯಾದ ಪರ ಜಸ್ಪ್ರಿತ್ ಬುಮ್ರಾ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು 205 ವಿಕೆಟ್ ಪಡೆದಿದ್ದಾರೆ. ಈ ವೇಳೆ 7 ಬಾರಿ ನಾಲ್ಕು ವಿಕೆಟ್ ಪಡೆದರೆ, 13 ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications