Jasprit Bumrah: ಇಂಗ್ಲೆಂಡ್ ಬ್ಯಾಟರ್‌ಗಳ ಟೆನ್ಷನ್ ಹೆಚ್ಚಿಸಿದೆ ಬುಮ್ರಾ ಎಸೆತ
ಜೂನ್ 3 ರಂದು ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಈ ಲೀಗ್ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸಕ್ಕಾಗಿ ಈಗಾಗಲೇ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 18 ಜನರ ಪ್ರಕಟಿತ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ರಿಷಭ್ ಪಂತ್ ಈ ಸರಣಿಯಲ್ಲಿ ಉಪನಾಯಕನ ಪಾತ್ರ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯ ವೇಳೆ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರ ಮೇಲೆ ನೆಟ್ಟಿರಲಿವೆ.
ಜಸ್ಪ್ರಿತ್ ಬುಮ್ರಾ ಅವರು ಬೌನ್ಸಿ ಪಿಚ್ ಆಗಿರಲಿ, ಭಾರತದಂತಹ ಟರ್ನಿಂಗ್ ಟ್ರ್ಯಾಕ್‌ಗಳೇ ಆಗಿರಲಿ, ತಮ್ಮ ಕರಾರುವಕ್ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲ ಬೌಲರ್. ಶುಕ್ರವಾರ ಮುಲ್ಲಾನಪುರದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆದಿದೆ. ಇನ್ನು ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಕಾದಾಟ ನಡೆಸಲಿದೆ.

ಎಲಿಮಿನೇಟರ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರ್ಭಟ ನಡೆಸಿತು. ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ ಬಾರಿಸಿದ 81 ರನ್‌ಗಳ ನೆರವಿನಿಂದ ಮಾಜಿ ಚಾಂಪಿಯನ್ 5 ವಿಕೆಟ್ ನಷ್ಟಕ್ಕೆ 228 ರನ್ ಕಲೆ ಹಾಕಿತು. ಬೃಹತ್ ಮೊತ್ತವನ್ನು ಹಿಂಬಾಲಿಸಿದ ಗುಜರಾತ್ ಟೈಟಾನ್ಸ್ ತಂಡದ ಎರಡು ವಿಕೆಟ್‌ಗಳು ಬೇಗನೆ ಬಿದ್ದವು. ಆಗ ಸಾಯಿ ಸುದರ್ಶನ್ ಹಾಗೂ ವಾಷಿಂಗ್ಟನ್ ಸುಂದರ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಬ್ರೇಕ್ ಮಾಡಲು ಮುಂಬೈ ಇಂಡಿಯನ್ಸ್ ತಮ್ಮ ತಂಡದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಅವರಿಗೆ ಚೆಂಡನ್ನು ನೀಡಿತು.
ಸುಂದರ ಬೌಲಿಂಗ್
ಪಂದ್ಯದ 16ನೇ ಓವರ್ ಬೌಲಿಂಗ್ ಮಾಡುವ ನಿರ್ಧಾರವನ್ನು ಜಸ್ಪ್ರಿತ್ ಬುಮ್ರಾ ಮುಂದಾದರು. ಈ ವೇಳೆ ವಾಷಿಂಗ್ಟನ್ ಸುಂದರ್ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದರು. ಈ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 48 ರನ್ ಸಿಡಿಸಿದ್ದಾಗ, ಬುಮ್ರಾ ಕಾಟ ನೀಡಿದರು. ಜಸ್ಪ್ರಿತ್ ಬುಮ್ರಾ ಅವರ 16ನೇ ಓವರ್‌ನ ನಾಲ್ಕನೇ ಎಸೆತಕ್ಕೆ ಉತ್ತರಿಸುವಲ್ಲಿ ವಾಷಿಂಗ್ಟನ್ ವಿಫಲರಾದರು. ಬುಮ್ರಾ ಅವರ ಕ್ಲಾಸಿಕ್ ಯಾರ್ಕರ್‌ಗೆ ಉತ್ತರಿಸುವಲ್ಲಿ ವಾಷಿಂಗ್ಟನ್ ಸುಂದರ್ ವಿಫಲರಾದರು.
ಜಸ್ಪ್ರಿತ್ ಬುಮ್ರಾ ಮುಲ್ಲಾನಪುರ್‌ದಲ್ಲಿ ಎಸೆದ ಆ ಒಂದು ಯಾರ್ಕರ್ ಸಪ್ತಸಾಗರದ ದಾಚೆ ಕುಳಿತು, ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಪ್ಲ್ಯಾನ್ ನಡೆಸುತ್ತಿರುವ ಇಂಗ್ಲೆಂಡ್ ಆಟಗಾರರ ಟೆನ್ಷನ್ ಶುರುವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications