Jasprit Bumrah: ಗಬ್ಬಾ ಟೆಸ್ಟ್‌ನಲ್ಲಿ ಜಸ್ಪ್ರಿತ್ ಬುಮ್ರಾ ಆಡುವುದು ಅನುಮಾನ: ಇಲ್ಲಿದೆ ಕಾರಣ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಡಿಸೆಂಬರ್ 14 ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ. ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಈ ಬಾರಿ ಐದು ಟೆಸ್ಟ್ ಪಂದ್ಯಗಳನ್ನು ಆಡಿಸಲಾಗುತ್ತಿದೆ. ಈಗಾಗಲೇ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಗೆದ್ದಿದ್ದರಿಂದ ಸರಣಿ ಸಮಬಲದಲ್ಲಿ ಸಾಗಿದೆ. ಮೂರನೇ ಟೆಸ್ಟ್‌ಗೂ ಮುನ್ನ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಡೇಮಿಯನ್ ದೊಡ್ಡ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಫ್ಲೆಮಿಂಗ್ ಹೇಳಿದ್ದಾದರೂ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ತಕ್ಷಣವೇ ಮೈದಾನಕ್ಕೆ ಫಿಸಿಯೋ ಬಂದು ವೇಗಿಗೆ ಚಿಕಿತ್ಸೆ ನೀಡಿದರು. ಪರಿಣಾಮ ಬುಮ್ರಾ, ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಮೋರ್ನೆ ಮೊರ್ಕೆಲ್ ಫಿಟ್ ಎಂದು ಘೋಷಿಸಿದರು. ಅಡಿಲೇಡ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮೊದಲ ಇನಿಂಗ್ಸ್‌ನ 81 ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದರು.

ಅಭ್ಯಾಸಕ್ಕೆ ಬುಮ್ರಾ ಗೈರು
ಆಡಿಲೇಡ್‌ನಲ್ಲಿ ನಡೆದ ಟೆಸ್ಟ್ ಪಂದ್ಯ ಬೇಗ ಮುಗಿದ ಬೆನ್ನಲ್ಲೆ, ಟೀಮ್ ಇಂಡಿಯಾದ ಆಟಗಾರರು ಇಲ್ಲೇ ಅಭ್ಯಾಸವನ್ನು ಆರಂಭಿಸಿದರು. ಈ ವೇಳೆ ಜಸ್ಪ್ರಿತ್ ಬುಮ್ರಾ ಒಂದು ದಿನವೂ ಅಭ್ಯಾಸಕ್ಕೆ ಹಾಜರಾಗದೇ ಇದ್ದಿರುವುದು ಕುತೂಹಲ ಮೂಡಿಸಿದೆ. ಟೀಮ್ ಮ್ಯಾನೇಜ್ಮೆಂಟ್ ಇವರ ಗಾಯವನ್ನು ಮರೆ ಮಾಚುತ್ತಿದೆ. ವರದಿಗಳನ್ನು ನಂಬಿದರೆ, ಕಳೆದ ವಾರ ಬುಮ್ರಾ ಯಾವುದೇ ನೆಟ್ಸ್ ಅಭ್ಯಾಸದಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿದು ಬಂದಿದೆ.
ಬುಮ್ರಾ ಫಿಟ್ನೆಸ್ ಬಗ್ಗೆ ಯಾರು ಏನು ಹೇಳಿದರು?
ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಫ್ಲೆಮಿಂಗ್‌ಗೆ ನೀಡಿದ ಸಂದರ್ಶನದಲ್ಲಿ, "ಜಸ್ಪ್ರಿತ್ ಬುಮ್ರಾ ಅವರ ಫಿಟ್ ಆಗಿರುವ ಬಗ್ಗೆ ಹಲವು ಅನುಮಾನಗಳು ಇವೆ. ಟೀಮ್ ಮ್ಯಾನೇಜ್ಮೆಂಟ್ ಅವರ ಫಿಟ್ನೆಸ್ ಬಗ್ಗೆ ಮರೆಮಾಚುತ್ತಿದೆ ಎಂದು ಸೇನ್ ರೇಡಿಯೋಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇದರ ಹೊರತಾಗಿಯೂ ಜಸ್ಪ್ರಿತ್ ಬುಮ್ರಾ ನೋವನ್ನು ನುಂಗಿ ಹೇಗೆ ಬೌಲಿಂಗ್ ನಡೆಸಿದರು ಎಂಬುದು ಗೊತ್ತಿಲ್ಲ. ಇನ್ನು ಮೊಹಮ್ಮದ್ ಸಿರಾಜ್ ಅವರ ಹೆಗಲಿಗೆ ಹೆಚ್ಚಿನ ಹೊಣೆ ಬೀಳಲಿದೆ ಎಂದು ಫ್ಲೆಮಿಂಗ್ ತಿಳಿಸಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿರುವ ಈ ಸರಣಿಯ ಫಲಿತಾಂಶ ಟೀಮ್ ಇಂಡಿಯಾದ ಫೈನಲ್ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಮುಂದಿನ ವರ್ಷ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯಲಿದೆ. ಈ ಸರಣಿಯ ಟೀಮ್ ಇಂಡಿಯಾ 4-1ರಿಂದ ಗೆದ್ದು ಕೊಂಡರೆ, ಸುಲಭವಾಗಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ನಾಲ್ಕಕ್ಕಿಂತ ಕಡಿಮೆ ಪಂದ್ಯಗಳನ್ನು ಗೆದ್ದಲ್ಲಿ, ಭಾರತ ಉಳಿದ ಪಂದ್ಯಗಳ ಮೇಲೆ ಅವಲಂಬಿತವಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾಕ್ಕೆ ಜಸ್ಪ್ರಿತ್ ಬುಮ್ರಾ ಅವರ ಉಪಸ್ಥಿತಿ ತಂಡಕ್ಕೆ ಅನಿವಾರ್ಯ. ಇವರು ತಂಡದಲ್ಲಿದ್ದರೆ, ಎದುರಾಳಿಗಳಿಗೆ ನಡುಕ ಹುಟ್ಟುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications