ಮುಂಬೈ ಇಂಡಿಯನ್ಸ್ ತಂಡ 18ನೇ ಆವೃತ್ತಿಯ ಐಪಿಎಲ್ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಈ ವೇಳೆ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತಿದ್ದ ಮುಂಬೈ, ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಈ ವೇಳೆ ಮುಂಬೈ ತಂಡಕ್ಕೆ ಜಸ್ಪ್ರಿತ್ ಬುಮ್ರಾ ಅವರ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ಯಾರ್ಕರ್ ಸ್ಪೇಷಲಿಸ್ಟ್ ಗಾಯಕ್ಕೆ ತುತ್ತಾಗಿದ್ದು ಎಂಐ ತಂಡಕ್ಕೆ ಬಹುವಾಗಿ ಕಾಡಿತು.
ಮುಂಬೈ ತಂಡಕ್ಕೆ ವೇಗಿ ಜಸ್ಪ್ರಿತ್ ಬುಮ್ರಾ ಅವರ ಅನುಪಸ್ಥಿತಿ ಆರಂಭಿಕ ಎರಡೂ ಪಂದ್ಯಗಳಲ್ಲಿ ಬಹುವಾಗಿ ಕಾಡಿತ್ತು. ಮೊದಲಿನ ಸುದ್ದಿಯನ್ನು ನಂಬುವದಾಗಿದ್ದರೆ ಬುಮ್ರಾ ಮುಂಬೈ ಪರ ಮೂರು ಪಂದ್ಯಗಳಿಂದ ದೂರ ಉಳಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿತ್ತು. ಆದರೆ ಈಗ ಬರುತ್ತಿರುವ ಸುದ್ದಿಯ ಪ್ರಕಾರ ಬುಮ್ರಾಗಾಗಿ ಮುಂಬೈ ತಂಡ ಇನ್ನು ಕೊಂಚ ದಿನ ಕಾಯುವ ಅನಿವಾರ್ಯತೆ ಇದೆ. ಬುಮ್ರಾ ಮುಂದಿನ ವಾರದಲ್ಲಿ ತಮ್ಮ ಮೊದಲ ಐಪಿಎಲ್ ಪಂದ್ಯವನ್ನು ಆಡುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ಪ್ರವಾಸದ ಐದನೇ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆ ಅನುಭವಿಸಿದ್ದರಿಂದ ಬುಮ್ರಾ, ಸಿಡ್ನಿ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಇವರು ಅಷ್ಟೇ ಅಲ್ಲದೆ ಇನ್ನೋಬ್ಬ ಬೌಲರ್ ಆಕಾಶ್ ದೀಪ್ ಸಹ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇವರಿಬ್ಬರೂ ಗಾಯಕ್ಕೆ ತುತ್ತಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡ ಆಕಾಶ್ ದೀಪ್ ಅವರ ಮರಳುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದೆ. ಇವರ ಉಪಸ್ಥಿತಿ ತಂಡಕ್ಕೆ ವರದಾನವಾಗಲಿದೆ.
ಐಪಿಎಲ್ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಬುಮ್ರಾ ಚೇತರಿಸಿಕೊಳ್ಳುವುದು ತುಂಬಾ ಅನಿವಾರ್ಯ. ಅಲ್ಲದೆ ಬಿಸಿಸಿಐ ವೈದ್ಯಕೀಯ ತಂಡ ಸಹ ಇದೇ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದೆ. ಇನ್ನು ಇಂಗ್ಲೆಂಡ್ ಪ್ರವಾಸದಲ್ಲಿ ಎಲ್ಲ ಪಂದ್ಯಗಳಲ್ಲಿ ಬುಮ್ರಾ ಆಡದೇ ಇದ್ದರೂ 2 ರಿಂದ 3 ಪಂದ್ಯಗಳಲ್ಲಾದ್ರೂ ಆಡಲು ಲಭ್ಯರಾದಲ್ಲಿ ತಂಡಕ್ಕೆ ಬೂಸ್ಟ್ ಸಿಕ್ಕಂತೆ ಆಗಲಿದೆ.

ಬಿಸಿಸಿಐ ಮೂಲಗಳ ಪ್ರಕಾರ ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರಿತ್ ಬುಮ್ರಾ ಅವರ ಗಾಯ ಗಂಭೀರವಾಗಿದೆ. ಈ ನಿಟ್ಟಿನಲ್ಲಿ ಬಿಸಿಸಿಐ ಯಾವುದೇ ರಿಸ್ಟ್ ತೆಗೆದುಕೊಳ್ಳಲು ಬಯಸುವುದಿಲ್ಲ. ಇನ್ನು ಈ ಬಗ್ಗೆ ಬುಮ್ರಾ ಸಹ ಜಾಗರೂಕರಾಗಿ ಇರುತ್ತಾರೆ. ಅವರು ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇವರು ಮುಂಬೈ ಇಂಡಿಯನ್ಸ್ ತಂಡವನ್ನು ಸೇರಲು ಇನ್ನು ಹೆಚ್ಚು ಸಮಯ ಬೇಕಾಗಬಹುದು. ಏಪ್ರಿಲ್ ಮಧ್ಯದ ವೇಳೆಗೆ ಬುಮ್ರಾ ಹಾಗೂ ಆಕಾಶ್ ದೀಪ್ ಇಬ್ಬರೂ ತಮ್ಮ ತಮ್ಮ ತಂಡವನ್ನು ಸೇರಿಕೊಳ್ಳಬಹುದು ಎಂದು ತಿಳಿದು ಬಂದಿದೆ.